ಬೆಂಗಳೂರು :
ಕಾರ್ಮಿಕರ ದಿನಾಚರಣೆ ಪ್ರಯುಕ್ತ ಸಿನರ್ಜಿಸಲ್ಯುಷನ್ಸ್ ಸಂಸ್ಥೆ ಕೊಡಗು, ಮೈಸೂರು ಮತ್ತು ಬೆಂಗಳೂರಿನಲ್ಲಿ ಬಳಸಲು 25,000 ಫೇಸ್ ಮಾಸ್ಕ್ ಮತ್ತು 300 ಲೀಟರ್ ಹ್ಯಾಂಡ್ ಸ್ಯಾನಿಟೈಸರ್ ಗಳನ್ನುನೀಡಿದೆ.
ಕರೋನಾ ದಾಳಿಯಿಂದ ನಾಗರಿಕರನ್ನು ರಕ್ಷಿಸುವಲ್ಲಿ ಮುಂಚೂಣಿಯಲ್ಲಿರುವ ಯೋಧರ ಅನುಕೂಲಕ್ಕೆ ಮಾಸ್ಕ್ ಗಳನ್ನು (ಮುಖಗವಸುಗಳನ್ನು) ಮತ್ತು ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಗೌರವಾನ್ವಿತ ವಸತಿ ಸಚಿವ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ವಿ. ಸೋಮಣ್ಣ, ಅವರಿಗೆ ಹಾಗೂ ಸಹಕಾರ ಮತ್ತು ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರಿಗೂ ಮತ್ತು ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಗೂ ಹಸ್ತಾಂತರಿಸಿದೆ.
ಮುಂಚೂಣಿಯಲ್ಲಿರುವ ಕಾರ್ಯಪಡೆ ಕರೋನಾ ವೈರಸ್ ವಿರುದ್ಧ ಕೆಚ್ಚೆದೆಯಿಂದ ಹೋರಾಡುತ್ತಿದ್ದಾರೆ. ನಾವೆಲ್ಲರೂ ಸುರಕ್ಷಿತವಾಗಿರಲು ನಮ್ಮ ಯೋಧರು ಅವರ ಕುಟುಂಬ ದೊಂದಿಗೆ ಕಳೆಯಬೇಕಾದ ಸಮಯವನ್ನು ನಮಗಾಗಿ ತ್ಯಾಗ ಮಾಡುತ್ತಿ ದ್ದಾರೆ. ಈಸಮಯದಲ್ಲಿ ಸೋಂಕು ತಡೆಗಟ್ಟುವಿಕೆಯ ಏಕೈಕ ಪರಿಹಾರ (ಮಾಸ್ಕ್) ಮುಖವಾಡಗಳು,ಹ್ಯಾಂಡ್ ಸ್ಯಾನಿಟೈಜರ್‌ಗಳು ಮತ್ತು ಸೋಂಕುನಿವಾರಕಗಳು ವೈರಸ್‌ನಿಂದ ರಕ್ಷಿಸಿಕೊಳ್ಳಲು ಲಭ್ಯವಿರುವ ಏಕೈಕ ರಕ್ಷಣಾ ಉಪಕರಣಗಳಾಗಿವೆ.
ಕಾರ್ಮಿಕ ದಿನದಂದು, ನಾಗರಿಕರನ್ನು ಕಾಪಾಡುವಲ್ಲಿ ದಣಿವರಿಯದ ಈಯೋಧರ ನಿಸ್ವಾರ್ಥ ಸೇವೆಗಾಗಿ ನಾವು ಅವರಿಗೆ ನಮಸ್ಕರಿಸುತ್ತೇವೆ ಎಂದು ಸಿನರ್ಜಿ ಸ್ಟ್ರಾಟೆಜಿಕ್ ಸೊಲ್ಯೂಷನ್ಸ್‌ನ ನಿರ್ದೇಶಕ ದಿಲೀಪ್ ಸತ್ಯ ಹೇಳಿದರು.