Sunday, 15th December 2024

ಅಲ್-ಹಿರಾ ಪಬ್ಲಿಕ್ ಶಾಲೆಯಿಂದ 1400 ಆಹಾರಧಾನ್ಯ ಕಿಟ್ ವಿತರಣೆ

ದೇವರ ಕೃಪೆಯಿಂದ ನಿಮ್ಮ ಸಹೋದರನಂತೆ ಸಹಾಯ ಮಾಡುವುದಕ್ಕಾಗಿದೆ : ಸೈಯಾದ್ ಅಕ್ಬರ್ ಪಾಷ
ಮಾನವಿ : ನಾನು ಬಡತನದಲ್ಲಿ ಬೆಳೆದು ಜೀವನ ಕಟ್ಟಿಕೊಂಡವನು ಆ ದೇವರು ನನಗೆ ಅಲ್ಪ ಸಂತೋಷದಲ್ಲಿ ನಿಮ್ಮಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಅಷ್ಟೇ ಆದರೂ ನಿಮಗೆ ಸಹಾಯ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲವಾಗಿದ್ದರು ನಿಮ್ಮ ಸಹೋದರನಂತೆ ಅಲ್ಪ ಮಟ್ಟಿಗೆ ಈ ಕರೋನ ಸಂದರ್ಭದಲ್ಲಿ ಕಾಲದಲ್ಲಿ ನಿಮಗೆ ಸಹಾಯ ಮಾಡುತ್ತಿದ್ದೇನೆ. ನೀವು ಕೂಡ ಸಹಾಯ ಮಾಡುವಂತೆ ಮನವಿ ಮಾಡಿದರು.
ಇಂದು ಪಟ್ಟಣದ ದಾರುಸ್ಸುಲಾಮ್ ಫೌಂಡೇಶನ್ ಟ್ರಸ್ಟ್ ಸಹಯೋಗದೊಂದಿಗೆ ಅಲ್-ಹಿರಾ ಪಬ್ಲಿಕ್ ಸ್ಕೂಲಿನಿಂದ ನಡೆದ ಕಾರ್ಯಕ್ರಮದಲ್ಲಿ ಕರೋನ ಸಂಕಷ್ಟದಲ್ಲಿರುವ ಜನರನ್ನು ಗುರುತಿಸಿ ಒಟ್ಟು 1400 ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಲಾ ಯಿತು.
ಪ್ರಸ್ತಾವಿಕವಾಗಿ ಶೇಖ್ ಫರೀದ್ ಉಮರಿ ಪುರಸಭೆ ಸದಸ್ಯರು ಮಾತಾನಾಡಿ ಅಲ್-ಹಿರಾ ಪಬ್ಲಿಕ್ ಸ್ಕೂಲ್ ವತಿಯಿಂದ ಕರೋನ ಸಂಧರ್ಭದಲ್ಲಿ ಸಂಕಷ್ಟದಲ್ಲಿರುವ ಅನೇಕರನ್ನು ಗುರುತಿಸಿ ಒಟ್ಟು 1400 ಆಹಾರ ಧಾನ್ಯಗಳು 10 ಕೆ ಜಿ ಅಕ್ಕಿ, 10, ಕೆ ಜಿ ಜೋಳ, 05 ಕೆ ಜಿ ಗೋದಿ, ಕಾರದಪುಡಿ,ಸಾಸಿವೆ ಜೀರಿಗೆ, ಉಪ್ಪು,ಹರಸಿಣ,ಸಕ್ಕರೆ, ಇರುವಂತ ಒಟ್ಟು 30 ಕೆ ಜಿ ಯಷ್ಟು ಸಾಮಗ್ರಿಗಳನ್ನು ವಿತರಣೆ ಮಾಡುವುದರ ಮೂಲಕ ಸಾಮಾಜಿಕ ಸೇವೆಯನ್ನು ಮಾಡಲಾಗಿದೆ ಇದಕ್ಕೆ ನಮಗೆಲ್ಲ ಪ್ರೇರಣೆ ಎಂದರೆ ಮಾತ್ರ ಅದು ಅಕ್ಬರ್ ಸಾಬ್ ಎನ್ನುವುದಕ್ಕೆ ತುಂಬಾ ಖುಷಿಯ ವಿಚಾರವಾಗಿದೆ ಕಳೆದ ವರ್ಷದಲ್ಲಿ ಕೂಡ ಆಹಾರ ಕಿಟ್ ವಿತರಣೆ ಮಾಡಲಾಗಿದೆ ಎಂದರು.
ವಿಶೇಷವಾಗಿ ಪತ್ರಕರ್ತರಿಗೆ, ಖಾಸಗಿ ಉಪನ್ಯಾಸರಿಗೆ, ಆಟೋ ಚಾಲಕರಿಗೆ, ಹೋಂ ಗಾರ್ಡ್ ನವರಿಗೆ, ಮಸೀದಿ ಇಮಾಮ್-ಮೊಝಿನ್ ಗಳಿಗೆ ಆಹಾರ ಧಾನ್ಯ ಕಿಟ್ ವಿತರಣೆ ಮಾಡಿ ದೇವರು ಮೆಚ್ಚುವ ಕೆಲಸ ಮಾಡಲಾಗಿದೆ ಎಂದರು. ಇಂತಹ ಕೆಲಸವನ್ನು ಸರ್ಕಾರವೇ ಮಾಡಬೇಕಾಗಿತ್ತು. ಆದರೆ ಕೆಲವರಿಗೆ ಮಾತ್ರ ಸಹಾಯ ಧನ ನೀಡಿ ಮೂಗಿಗೆ ಬೆಣ್ಣೆ ಹಚ್ಚುವ ಕೆಲಸವನ್ನು ಮಾಡಿದೆ ಎಂದರು..
ನಂತರ ಎಂ ಎಚ್ ಮುಖಿಂ ಅವರು ಮಾತಾನಾಡಿ ಇಂತಹ ಸೇವೆಯನ್ನು ಮಾಡುವ ಸೈಯಾದ್ ಅಕ್ಬರ್ ಪಾಷ ಇವರ ಬದುಕು ಬಹಳಷ್ಟು ಜನರಿಗೆ ಪ್ರೇರಣೆಯಾಗುತ್ತದೆ ಹನ್ನೋದನೆಯ ವಯಸ್ಸಿನಲ್ಲಿ ಕುಟುಂಬದ ಹಿರಿಯರಾದ ತಂದೆ ಹಾಗೂ ಅಣ್ಣವನ ರನ್ನು ಕಳೆದುಕೊಂಡು ಆ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಬಡತನದಲ್ಲಿ ಬೆಳೆದು ಕೂಲಿ ಕೆಲಸವನ್ನು ಮಾಡಿ ಬೆಳೆದವರು ನಂತರ ಅಂತ ಅಂತವಾಗಿ ವ್ಯಾಪಾರದ ಮ‌ೂಲಕ ಉತ್ತಮವಾದ ಕೆಲಸದ ಮೂಲಕವಾಗಿ ಅತ್ಯುತ್ತಮ ಗುತ್ತಿಗೆದಾರಾಗಿ ಸೇವೆಯನ್ನು ಸಲ್ಲಿಸುವ ಮೂಲಕ ಜನರ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅವರ ಮಾತುಗಳಿಂದ ಎಲ್ಲರೂ ಕೂಡ ಪ್ರೇರಣೆಯಾಗುತ್ತಾರೆ ಎಂದು ಅವರ ಮಾರ್ಗದರ್ಶನವನ್ನು ಮೆರೆಯುವಂತಿಲ್ಲ ಎಂದರು..
ನಂತರ ಎಚ್ ಶರ್ಫುದ್ದೀನ್ ಪೋತ್ನಾಳ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ತಿಪ್ಪಣ್ಣ ಬಾಗಲವಾಡ, ಖಾಸಗಿ ಉಪನ್ಯಾಸಕರ ಸಂಘದ ಅಧ್ಯಕ್ಷ ಬಸವರಾಜ ಬೋಗವತಿ, ಪತ್ರಕರ್ತ ಪಿ ಪರಮೇಶ, ಮಾತನಾಡಿ ಸೈಯಾದ್ ಅಕ್ಬರ್ ಪಾಷ ಅವರು ಮಾಡುವ ಕೆಲಸ ಬಹಳಷ್ಟು ಬಡವರಿಗೆ ತುತ್ತಿನ ಚೀಲವನ್ನು ತುಂಬುವ ಪುಣ್ಯದ ಕಾರ್ಯವಾಗಿದೆ ಸರ್ಕಾರ ಮಾಡಬೇಕಾದ ಕೆಲಸ ಇವರು ಮಾಡುತ್ತಿದ್ದಾರೆ ಆಹಾರ ಧಾನ್ಯ, ಅಂಬುಲೇನ್ಸ್, ಆಕ್ಸಿಜನ್, ಸೇರಿದಂತೆ ಬಡವರಿಗೆ ಪ್ರತಿ ತಿಂಗಳು ಧನಸಹಾಯವನ್ನು ಮಾಡುತ್ತಿದ್ದಾರೆ.
ಕರೋನ ಸಂದರ್ಭದಲ್ಲಿ ಯಾರು ನಮ್ಮವರು ಎನ್ನುವುದು ತಿಳಿಯುತ್ತದೆ ಇಂತಹ ಕೆಲಸವನ್ನು ಮಾಡುತ್ತಿರುವ ಅಕ್ಬರ್ ಪಾಷ ಇವರ ಕಾರ್ಯ ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ನಂತರ ದಂಡಧಿಕಾರಿ ಸಂತೋಷ ರಾಣಿ ಮಾತನಾಡಿ, ಸಹಾಯ ಮಾಡುವುದು ಶ್ಲಾಘನೀಯ ಕಾರ್ಯ ಆದರೆ ದಯವಿಟ್ಟು ಎಲ್ಲರೂ ಕರೋನ ನಿಯಮಗಳನ್ನು ಪಾಲಿಸಿಬೇಕು ಮತ್ತು ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನೇಷನ್‌ ಹಾಕಿಸಿಕೊಂಡಾಗ ಮಾತ್ರ ಕರೋನ ಹೊಡೆದೊಡಿಸಲು ಸಾಧ್ಯವಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಸೈಯ್ಯದ್ ಅಕ್ಬರ್ ಪಾಷ, ಶೇಕ್ ಫರಿದ್ ಉಮ್ರಿ, ಅಬ್ದುಲ್ ಮುಖೀಮ್, ಮುಸ್ತಫಾ ಮಿಯಾ ಮುರ್ಷದ್, ಅನ್ವರ್ ಪಾಶ ಉಮರಿ, ಬಸವರಾಜ ಭೋಗವತಿ, ಸೈಯ್ಯದ್ ಸಜ್ಜಾದ್ ಹುಸೇನ್, ಶರ್ಫುದ್ದೀನ್, ತಿಪ್ಪಣ್ಣ ಬಾಗಲವಾಡ, ವರದರಾಜ್ ಕುಲಕರ್ಣಿ, ಸೈಯ್ಯದ್ ಜಿಶಾನ್ ಖಾದ್ರಿ, ಚನ್ನಬಸವ ಬಾಗಲವಾಡ, ಕರೀಮ್ ಖಾನ್, ರಾಜು ತಾಳಿಕೋಟಿ, ಪತ್ರಕರ್ತ‌ ಪಿ ಪರಮೇಶ್, ಜಿಶಾನ್ ಆಖಿಲ್ ಸಿದ್ದಿಖಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.