Sunday, 15th December 2024

24 ಗಂಟೆಗಳಲ್ಲಿ 44 ಜನರಿಗೆ ಕರೋನಾ!

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:

ರಾಜ್ಯದಲ್ಲಿ ಕರೋನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಶುಕ್ರವಾರ ಒಂದೇ ದಿನ 44 ಹೊಸ ಪ್ರಕರಣಗಳು ವರದಿಯಾಗುವ ಮೂಲಕ ಸೋಂಕಿತರ ಸಂಖ್ಯೆ 359ಕ್ಕೆ ಏರಿಕೆಯಾಗಿದೆ.

ಕೇವಲ ಎರಡು ದಿನಗಳಲ್ಲಿ 74 ಪ್ರಕರಣಗಳು ವರದಿಯಾಗಿದ್ದು, ಇದರಿಂದ ರಾಜ್ಯದಲ್ಲಿ ಕರೊನಾ ವೈರಸ್  3ನೇ ಹಂತ ತಲುಪಿದೆಯೇ ಎಂಬ ಭೀತಿ ಎದುರಾಗಿದೆ. ಒಟ್ಟು 359 ಸೋಂಕಿತರದಲ್ಲಿ 13 ಮಂದಿ ಮೃತಪಟ್ಟಿದ್ದು, 88 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಳಿದಂತೆ 816 ಮಂದಿ ರಾಜ್ಯಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ದೃಢಪಟ್ಟ ಸೋಂಕಿತರ ಪಟ್ಟಿ 

ರೋಗಿ 316 – ಬೆಂಗಳೂರು ನಗರದ 55 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಸೋಂಕು ಹೇಗೆ ತಗುಲಿತು ಎಂಬ ಮಾಹಿತಿ ಪತ್ತೆ ಹಚ್ಚಲಾಗುತ್ತಿದೆ.

ರೋಗಿ 317 – ಬೆಂಗಳೂರು ನಗರದ 11 ವರ್ಷದ ಬಾಲಕಿಗೆ ಸೋಂಕು ಹರಡಿದ್ದು, ಸಂಪರ್ಕ ಮಾಹಿತಿ ಕಲೆ ಹಾಕಲಾಗುತ್ತಿದೆ.

ರೋಗಿ 318 – ಮೈಸೂರು ಜಿಲ್ಲೆಯ ನಂಜನಗೂಡಿನ 50 ವರ್ಷದ ವ್ಯಕ್ತಿಗೆ ರೋಗಿ 52ರ ಸಂಪರ್ಕದಿಂದ ಸೋಂಕು ತಗುಲಿದೆ.

ರೋಗಿ 319 – ಮೈಸೂರು ಜಿಲ್ಲೆಯ ನಂಜನಗೂಡಿನ 33 ವರ್ಷದ ವ್ಯಕ್ತಿಗೆ ರೋಗಿ 52ರ ಸಂಪರ್ಕದಿಂದ ಸೋಂಕು ಹರಡಿದೆ.

ರೋಗಿ 320 – ಮೈಸೂರು ಜಿಲ್ಲೆಯ ನಂಜನಗೂಡಿನ 33 ವರ್ಷದ ವ್ಯಕ್ತಿಗೆ ರೋಗಿ 52ರ ಸಂಪರ್ಕದಿಂದ ಸೋಂಕು ತಗುಲಿದೆ.

ರೋಗಿ 321 – ಮೈಸೂರು ಜಿಲ್ಲೆಯ 41 ವರ್ಷದ ಮಹಿಳೆಗೆ ರೋಗಿ 73ರ ಸಂಪರ್ಕದಿಂದ ಸೋಂಕು ತಗುಲಿದೆ.

ರೋಗಿ 322 – ಮಂಡ್ಯ ಜಿಲ್ಲೆಯ ಮಳವಳ್ಳಿಯ 25 ವರ್ಷದ ವ್ಯಕ್ತಿಗೆ ರೋಗಿ 171ರ ಸಂಪರ್ಕದಿಂದ ಸೋಂಕು ಹರಡಿದೆ.

ರೋಗಿ 323 – ಮಂಡ್ಯ ಜಿಲ್ಲೆಯ ಮಳವಳ್ಳಿಯ 29 ವರ್ಷದ ವ್ಯಕ್ತಿಗೆ ರೋಗಿ 171ರ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ.

ರೋಗಿ 324 – ಮಂಡ್ಯ ಜಿಲ್ಲೆಯ ಮಳವಳ್ಳಿಯ 45 ವರ್ಷದ ವ್ಯಕ್ತಿಗೆ ರೋಗಿ 171ರ ಸಂಪರ್ಕದಿಂದ ಸೋಂಕು ತಗುಲಿದೆ.

ರೋಗಿ 325 – ದಕ್ಷಿನ ಕನÀ್ನಡ ಜಿಲ್ಲೆಯ ಉಪ್ಪಿನಂಗಡಿಯ 39 ವರ್ಷದ ವ್ಯಕ್ತಿಗೆ ಸೋಂಕು ಹರಡಿದ್ದು, ಮಾ. 28ರಂದು ದೆಹಲಲಿ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.

ರೋಗಿ 326 – ಬೆಂಗಳೂರು ನಗರದ 6 ವರ್ಷದ ಬಾಲಕನಿಗೆ ಸೋಂಕು ತಗುಲಿದ್ದು, ರೋಗಿ 252ರ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ.

ರೋಗಿ 327 – ಬೆಂಗಳೂರು ನಗರದ 25 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದ್ದು, ರೋಗಿ 252ರ ಸಂಪರ್ಕದಿಂದ ಸೋಂಕು ತಗುಲಿದೆ.

ರೋಗಿ 328 – ಬೀದರ್ ಜಿಲ್ಲೆಯ 18 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದ್ದು, ಈತ ದೆಹಲಿ ಪ್ರಯಾಣ ಮಾಡಿದವರ ವ್ಯಕ್ತಿಯ ಸಂಪರ್ಕ ಹೊಂದಿದ್ದನು ಎಂಬ ಮಾಹಿತಿ ತಿಳಿದುಬಂದಿದೆ.

ರೋಗಿ 329 – ವಿಜಯಪುರದ 6 ವರ್ಷದ ಬಾಲಕನಿಗೆ ರೋಗಿ 221ರ ಸಂಪರ್ಕದಿಂದ ಸೋಂಕು ತಗುಲಿದೆ.

ರೋಗಿ 330 – ವಿಜಯಪುರದ 28 ವರ್ಷದ  ಮಹಿಳೆಗೆ ರೋಗಿ 221ರ ಸಂಪರ್ಕದಿಂದ ಸೋ
ಂಕು ಹರಡಿದೆ.

ರೋಗಿ 331 – ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಿವಾಸಿ 39 ವರ್ಷದ ವ್ಯಕ್ತಿಗೆ ರೋಗಿ 89, 90, 91 ಮತ್ತು 141ರ ಸಂಪರ್ಕದಿಂದ ಸೋಂಕು ಹರಡಿರುವುದು ದೃಢಪಟ್ಟಿದೆ.

ರೋಗಿ 332 – ಬಳ್ಳಾರಿಯ ಹೊಸಪೇಟೆಯ 68 ವರ್ಷದ ವೃದ್ಧೆಗೆ ಸೋಂಕು ತಗುಲಿದ್ದು, ಈಕೆಗೆ ರೋಗಿ 141 ಸಂಪರ್ಕದಿಂದ ಸೋಂಕು ತಗುಲಿದೆ.

ರೋಗಿ 333 – ಬಳ್ಳಾರಿಯ ಹೊಸಪೇಟೆಯ 21 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿದ್ದು, ರೋಗಿ 141 ಸಂಪರ್ಕದಿಂದ ಸೋಂಕು ತಗುಲಿದೆ.

ರೋಗಿ 334 –  ಬಳ್ಳಾರಿಯ ಹೊಸಪೇಟೆಯ 48 ವರ್ಷದ ವ್ಯಕ್ತಿಗೆ ರೋಗಿ 141ರ ಸಂಪರ್ಕದಿಂದ ಸೋಂಕು ಹರಡಿದೆ.

ರೋಗಿ 335 – ಹೊಸ ಪೇಟೆಯ 10 ವರ್ಷದ ಬಾಲಕಿಗೆ ರೋಗಿ 141ರ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ.

ರೋಗಿ 336 – ಬಳ್ಳಾರಿಯ ಹೊಸಪೇಟೆಯ 50 ವರ್ಷದ ವ್ಯಕ್ತಿಗೆ ಸೋಂಕು ಹರಡಿದ್ದು, ರೋಗಿ 141 ಸಂಪರ್ಕದಿಂದ ಸೋಂಕು ತಗುಲಿದೆ.

ರೋಗಿ 337 – ಬಳ್ಳಾರಿಯ ಹೊಸಪೇಟೆಯ 24 ವರ್ಷದ ಯುವಕನಿಗೆ  ರೋಗಿ 141 ಸಂಪರ್ಕದಿಂದ ಸೋಂಕು ಹರಡಿದೆ.

ರೋಗಿ 338 – ಚಿಕ್ಕಬಳ್ಳಾಪುರ ಜಿಲ್ಲೆಯ 36 ವರ್ಷದ ವ್ಯಕ್ತಿಗೆ ರೋಗಿ 250ರ ಸಂಪರ್ಕದಿಂದ ಸೋಂಕು ತಗುಲಿದೆ.

ರೋಗಿ 339 – ಚಿಕ್ಕಬಳ್ಳಾಪುರ ಜಿಲ್ಲೆಯ 20 ವರ್ಷದ ಯುವಕನಿಗೆ ರೋಗಿ 250ರ ಸಂಪರ್ಕದಿಂದ ಸೋಂಕು ಹರಡಿದೆ.

ರೋಗಿ 340 – ಚಿಕ್ಕಬಳ್ಳಾಪುರದ 9 ವರ್ಷದ ಬಾಲಕನಿಗೆ ರೋಗಿ 250ರ ಸಂಪರ್ಕದಿಂದ ಸೋಂಕು ತಗುಲಿದೆ.

ರೋಗಿ 341 – ಮೈಸೂರು ಜಿಲ್ಲೆಯ ನಂಜನಗೂಡು ನಿವಾಸಿ 22 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದ್ದು, ರೋಗಿ 52ರ ಸಂಪರ್ಕದಿಂದ ಸೋಂಕು ಹರಡಿದೆ.

ರೋಗಿ 342 – ಮೈಸೂರು ಜಿಲ್ಲೆಯ ನಂಜನಗೂಡು ನಿವಾಸಿ 38 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದ್ದು, ರೋಗಿ 52ರ ಸಂಪರ್ಕದಿಂದ ಸೋಂಕು ತಗುಲಿದೆ.

ರೋಗಿ 343 – ಮೈಸೂರು ಜಿಲ್ಲೆಯ 38  ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ರೋಗಿ 52ರ ಸಂಪರ್ಕದಿಂದ ಸೋಂಕು ಹರಡಿದೆ.

ರೋಗಿ 344 –  ಮೈಸೂರು ಜಿಲ್ಲೆಯ ನಂಜನಗೂಡು ನಿವಾಸಿ 26 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿದ್ದು, ರೋಗಿ 52ರ ಸಂಪರ್ಕದಿಂದ ಸೋಂಕು ತಗುಲಿದೆ.

ರೋಗಿ 345- ಮೈಸೂರು ಜಿಲ್ಲೆಯ ನಂಜನಗೂಡು ನಿವಾಸಿ 28 ವರ್ಷದ ಯುವಕನಿಗೆ ರೋಗಿ 52ರ ಸಂಪರ್ಕದಿಂದ ಸೋಂಕು ಹರಡಿದೆ.

ರೋಗಿ 346 – ಮೈಸೂರು ಜಿಲ್ಲೆಯ ನಂಜನಗೂಡು ನಿವಾಸಿ 22 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದ್ದು, ರೋಗಿ 52ರ ಸಂಪರ್ಕದಿಂದ ಸೋಂಕು ತಗುಲಿದೆ.

ರೋಗಿ 347 – ಮೈಸೂರು ಜಿಲ್ಲೆಯ ನಂಜನಗೂಡಿನ 29 ವರ್ಷದ ಯುವಕನಿಗೆ ರೋಗಿ 52ರ ಸಂಪರ್ಕದಿಂದ ಸೋಂಕು ಹರಡಿದೆ.

ರೋಗಿ 348 – ಮೈಸೂರು ಜಿಲ್ಲೆಯ ನಂಜನಗೂಡಿನ 26 ವರ್ಷದ ಯುವಕನಿಗೆ ರೋಗಿ 52ರ ಸಂಪರ್ಕದಿಂದ ಸೋಂಕು ತಗುಲಿದೆ.

ರೋಗಿ 349 – ಬೆಂಗಳೂರು ನಗರದ 64 ವರ್ಷದ ಮಹಿಳೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ರೋಗಿ 350 – ಬೆಂಗಳೂರು ನಗರದ 32 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಸಂಪರ್ಕ ಮಾಹಿತಿ ಪತ್ತೆ ಕಾರ್ಯ ನಡೆಯುತ್ತಿದೆ.

ರೋಗಿ 351 – ಬೆಂಗಳೂರು ನಗರದ 23 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದ್ದು, ಸೋಂಕು ಹರಡಿದ್ದು ಹೇಗೆ ಎಂಬ ಮಾಹಿತಿ ಪತ್ತೆ ಹಚ್ಚಲಾಗುತ್ತಿದೆ.

ರೋಗಿ 352 – ಬೆಂಗಳೂರು ನಗರದ 28 ವರ್ಷದ ಯುವಕನಿಗೆ ಸೋಂಕು ತಗುಲಿದ್ದು, ಮಾಹಿತಿ ಕಲೆಹಾಕಲಾಗುತ್ತಿದೆ.

ರೋಗಿ 353 – ಬೆಂಗಳೂರು ನಗರದ 21 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿದ್ದು, ಸಂಪರ್ಕ ಮಾಹಿತಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾವಾರು ಕರೋನಾ ಸೋಂಕಿತರು!
 
 
ಜಿಲ್ಲೆ                   ಪ್ರಕರಣ             ಗುಣಮುಖ   ಸಾವು
ಬೆಂಗಳೂರು ನಗರ  86                           41                3
ಮೈಸೂರು             73                           12                0
ಬೆಳಗಾವಿ               41                            0                 1
ಕಲಬುರಗಿ             20                            3                 3
ಬೀದರ್                 14                            0                 0
ದಕ್ಷಿಣ ಕನ್ನಡ        12                            8                 0
ಉತ್ತರ ಕನ್ನಡ         11                           8                  0
ಚಿಕ್ಕಬಳ್ಳಾಪುರ        16                           8                  2
ಬಾಗಲಕೋಟೆ         14                           0                 1
ಮಂಡ್ಯ                   11                           0                 0
ಬಳ್ಳಾರಿ                   13                           0                  0
ವಿಜಯಪುರ            19                           0                  1
ಧಾರವಾಡ                6                           1                  0
ಬೆಂಗಳೂರು ಗ್ರಾ.      12                           0                  0
ಉಡುಪಿ                    3                            2                  0
ದಾವಣಗೆರೆ               2                            2                  0
ಕೊಡಗು                   1                            1                  0
ತುಮಕೂರು              2                            1                 1
ಗದಗ                        2                             0                 1
ಒಟ್ಟು                    359                           88              13