Thursday, 12th December 2024

ಬೋಧನಾ ಶುಲ್ಕದಲ್ಲಿ ಶೇ.15ರಷ್ಟು ರಿಯಾಯಿತಿ: ಹೈಕೋರ್ಟ್ ಆದೇಶ

ಬೆಂಗಳೂರು: 2020-21ರ ಸಾಲಿಗೆ ಬೋಧನಾ ಶುಲ್ಕದಲ್ಲಿ ಶೇ.15ರಷ್ಟು ರಿಯಾಯಿತಿ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಈ ಮೂಲಕ ಶೇ.70ರಷ್ಟು ಶುಲ್ಕ ಸ್ವೀಕರಿಸುವಂತೆ ಹೇಳಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದು ಪಡಿಸಿದೆ.

ಸ್ಕೂಲ್ ಫೀಸ್ ವಿಚಾರವಾಗಿ, ಖಾಸಗಿ ಶಾಲೆಗಳ ಒಕ್ಕೂಟ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಮಹತ್ವದ ಆದೇಶ ನೀಡಿದೆ. ಬೋಧನಾ ಶುಲ್ಕ ಶೇ.15ರಷ್ಟು ರಿಯಾಯಿತಿ ಮಾಡುವಂತೆ ಸೂಚಿಸಿದೆ. 

ಹೈಕೋರ್ಟ್ ಆದೇಶದಿಂದ ಪೋಷಕರಿಗೆ ಹಾಗೂ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳಿಗೂ ಕೊಂಚ ರಿಲೀಫ್ ಸಿಕ್ಕಿದೆ.