Thursday, 12th December 2024

ಸ್ಪೆಷಲ್ ಇನ್ವೆಸ್ಟ್ ಮೆಂಟ್ ಟಾಸ್ಕ್ ಫೋರ್ಸ್ ರಚನೆ

ಬೆಂಗಳೂರು:

ಚೀನಾ ದೇಶದಿಂದ ಹೊರಬರುತ್ತಿರುವ ಕಂಪನಿಗಳನ್ನು ರಾಜ್ಯದತ್ತ ಸೆಳೆಯಲು ರಾಜ್ಯ ಸರಕಾರ ಸರಕಾರದ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ “ಸ್ಪೆಷಲ್ ಇನ್ವೆಸ್ಟ್ ಮೆಂಟ್ ಟಾಸ್ಕ್ ಫೋರ್ಸ್” ರಚನೆ ಮಾಡಿ ಆದೇಶ ಹೊರಡಿಸಿದೆ.

ಈ ಟಾಸ್ಕ್‌ ಫೋರ್ಸ್‌ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಕೈಗಾರಿಕಾ ಇಲಾಖೆ ಆಯುಕ್ತರು ಸೇರಿದಂತೆ ವಿವಿಧ ಇಲಾಖೆ ಆಯುಕ್ತರು, ಕಾರ್ಯದರ್ಶಿಗಳು ಹಾಗೂ ಪ್ರಮುಖ ಕಂಪನಿಗಳ ಸಿಬ್ಬಂದಿ ಸೇರಿ ಇತರೆ ಅಧಿಕಾರಿಗಳು ಒಳಗೊಂಡಿದ್ದಾರೆ.

ಕೊರೋನ ಹುಟ್ಟಿಗೆ ಕಾರಣವಾದ ಚೀನಾ ದೇಶದಲ್ಲಿ ಹಲವು ದೇಶಗಳ ಬೃಹತ್ ಕಂಪನಿಗಳು ತಮ್ಮ ಕೈಗಾರಿಕೆಯನ್ನು‌ ಮುಚ್ಚಲು ನಿರ್ಧರಿಸಿವೆ.

ಕೈಗಾರಿಕಾ ಚಟುವಟಿಕೆಗಳು ಫೆಬ್ರವರಿ 2020 ರಿಂದ ಜಾಗತಿಕವಾಗಿ ಕುಸಿದಿವೆ. ಯುಎಸ್ಎ ಮತ್ತು ಯುರೋಪಿಯನ್ ಯೂನಿಯನ್‌ನಂತಹ ಪ್ರಮುಖ ಆಮದು ಮಾರುಕಟ್ಟೆಗಳು ಅನಿಶ್ಚಿತ ಲಾಕ್‌ಡೌನ್ ಹಂತದಲ್ಲಿದೆ. ಹೆಚ್ಚುತ್ತಿರುವ ಕಾರ್ಮಿಕ ವೆಚ್ಚಗಳು, ಉದ್ಯೋಗಿಗಳ ಕೊರತೆ, ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ವ್ಯಾಪಾರ ಯುದ್ಧ, ಜಪಾನ್, ಅಮೆರಿಕ, ದಕ್ಷಿಣ ಕೊರಿಯಾ, ತೈವಾನ್, ಸಿಂಗಾಪುರ್ ಮುಂತಾದ ಕಂಪನಿಗಳು ಚೀನಾದಲ್ಲಿ ತಮ್ಮ ಕಂಪನಿ ಮುಚ್ಚಲು ಯೋಜಿಸುತ್ತಿವೆ. ಈ ಕಂಪನಿಗಳು ಭಾರತವನ್ನು ಪರ್ಯಾಯ ಉತ್ಪಾದನಾ ಕೇಂದ್ರವಾಗಿ ನೋಡುತ್ತಿವೆ. ಇವರನ್ನು ಸೆಳೆಯುವ ನಿಟ್ಟಿನಲ್ಲಿ ಈ ಟಾಸ್ಕ್‌ ಫೋರ್ಸ್‌ ಅಧ್ಯಯನ ನಡೆಸಲಿವೆ.

ಈ ಟಾಸ್ಕ್‌ ಫೋರ್ಸ್‌ ಯಾವ ಕ್ಷೇತ್ರದಲ್ಲಿ ಹೂಡುಕೆಗೆ ಅವಕಾಶವಿದೆ ಇತರೆ ಅವಕಾಶಗಳ ಬಗ್ಗೆ ಈ ಟಾಸ್ಕ್‌ಫೋರ್ಸ್ ಅಧ್ಯಯನ ನಡೆಸಲಿದೆ.