Friday, 22nd November 2024

ಡಿಕೆಶಿ ಕಾಂಗ್ರೆಸ್‌ನಲ್ಲಿ ಗಟ್ಟಿಯಾಗಿದ್ದಾರೆ: ರಾಮಲಿಂಗಾರೆಡ್ಡಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ತಿಹಾರ್ ಜೈಲಿನಿಂದ ಹೊರಬಂದಿರುವ ಡಿ.ಕೆ.ಶಿವಕುಮಾರ್ ಅವರು ಗಟ್ಟಿಿಯಾಗಿದ್ದಾಾರೆ. ಮುಂದೆಯೂ ಇದೇ ರೀತಿ ಇರಲಿದ್ದಾಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿಿ ಹೇಳಿದ್ದಾಾರೆ.
ಸದಾಶಿವ ನಗರದ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಡಿಕೆಶಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ರಾಜಕೀಯ ಬಗ್ಗೆೆ ಚೆರ್ಚೆ ಮಾಡಿಲ್ಲ. ಇದೊಂದು ಔಪಚಾರಿಕ ಭೇಟಿಯಷ್ಟೆೆ ಎಂದು ಸ್ಪಷ್ಟಪಡಿಸಿದರು.

ದೆಹಲಿಯಲ್ಲಿ ಡಿ.ಕೆ.ಶಿವಕುಮಾರ್ ಬಂಧನದ ಸಂದರ್ಭದಲ್ಲಿ ಆಸ್ಪತ್ರೆೆಗೆ ಹೋಗಿ ಭೇಟಿ ಮಾಡಿದ್ದೆ. ಇದೀಗ ಬೆಂಗಳೂರಿಗೆ ವಾಪಾಸ್ಸಾಾಗಿರುವುದರಿಂದ ನಿವಾಸಕ್ಕೆೆ ಬಂದು ಭೇಟಿಯಾಗಿದ್ದೇನೆ. ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆೆಸ್‌ನಲ್ಲಿ ಯಾವಾಗಲೂ ಗಟ್ಟಿಿಯಾಗಿಯೇ ಇರುತ್ತಾಾರೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಬಿಜೆಪಿ ಅಧಿಕಾರ ದುರುಪಯೋಗಪಡಿಸಿಕೊಂಡು ವಿಪಕ್ಷಗಳನ್ನು ಹತ್ತಿಿಕ್ಕುವ ಕೆಲಸ ಮಾಡುತ್ತಿಿದೆ. ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಹಾಗೂ ಮೋದಿ ಸರಕಾರ ಪತನವಾಗುತ್ತದೆ. ಮೋದಿ ದಿನೇ ದಿನೆ ವರ್ಚಸ್ಸು ಕಳೆದುಕೊಳ್ಳುತ್ತಿಿದ್ದಾರೆ. ಶೀಘ್ರದಲ್ಲೇ ರಾಜ್ಯದಲ್ಲಿ ಕಾಂಗ್ರೆೆಸ್ ಅಧಿಕಾರಕ್ಕೆೆ ಬರಲಿದೆ ಎಂದು ಹೇಳಿದರು.

ಇನ್ನು ಮಂಗಳವಾರ ಡಿ.ಕೆ.ಶಿವಕುಮಾರ್ ಅವರನ್ನು ರಾಮಲಿಂಗಾ ರೆಡ್ಡಿಿ, ಸೌಮ್ಯ ರೆಡ್ಡಿಿ, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಎಚ್.ಕೆ.ಪಾಟೀಲ್, ಮೋಟಮ್ಮ, ರಾಣಿ ಸತೀಶ್, ಮಾರ್ಗರೇಟ್ ಆಳ್ವಾಾ, ಆರ್.ವಿ.ದೇಶಪಾಂಡೆ, ಡಿ.ಸಿ ತಮ್ಮಣ್ಣ, ಶಿವಲಿಂಗೇಗೌಡ ಭೇಟಿ ಮಾಡಿ ಚರ್ಚಿಸಿದರು.