Friday, 13th December 2024

ಸೋಮವಾರ 308 ಜನರಿಗೆ ಸೋಂಕು

ಬೆಂಗಳೂರು:
ರಾಜ್ಯದಲ್ಲಿ ಭಾನುವಾರ ಸಂಜೆ 5 ಗಂಟೆಯಿಂದ ಸೋಮವಾರ ಸಂಜೆ 5 ಗಂಟೆ ಅವಧಿಯಲ್ಲಿ 308 ಜನರಿಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 5760 ಕ್ಕೆ ಏರಿಕೆ ಕಂಡಂತಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 99, ಯಾದಗಿರಿ 66, ಬೀದರ್ 48, ಉಡುಪಿ ಜಿಲ್ಲೆಯಲ್ಲಿ 45, ಬೆಂಗಳೂರು ನಗರದಲ್ಲಿ 18 ಕೇಸ್​ಗಳು ದಾಖಲಾಗಿವೆ.
ಇನ್ನು ರಾಜ್ಯದಲ್ಲಿ  ಕರೋನಾ ಸೋಂಕಿನಿಂದಾಗಿ ಒಂದೇ ದಿನ  ಮೂವರು ಸಾವನ್ನಪ್ಪಿದ್ದಾರೆ. 67 ವರ್ಷದ ಪುರುಷ, 48 ವರ್ಷದ ಮಹಿಳೆ ಹಾಗೂ 65 ವರ್ಷದ ಮಹಿಳೆ ಇವರು ಬೆಂಗಳೂರು ನಗರದ ನಿವಾಸಿಗಳಾಗಿದ್ದು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅನ್ಯ ಕಾರಣಗಳಿಂದ ಸಾವನ್ನಪ್ಪಿದ ಇಬ್ಬರನ್ನು ಸೇರಿಸಿ ಒಟ್ಟು 66 ಸೋಂಕಿತರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ  387 ಜನ ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 2519ಕ್ಕೆ ಏರಿದ್ದು, 3175 ಆಕ್ಟಿವ್​ ಕೇಸ್​ ಇದೆ ಅಂತಾ ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನು ಈ 308 ಪ್ರಕರಣಗಳಲ್ಲಿ 277 ಅಂತಾರಾಜ್ಯ ಹಾಗೂ 1 ಅಂತಾರಾಷ್ಟ್ರೀಯ ಪ್ರಯಾಣಿಕರು ಇರೋದಾಗಿ ಮಾಹಿತಿ ಲಭ್ಯವಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್​
ಕಲಬುರಗಿ- 99
ಯಾದಗಿರಿ- 66
ಬೀದರ್- 48
ಉಡುಪಿ- 45
ಬೆಂಗಳೂರು ನಗರ- 18
ಬಳ್ಳಾರಿ- 08
ಗದಗ- 06
ಶಿವಮೊಗ್ಗ- 04
ಧಾರವಾಡ- 04
ಹಾಸನ -03
ದಕ್ಷಿಣ ಕನ್ನಡ- 03
ಬಾಗಲಕೋಟೆ- 02
ಕೊಪ್ಪಳ- 01
ರಾಮನಗರ- 01