ಹರಪನಹಳ್ಳಿ: ತಾಲೂಕು ಸೇವೆಗಳ ಪ್ರಾಧಿಕಾರದ ವತಿಯಿಂದ ತಾಲೂಕಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಒಟ್ಟು 1006 ಪ್ರಕರಣ ಗಳನ್ನು ಉಭಯ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಭಾರತಿ, ಮತ್ತು ಪಕ್ಕಿರವ್ವ ಕೆಳಗೆರೆ ರವರ ನೇತೃತ್ವದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಭಾರತಿ ರವರ ನೇತೃತ್ವದಲ್ಲಿ ಒಟ್ಟು, 509 ಪ್ರಕರಣಗಳನ್ನು ಇತ್ಯಾರ್ಥ ಪಡಿಸಿ, ಒಟ್ಟು 1 ಕೋಟಿ. 45 ಲಕ್ಷ. ರೂ.ಗಳನ್ನು ಹಣದ ರೂಪದಲ್ಲಿ ಇತ್ಯಾರ್ಥ ಪಡಿಸಿದರು. ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಪಕ್ಕಿರವ್ವ ಕೆಳಗೆರೆ ರವರ ನೇತೃತ್ವದಲ್ಲಿ ಒಟ್ಟು. 497 ಪ್ರಕಣಗಳನ್ನು ಇತ್ಯಾರ್ಥ ಪಡಿಸಿ ಒಟ್ಟು 13ಲಕ್ಷ 73 ಸಾವಿರ ರೂ. ಗಳನ್ನು ಹಣದ ರೂಪದಲ್ಲಿ ಇತ್ಯರ್ಥ ಪಡಿಸಿದರು.
ಅದಾಲತ್ನಲ್ಲಿ ರಸ್ತೆ ಅಪಘಾತ,ಚೆಕ್ ಬೌನ್ಸ್ , ಬ್ಯಾಂಕ್ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ಲಿ ಪ್ರಕರಣ, ಮೋಟಾರು ವಾಹನ, ನಿವೇಶನ ಮಾರಾಟ ಒಳಗೊಂಡಂತೆ ತಾಲೂಕಿ ನಧ್ಯಂತ ಒಟ್ಟು ೧೦೦೬ ಪ್ರಕರಣಗಳನ್ನು ರಾಜೀ ಸಂಧಾನದಕ್ಕೆ ಆಹ್ವಾನಿಸಲಾಗಿತ್ತು.
ತಾಲೂಕಿನ ಜೆ.ಎಂ.ಎಪ್.ಸಿ ನ್ಯಾಯಾಲಯದಲ್ಲಿ ನ್ಯಾಯಾದೀಶರ ಹಾಗೂ ವಕೀಲರ ಜತೆ ಅದಾಲತ್ನಲ್ಲಿ ಭಾಗಹಿಸಿ ಸಂಭಂಧಪಟ್ಟ ಪ್ರಕರಣಗಳಿಗೆ ಇತ್ಯರ್ಥಪಡಿಸಿದರು. ೫ ಸಿವಿಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸಿದರು. ಒಟ್ಟು ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ೧೯. ಲಕ್ಷದ ೩೫ ಸಾವಿರ ರೂಗಳನ್ನು ನ್ಯಾಯಾಲದಲ್ಲಿ ಬ್ಯಾಂಕ್ ಹಾಗೂ ಇತರೆ ಸಂಘ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಣದ ರೂಪದಲ್ಲಿ ಇತ್ಯರ್ಥ ಪಡಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕರಾದ ಮಿನಾಕ್ಷಿ, ನಿರ್ಮಾಲ, ವಕೀಲರ ಸಂಘದ ಅಧ್ಯಕ್ಷ ಕೆ. ಚಂದ್ರಗೌಡ್ರು, ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶ್ ಗೌಡ್ರು, ಹಿರಿಯ ವಕೀಲರಾದ ಕಣವಿಹಳ್ಳಿ ಮಂಜುನಾಥ್, ಕೆ.ಜಗದಪ್ಪ, ಬಸವರಾಜ್, ಎಂ.ಮೃ0ತಜಯ್ಯ, ಮಂಜ್ಯಾನಾಯ್ಕ, ಆನಂದ, ನಾಗರಾಜ್, ಸೀಮಾಬಾನು, ಶಾಂತವೀರ ನಾಯ್ಕ, ಪ್ರಕಾಶ್, ಎಸ್.ಜಿ. ತಿಪ್ಪೇಸ್ವಾಮಿ, ಬಸವನಗೌಡ್ಯ, ಟಿ.ಎಂ.ರಮೇಶ್, ಜಾಖೀರ್, ಬಸವರಾಜ್, , ಸಿದ್ದಲಿಂಗನಗೌಡ್ರು, ಪ್ರವೀಣ್, ಮಂಜುನಾಥ್, ಎ.ಮಲ್ಲಪ್ಪ, ಮತ್ತು ಇತರರು ಇದ್ದರು.