Sunday, 24th November 2024

ಹೈದರ್ ಹಿಜ್ಬುಲ್ ಉಗ್ರರ ಹೊಸ ಲೀಡರ್ ನರರಾಕ್ಷಸನಿಂದ ಕಾಶ್ಮೀರಕ್ಕೆ ಹೊಸ ಕಂಟಕ

ಇಸ್ಲಾಮಾಬಾದ್:

ಹಲವಾರು ಭಯಾನಕ ವಿಧ್ವಂಸಕ ಕೃತ್ಯಗಳನ್ನು ಎಸಗಿರುವ ಪಾಕಿಸ್ತಾನ ನಿಷೇಧಿತ ಹಿಜ್ಬುಲ್ ಮುಜಾಹಿದ್ಧೀನ್ (ಎಚ್‌ಂ) ಉಗ್ರಗಾಮಿ ಸಂಘಟನೆ ಹೊಸ ನಾಯಕನಾಗಿ ಫೈಜುಲ್ ಮಿರ್ ಅಲಿಯಾಸ್ ಘಾಜಿ ಹೈದರ್ ದುಷ್ಟ ಕಾರ್ಯಾಚರಣೆಗೆ ಇಳಿದಿದ್ದಾನೆ.

ಹಲವಾರು ಭಯೋತ್ಪಾದನೆ ದುಷ್ಕೃತ್ಯಗಳಲ್ಲಿ ಶಾಮೀಲಾಗಿರುವ 26 ವರ್ಷದ ನರರೂಪಿ ರಾಕ್ಷಸ ಹೈದರ್ ಜಮ್ಮು ಮತ್ತು ಕಾಶ್ಮೀರಕ್ಕೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಅಗ್ರ ನಾಯಕನಾಗಿರುವುದು ಕಣಿವೆ ಪ್ರಾಾಂತ್ಯಕ್ಕೆ ಹೊಸ ಕಂಟಕವಾಗಿ ಪರಿಣಮಿಸಿದೆ. ಹಿಜ್ಬುಲ್ ಮುಜಾದ್ದೀನ್ ಸಂಘಟನೆಯ ಕಮಾಂಡರ್ ಆಗಿದ್ದು ಕುಪ್ರಸಿದ್ದ ಭಯೋತ್ಪಾದಕ ರಿಯಾಜ್ ನೈಕೂನನ್ನು ಕಳೆದ ವಾರ ಯೋಧರು ನಡೆಸಿದ ಯಶಸ್ವಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಹತನಾಗಿದ್ದ. ಪಾಕಿಸ್ತಾನದ ಹಿಜ್ಬುಲ್ ಅಗ್ರ ನಾಯಕರ ಸೂಚನೆ ಮೇರೆಗೆ ಫೈಜುಲ್ ಮಿರ್ ಅಲಿಯಾಸ್  ಘಾಜಿ ಹೈದರ್‌ನ್ನು ಕಾಶ್ಮೀರದ ಕಮಾಂಡರ್  ಆಗಿ ನೇಮಕ ಮಾಡಲಾಗಿದೆ.

ರಿಯಾಜ್ ನೈಕೂ ಹತ್ಯೆಗೆ ಭಾರತೀಯ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವ ಹಿಜ್ಬುಲ್ ಉಗ್ರರು ಹೈದರ್ ನಾಯಕತ್ವದಲ್ಲಿ ದಾಳಿಗೆ ಹೊಸ ಕುತಂತ್ರ ರೂಪಿಸುತ್ತಿದಾರೆ ಎಂಬ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿದೆ. ಪಾಕಿಸ್ತಾನದ ಗೋಪ್ಯ ಸ್ಥಳದಲ್ಲಿ ಶನಿವಾರ ಯುನೈಟೆಡ್ ಜಿಹಾರ್  ಕೌನ್ಸಿಲ್ (ಪಾಕ್‌ನ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಪ್ರಾಯೋ ಜಿತ ಹಲವರು ಉಗ್ರಗಾಮಿ ಸಂಘಟನೆಳ ಒಕ್ಕೂಟ) ಮತ್ತು ಹಿಜ್ಬುಲ್ ಪರಮೋಚ್ಚ ನಾಯಕ ಸೈಯದ್ ಸಲಾಉದ್ದೀನ್ ನಾಯಕತ್ವದಲ್ಲಿ ನಡೆದ ಸಭೆಯಲ್ಲಿ ಹೈದರ್  ನೇಮಕದ ಬಗ್ಗೆೆ ನಿರ್ಧಾರ ಕೈಗೊಳ್ಳಲಾಗಿದೆ.

ಅಲ್ಲದೇ ಉಪ ನಾಯಕನಾಗಿ ಜಾಫರ್  ಉಲ್ ಇಸ್ಲಾಮ್ ಹೈದರ್‌ಗೆ ಉಪ ಕಮಾಂಡರ್ ಹಾಗೂ ಮುಖ್ಯ ಸಲಹೆಗಾರನಾಗಿ ಅಬು ತಾರೀಖ್ ನೇಮಕಗೊಂಡಿದ್ದಾರೆ. ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಬಿಘೀಪೋರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಹಿಜ್ಬುಲ್ ನಾಯಕ ರಿಯಾಜ್ ನೈಕೂ ಹಾಗೂ ಆತನ ಇಬ್ಬರು ಸಹಚರರಾದ ಮಹಮದ್ ಬಿನ್ ಕಾಸಿಂ ಮತ್ತು ಮಹಮದ್ ಆದಿಲ್ರನ್ನು ಹೊಡೆದುರುಳಿತ್ತು. ಉಗ್ರಗಾಮಿಗಳ ಒಕ್ಕೂಟದ ಸಭೆಯಲ್ಲಿ ಹತ ಭಯೋತ್ಪಾದಕರಿಗೆ ಸಂತಾಪ ಸೂಚಿಸಿ ಭಾರತೀಯ ಸೇನೆ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಶಪಥ ಮಾಡಲಾಗಿದೆ ಎಂಬ  ತಿಳಿಸಿದ್ದಾರೆ.