Sunday, 15th December 2024

10.18 ಕೋಟಿ ರು. ಆಸ್ತಿ ತೆರಿಗೆ ಚೆಕ್ ಸ್ವೀಕಾರ

ವಿಶ್ವವಾಣಿ ಸುದ್ದಿಮನೆ,
ಬೆಂಗಳೂರು

ಬಿಬಿಎಂಪಿ ಪೂರ್ವವಲಯದ ಮಾರುತಿ ಸೇವಾನಗರ ವಾರ್ಡ್ 59 ವ್ಯಾಪ್ತಿಯಲ್ಲಿ ಐಟಿಸಿ ಲಿಮಿಟೆಡ್ ಸಂಸ್ಥೆೆಯು 2020-21ನೇ ಸಾಲಿನ ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿಸಿದ್ದು, ಮಂಗಳವಾರ ಆಯುಕ್ತರು ಹಾಗೂ ಪೂರ್ವ ವಲಯ ಜಂಟಿ ಆಯುಕ್ತರು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿಸಿರುವ ಚೆಕ್ ಅನ್ನು ಐಟಿಸಿ ಲಿಮಿಟೆಡ್ ಸಂಸ್ಥೆ ಅಧಿಕಾರಿ ದಿನೇಶ್ ಅವರಿಂದ ಸ್ವೀಕರಿಸಿದರು.

ಸಹಾಯ ಕಂದಾಯ ಅಧಿಕಾರಿ ವೀಣಾ ಅವರ ಜತೆಗಿದ್ದರು. ಐಟಿಸಿ ಲಿಮಿಟೆಡ್ ಬಾಣಸವಾಡಿಯಲ್ಲಿರುವ ಕಟ್ಟಡದ 10.2 ಕೋಟಿ ರು ಹಾಗೂ ದೇವನಹಳ್ಳಿಯಲ್ಲಿರುವ ಕಟ್ಟಡದ 16.13 ಲಕ್ಷ ರು. ಸೇರಿ ಒಟ್ಟು 10.18 ಕೋಟಿ ರು. ಆಸ್ತಿ ತೆರಿಗೆ ಮೊತ್ತದ ತೆರಿಗೆ ಪಾವತಿಸಿದೆ.

ಈ ಸಂದರ್ಭದಲ್ಲಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮಾತನಾಡಿ, ಕರೋನಾ ಸಮಯದಲ್ಲಿ ಐ.ಟಿ.ಸಿ ಲಿಮಿಟೆಡ್ ಸಂಸ್ಥೆ ಸ್ವಯಂಪ್ರೇರಿತವಾಗಿ ತೆರಿಗೆ ಹಣವನ್ನು ಪಾವತಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿ, ಇದೇ ರೀತಿ ಬೇರೆ-ಬೇರೆ ಸಂಸ್ಥೆಗಳು ಹಾಗೂ ಸಾರ್ವಜನಿಕರು ತೆರಿಗೆ ಪಾವತಿಸುವಂತೆ ಮನವಿ ಮಾಡಿದ್ದಾರೆ.