Thursday, 12th December 2024

18 ಕರೋನಾ ಪ್ರಕರಣ ಪತ್ತೆ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು: 
ದಿನೇ ದಿನೇ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಂದು 408ಕ್ಕೆ ಏರಿಕೆಯಾಗಿದೆ.
ಸೋಮವಾರ ಒಟ್ಟು 18 ಕರೋನಾ ಪ್ರಕರಣ ಪತ್ತೆಯಾಗಿದ್ದು, ಒಟ್ಟು ರಾಜ್ಯದಲ್ಲಿ 408 ಕರೋನಾ ಸೋಂಕಿತರಿದ್ದಾರೆ. ಇದುವರೆಗೂ ಕೊರೊನಾದಿಂದ ಗುಣಮುಖರಾಗಿ 112 ಜನ ಡಿಸ್ಚಾರ್ಜ್ ಆಗಿದ್ದು, 16 ಮಂದಿ ಸಾವನ್ನಪ್ಪಿದ್ದಾರೆ.
ವಿಜಯಪುರದಲ್ಲಿ 11 ಮಂದಿಯಲ್ಲಿ ಕರೋನಾ ಕಾಣಿಸಿಕೊಂಡಿದೆ. ಕುಟುಂಬದವರ ಜತೆ ಸಂಪರ್ಕ ಹೊಂದಿದ್ದರಿಂದ ಕೊರೊನಾ ಸೋಂಕು ಬಂದಿದೆ. ಕಲಬುರಗಿಯಲ್ಲಿ 5, ಗದಗ ಮತ್ತು ಬೀದರ್ ತಲಾ ಒಂದು ಕರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಇದುವರೆಗೂ ರಾಜ್ಯದಲ್ಲಿ 112 ಜನ ಕರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅದರಲ್ಲಿ ಬೆಂಗಳೂರು ನಗರ (45), ಮೈಸೂರು (24), ದಕ್ಷಿಣ ಕನ್ನಡ (11), ಉತ್ತರ ಕನ್ನಡ (9), ಚಿಕ್ಕಬಳ್ಳಾಪುರ (8), ಬೆಂಗಳೂರು ಗ್ರಾಮಾಂತರ, ಉಡುಪಿ, ಕಲಬುರಗಿ ಜಿಲ್ಲೆಗಳಲ್ಲಿ ತಲಾ ಮೂವರು, ದಾವಣಗೆರೆಯಲ್ಲಿ 2, ಧಾರವಾಡ, ಕೊಡಗು, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತಲಾ ಒಬ್ಬರು ಗುಣಮುಖರಾಗಿದ್ದಾರೆ. ಇನ್ನು, ರಾಜ್ಯದಲ್ಲಿ ಸೋಮವಾರ ಕರೋನಾ ಸಂಬಂಧಿತ ಸಾವುಗಳ ವರದಿಯಾಗಿಲ್ಲ. ಇದುವರೆಗೂ ಸೋಂಕಿನಿಂದ 16 ಜನ ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ 4, ಕಲಬುರಗಿಯಲ್ಲಿ 3, ವಿಜಯಪುರ, ಚಿಕ್ಕಬಳ್ಳಾಪುರದಲ್ಲಿ ತಲಾ 2, ಬಾಗಲಕೋಟೆ, ಬೆಳಗಾವಿ, ದಕ್ಷಿಣ ಕನ್ನಡ, ಗದಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಯಾವುದೇ ಸೋಂಕಿತರು ಕಂಡುಬಂದಿಲ್ಲ. ಭಾನುವಾರ ಮತ್ತು ಸೋಮವಾರ ಸರಕಾರ ಬಿಡುಗಡೆ ಮಾಡಿದ ವರದಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗದಿರುವುದು ಉದ್ಯಾನ ನಗರಿಯ ಜನರಲ್ಲಿನ ಭಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ. ಇದುವರೆಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ 89 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ 45 ಜನ ಗುಣಮುಖರಾಗಿದ್ದರೆ, 4 ಜನ ಸಾವನ್ನಪ್ಪಿದ್ದಾರೆ.
………..
ಬಾಕ್ಸ್……
ಉತ್ತರ ಕರ್ನಾಟಕದಲ್ಲಿ ಹೆಚ್ಚಾದ ಕರೋನಾ
ಸೋಮವಾರ ಗಮನಿಸಬೇಕಾದ ಅಂಶವೇನೆಂದರೆ ಪತ್ತೆಯಾದ 18 ಹೊಸ ಪ್ರಕರಣಗಳು ಉತ್ತರ ಕರ್ನಾಟಕ ಎಂಬುದು ಆತಂಕಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕರೋನಾ ವ್ಯಾಪಕವಾಗಿ ಹಬ್ಬುತ್ತಿದ್ದು, 408 ಕರೋನಾ ಪ್ರಕರಣಗಳಲ್ಲಿ ಉತ್ತರ ಕರ್ನಾಟಕದ ಪ್ರಕರಣಗಳೇ 160ಕ್ಕೂ ಹೆಚ್ಚು ಎಂಬುದು ಗಮನಿಸಬೇಕಾದ ಅಂಶವಾಗಿದೆ. ಇನ್ನು, ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಕೇವಲ 4 ಜಿಲ್ಲೆಗಳು ಮಾತ್ರ ಸೇಫ್‌ ಜೋನ್‌ನಲ್ಲಿವೆ. ಕೊಪ್ಪಳ, ರಾಯಚೂರು, ಯಾದಗಿರಿ ಹಾಗೂ ಹಾವೇರಿಯಲ್ಲಿ ಇದುವರೆಗೂ ಯಾವುದೇ ಕರೋನಾ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿಲ್ಲ.
ಸೋಂಕಿತರ ವಿವರ: 
1. ರೋಗಿ 391: 17 ವರ್ಷದ ಹುಡುಗ, ಕಲಬುರಗಿಯ ನಿವಾಸಿ. ರೋಗಿ ನಂಬರ್ 175ರ ಜತೆ ಸಂಪರ್ಕ
2. ರೋಗಿ 392: 13 ವರ್ಷದ ಬಾಲಕ, ಕಲಬುರಗಿಯ ನಿವಾಸಿ. ರೋಗಿ ನಂಬರ್ 205ರ ಜತೆ ಸಂಪರ್ಕ
3. ರೋಗಿ 393: 30 ವರ್ಷದ ಮಹಿಳೆ, ಕಲಬುರಗಿಯ ನಿವಾಸಿ. ರೋಗಿ ನಂಬರ್ 205ರ ಜತೆ ಸಂಪರ್ಕ
4. ರೋಗಿ 394: 50 ವರ್ಷದ ಪುರುಷ, ಕಲಬುರಗಿಯ ನಿವಾಸಿ. ರೋಗಿ ನಂಬರ್ 177ರ ಜತೆ ಸಂಪರ್ಕ
5. ರೋಗಿ 395: 19 ವರ್ಷದ ಯುವಕ, ಕಲಬುರಗಿಯ ನಿವಾಸಿ. ರೋಗಿ ನಂಬರ್ 205ರ ಜತೆ ಸಂಪರ್ಕ
 6. ರೋಗಿ 396: 24 ವರ್ಷದ ಯುವಕ, ಗದಗ ನಿವಾಸಿ. ರೋಗಿ ನಂಬರ್ 370ರ ದ್ವಿತೀಯ ಸಂಪರ್ಕ
7. ರೋಗಿ 397: 7 ವರ್ಷದ ಬಾಲಕಿ, ವಿಜಯಪುರ ನಿವಾಸಿ. ರೋಗಿ ನಂಬರ್ 221ರ ಜತೆ ಸಂಪರ್ಕ
8. ರೋಗಿ 398: 36 ವರ್ಷದ ಪುರುಷ, ವಿಜಯಪುರ ನಿವಾಸಿ. ರೋಗಿ ನಂಬರ್ 221ರ ಜತೆ ಸಂಪರ್ಕ
9. ರೋಗಿ 399: 27 ವರ್ಷದ ಮಹಿಳೆ, ವಿಜಯಪುರ ನಿವಾಸಿ. ರೋಗಿ ನಂಬರ್ 221ರ ಜತೆ ಸಂಪರ್ಕ
10. ರೋಗಿ 400: 25 ವರ್ಷದ ಮಹಿಳೆ, ವಿಜಯಪುರ ನಿವಾಸಿ. ರೋಗಿ ನಂಬರ್ 221ರ ಜತೆ ಸಂಪರ್ಕ
11. ರೋಗಿ 401: 21 ವರ್ಷದ ಯುವತಿ, ವಿಜಯಪುರ ನಿವಾಸಿ. ರೋಗಿ ನಂಬರ್ 362ರ ಜತೆ ಸಂಪರ್ಕ
12. ರೋಗಿ 402: 28 ವರ್ಷದ ಯುವಕ, ವಿಜಯಪುರ ನಿವಾಸಿ. ರೋಗಿ ನಂಬರ್ 362ರ ಜತೆ ಸಂಪರ್ಕ
 13. ರೋಗಿ 403: 47 ವರ್ಷದ ಮಹಿಳೆ, ವಿಜಯಪುರ ನಿವಾಸಿ. ರೋಗಿ ನಂಬರ್ 362ರ ಜತೆ ಸಂಪರ್ಕ
14. ರೋಗಿ 404: 10 ವರ್ಷದ ಬಾಲಕ, ವಿಜಯಪುರ ನಿವಾಸಿ. ರೋಗಿ ನಂಬರ್ 221ರ ಜತೆ ಸಂಪರ್ಕ
15. ರೋಗಿ 405: 34 ವರ್ಷದ ಮಹಿಳೆ, ವಿಜಯಪುರ ನಿವಾಸಿ. ರೋಗಿ ನಂಬರ್ 228ರ ಜತೆ ಸಂಪರ್ಕ
16. ರೋಗಿ 406: 38 ವರ್ಷದ ಮಹಿಳೆ, ವಿಜಯಪುರ ನಿವಾಸಿ. ರೋಗಿ ನಂಬರ್ 221ರ ಜತೆ ಸಂಪರ್ಕ
17. ರೋಗಿ 407: 14 ವರ್ಷದ ಬಾಲಕ, ವಿಜಯಪುರ ನಿವಾಸಿ. ರೋಗಿ ನಂಬರ್ 221ರ ಜತೆ ಸಂಪರ್ಕ
18. ರೋಗಿ 408: 27 ವರ್ಷದ ಯುವಕ, ಬೀದರ್ ನಿವಾಸಿ. ರೋಗಿ ನಂಬರ್ 117ರ ಜತೆ ಸಂಪರ್ಕ.