Sunday, 27th October 2024

ಸೀಲ್ ಡೌನ್ ಪ್ರದೇಶ ನಿಯಂತ್ರಣಕ್ಕೆ ಕಮಾಂಡರ್ಸ್ ನೇಮಕ

ದಾವಣಗೆರೆ:

ನಿಜಲಿಂಗಪ್ಪ ಲೇಔಟ್ ಕೊವೀಡ್-19 ಸೋಂಕಿತ ವ್ಯಕ್ತಿಯ ಮನೆಯ ಸುತ್ತ ಮುತ್ತಲಿನ 100 ಮೀಟರ್ ಪ್ರದೇಶವನ್ನು ಈಗಾಗಲೇ ಸೀಲ್‍ಡೌನ್ ಮಾಡಲಾಗಿದ್ದು, ಅದನ್ನು ನಿಯಂತ್ರ್ರಿತ ಪ್ರದೇಶ ಎಂದು ಗುರುತಿಸಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರನ್ನು ಘಟಕ ನಿಯಂತ್ರಕರಾಗಿ (ಕಮಾಂಡರ್) ನಿಯೋಜನೆ ಮಾಡಲಾಗಿದೆ.

ಸೋಮವಾರ ದಾವಣಗೆರೆ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಘಟನಾ ಕಮಾಂಡರ್ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ನಿಯಂತ್ರಣ ವಲಯಕ್ಕೆ ಸಂಬಂದಿಸಿದಂತೆ ಯಾವರೀತಿ ಸಂಪೂರ್ಣ ಸೀಲ್‍ಡೌನ್ ನಿಯಮಾವಳಿಗಳನ್ನು ಅನುಸರಿಸಬೇಕು ಎಂಬವುದರ ಕುರಿತು ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಸಿಟಿವ್ ಪ್ರಕರಣ ಹೊಂದಿರುವ ಜಿಲ್ಲೆಗಳಲ್ಲಿ 28 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದಿರುವ ಪ್ರದೇಶವನ್ನು ನಿಯಂತ್ರಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ ಈ ನಿಯಂತ್ರಿತ ಪ್ರದೇಶದಲ್ಲಿ ವಿವಿಧ ಇಲಾಖೆಗಳ ಪಾತ್ರ ಕುರಿತು ಯಾವರೀತಿ ಕಟ್ಟುನಿಟಿನ ಕ್ರಮಗಳನ್ನು ಕೈಗೊಳ್ಳಬೇಕು ಹೇಗೆ ನಿಯಂತ್ರಿಸಬೇಕು ಎಂದು ಚರ್ಚಿಸಿ, ಸೂಚನೆಗಳನ್ನು ನೀಡಿದರು.

ಪೊಲೀಸ್ ಇಲಾಖೆ :ನಿಯಂತ್ರಿತ ವಲಯದ ಎಲ್ಲಾ ಪ್ರವೇಶ ದ್ವಾರಗಳನ್ನು ಶಾಶ್ವತವಾಗಿ ತೆಡೆಗೋಡೆ ಹಾಕುವ ಮೂಲಕ ಪೊಲೀಸ್ ನಾಕಾಬಂಧಿ ಮಾಡಬೇಕು. ನಿಯಂತ್ರಿತ ಪ್ರದೇಶದಲ್ಲಿ ಯಾವುದೇ ವ್ಯಕ್ತಿ ಯಾವುದೇ ವಿವಿಧ ಉದ್ದೇಶಗಳಿಂದ ಮನೆಯಿಂದ ಹೊರೆಗೆ ಬರಲು ಅವಕಾಶ ನೀಡಬಾರದು ಪ್ರತಿಯೊಂದು ವಲಯದಲ್ಲಿ ಒಂದೇ ಒಂದು ಪ್ರವೇಶ ಮತ್ತು ನಿರ್ಗಮನ ದ್ವಾರವಿರಬೇಕು. ನಿಯಂತ್ರಿತ ವಲಯದ ಒಳಗೆ ಮತ್ತು ಹೊರಗೆ ಖಾಸಗಿ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಇಡೀ ಪ್ರದೇಶವÀನ್ನು ಸಂಪೂರ್ಣವಾಗಿ ಸೀಲ್ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಮತ್ತು ಅಗತ್ಯ ಸೇವೆಗಳು, ವೈದ್ಯಕೀಯ ತುರ್ತು ಸಂದರ್ಭಗಳಿಗೆ ಪೊಲೀಸ್ ಎಮರ್ಜೆನ್ಸಿ ಪಾಸ್‍ಗಳನ್ನು ನೀಡುವುದು. ನಿಯಂತ್ರಿತ ವಲಯದಲ್ಲಿ ಸಂಪೂರ್ಣ ಲಾಕ್‍ಡೌನ್ ಖಾತರಿ ಪಡಿಸಲು ಡ್ರೋನ್‍ಗಳನ್ನು ಬಳಸಬೇಕು ಎಂದರು.

ಆರೋಗ್ಯ ಇಲಾಖೆ : ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಜಂಟಿಯಗಿ ಮತ್ತು ಮುನ್ನೆಚ್ಚರಿಕೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ನಿಯಂತ್ರಿತ ವಲಯದಲ್ಲಿ ಆರೋಗ್ಯ ಔಟ್ ಪೋಸ್ಟ್ ಆರಂಭಿಸಿ ಓರ್ವ ವ್ಯೆದ್ಯ ಹಾಗೂ ಸತತ ಐಇಸಿ ಪ್ರಚಾರದ ಜೊತೆಗೆ ದಿನಕ್ಕೆ ಎರಡು ಭಾರಿ ಜನಸಂಪರ್ಕಗಳ ಪತ್ತೆ ಕಾರ್ಯಕ್ಕೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು.

ಜನಸಂಪರ್ಕ ನಿಗಾ ಪತ್ತೆ ಕಾರ್ಯವನ್ನು ಶಿಷ್ಠಾಚಾರದ ನಿಯಮಗಳ ಪ್ರಕಾರ ನಡೆಸಬೇಕು ಹೆಚ್ಚಿನ ರಿಸ್ಕ್ ಸಂಪರ್ಕದ ವ್ಯಕ್ತಿಗಳನ್ನು ತಕ್ಷಣವೇ ಸಾಂಸ್ಥಿಕ ದಿಗ್ಬಂದನ ಕೇಂದ್ರಕ್ಕೆ ರವಾನಿಸುವ ಹಾಗೂ ಕಡಿಮೆ ಸಂಪರ್ಕದ ವ್ಯಕ್ತಿಗಳನ್ನು ಗೃಹ ದಿಗ್ಬಂದನಕ್ಕೆ ಒಳಪಡಿಸಬೇಕು ಅಧಿಕ ಅಪಾಯ ಮತ್ತು ಕಡಿಮೆ ಅಪಾಯವಿರುವ ವ್ಯಕ್ತಿಗಳಿಂದ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುವ ಹೊಣೆಗಾರಿಕೆ ಆರೋಗ್ಯ ಇಲಾಖೆ ತಂಡದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಇಲಾಖೆಗಳು ಕ್ರಮ ವಹಿಸಬೇಕು ಎಂದರು.

ಮಹಾನಗರಪಾಲಿಕೆ :ನೈರ್ಮಲಿಕರಣದ ನಿರ್ವಹಣೆ ಮಾಡುವುದು ಪ್ರತಿದಿನವೂ ಘನತ್ಯಾಜ್ಯ ನಿರ್ವಹಣೆ ಮತ್ತು ಸೋಂಕು ನಿವಾರಣೆ ಮಾಡುವ ಕೆಲಸವನ್ನು ನಿರ್ವಹಿಸತಕ್ಕದ್ದು ಮತ್ತು ಕುಡಿಯುವ ನೀರಿನ ಸರಬರಾಜು ಮಾಡುವ ಕೆಲಸವನ್ನು ಮಾಡಬೇಕು ಅಗತ್ಯವಿರುವವರಿಗೆ ಆಹಾರ ಪೊಟ್ಟಣಗಳು ಮತ್ತು ಪಡಿತರವನ್ನು ಒದಗಿಸುವುದು ಮತ್ತು ಕಾರ್ಯನಿರ್ವಹಿಸಲು ಸರ್ಕಾರಿ ಗುರುತಿನ ಪತ್ರಗಳನ್ನು ಸಿಬ್ಬಂದಿಗೆ ನೀಡಬೇಕು. ಇವರನ್ನು ಹೊರತು ಪಡಿಸಿ ಬೇರೆಯವರಿಗೆ ಪ್ರವೇಶವನ್ನು ನಿರ್ಭಂದಿಸಬೇಕು ಎಂದು ಸೂಚಿಸಿದರು.

ಕಂದಾಯ ಇಲಾಖೆ :ನಿಯಂತ್ರಿತ ವಲಯವನ್ನು ಸಂಪೂರ್ಣ ಸೀಲ್ ಮಾಡುವುದರರಿಂದ ಜನ ಮನೆಗಳಿಂದ ಯಾವ ಕಾರಣಕ್ಕೂ ಹೊರಗೆ ಬರುವಂತಿಲ್ಲ ಹಾಗೂ ಜನರಿಗೆ ಅಗತ್ಯ ವಸ್ತು ದಿನಸಿ ಪದಾರ್ಥಗಳು ಮಾಂಸ ಹಾಲು ಎಲ್.ಪಿ.ಜಿ. ಅನಿಲ ಔಷಧಿಗಳನ್ನು ಪೂರೈಸುವವರಿಗೆ ಪಾಸ್ ಕೊಡಬೇಕು ಅಗತ್ಯ ಸೇವೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನಿಗಾವಹಿಸಬೇಕು ಮತ್ತು ಪಡಿತರ ಚೀಟಿ ಹೊಂದಿರುವವರಿಗೆ ನ್ಯಾಂiÀiಬೆಲೆ ಅಂಗಡಿಗಳು ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸುವವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ನಗರ ಆರೋಗ್ಯ ಕುಟುಂಬ ಕಲ್ಯಾಣ ಕೇಂದ್ರದ ವೈದ್ಯರಾದ ಡಾ.ವೆಂಕಟೇಶ್, ಡಾ.ನಾಗರಾಜ್, ಡಾ. ಸುಧೀಂದ್ರ ಮಹಾನಗರ ಪಾಲಿಕೆ ಆರೋಗ್ಯ ನೀಕ್ಷಕರಾದ ರಾಜಪ್ಪ, ಮದುಶ್ರೀ, ಬಡಾವಣೆ ಪೊಲೀಸ್ ಠಾಣೆ ಎ.ಎಸ್.ಐ ಮಂಜುನಾಥ ಸ್ವಾಮಿ, ಕಂದಾಯ ಇಲಾಖೆ ಸಿಬ್ಬಂದಿ ಮಂಜುನಾಥ ಡಿ, ಅಂಜನಪ್ಪ ಮತ್ತು ಉಪೇಂದ್ರ ಹಾಜರಿದ್ದರು.