Tuesday, 5th November 2024

ಕಗ್ಗಂಟಾಗಿ ಉಳಿದ ರೂಪಾಯಿ 25 ಕೋಟಿ ಹಗರಣ

ಅರುಣಾ ಕುಮಾರಿ ಜತೆ ಉಮಾಪತಿ ಕೈ ಜೋಡಿಸಿದ್ದಾರಾ ಎಂಬ ಅನುಮಾನ

ಮೈಸೂರು: ೨೫ ಕೋಟಿ ರು.ಗಳ ಸಾಲ ಹಾಗೂ ಜಮೀನು ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಆದರೆ, ಇಡೀ ಪ್ರಕರಣವನ್ನು ತಾರ್ಕಿಕವಾಗಿ ಅಂತ್ಯಗೊಳಿಸುವುದಾಗಿ ನಟ ದರ್ಶನ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಶಪಥ ಮಾಡಿದ್ದಾರೆ.

ಇದರಲ್ಲಿ ಯಾರ ಕೈವಾಡ ಇದೆ ಎಂಬುದು ತಿಳಿದಿಲ್ಲ. ಅರುಣಾ ಕುಮಾರಿ, ಉಮಾಪತಿ, ಹರ್ಷ, ರಾಕಿ ಯಾರೇ ಆದರೂ ಸರಿ, ಇದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡೇ ತೀರುತ್ತೇನೆ ಎಂಬ ದಾಟಿಯಲ್ಲಿ ಮಾತನಾಡಿದ ದರ್ಶನ್, ಇದರಲ್ಲಿ ಅರುಣಾ ಕುಮಾರಿ ಜತೆ ಉಮಾಪತಿ ಕೈ ಜೋಡಿಸಿದ್ದಾರಾ ಎಂಬುದು ಬಗೆಹರಿಯಬೇಕಾಗಿರುವ ವಿಷಯ ಎಂಬ ಅನುಮಾನ ಕೂಡ ವ್ಯಕ್ತಪಡಿಸಿದರು.

ದರ್ಶನ್ ಹೇಳಿದ್ದು: ಏ.9ರಂದು ಮೈಸೂರಿನ ತೋಟದಲ್ಲಿದ್ದೆ. 25 ಕೋಟಿ ರು.ಗೆ ಶ್ಯೂರಿಟಿ ಹಾಕ್ತೀರ ಎಂದು ಉಮಾಪತಿಗೆ ಜೂ.6 ರಂದು ಕರೆ ಬಂದಿತ್ತು. ನಿರ್ಮಾಪಕ ಉಮಾಪತಿ ಜೂ.13ರಂದು ನನಗೆ ಕರೆ ಮಾಡಿದ್ದರು. ಕರೆ ಮಾಡಿ 25 ಕೋಟಿ ಲೋನ್‌ಗೆ ನಾನು ಶ್ಯೂರಿಟಿ ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದರು. ಹರ್ಷ ನನಗೆ ಹಳೆಯ ಪರಿಚಯ. ಉಮಾಪತಿ ಅರುಣಕುಮಾರಿಯನ್ನು ಮನೆಗೆ ಕರೆದುಕೊಂಡು ಬಂದಿದ್ದರು. ನಂತರ ಅರುಣಕುಮಾರಿ  ಬಹಳ ಚೆನ್ನಾಗಿಯೇ ಎಲ್ಲವನ್ನು ಹೇಳಿದ್ದರು. ಅರುಣಾಕುಮಾರಿ ಪ್ರತಿಯೊಂದು ವಿಚಾರವನ್ನು ಸತ್ಯ ಎಂಬಂತೆ ನನ್ನ ಮುಂದೆ ವಿವರಣೆ ನೀಡಿದ್ದರು. ನಾನು ರಾಕೇಶ್ ಕುಮಾರ್‌ಗೆ ಕರೆ ಮಾಡಿ ಅರುಣಕುಮಾರಿ ಜತೆ ಮಾತನಾಡುವಂತೆ ಹೇಳಿದೆ. ಆಕೆ ಅವರಿಗೂ ಸಂಪೂರ್ಣ ವಿವರಣೆ ನೀಡಿದರು.

ತೋಟ ನನ್ನ ಪತ್ನಿಯ ಹೆಸರಲ್ಲಿ ಇರೋದ್ರಿಂದ ನಾನು ಹೇಗೆ ಶ್ಯೂರಿಟಿ ನೀಡಲು ಸಾಧ್ಯ ಎಂದು ಅರುಣಾ ಕುಮಾರಿಯಲ್ಲಿ ಹೇಳಿದ್ದೆ. ಆದರೆ, ಆಕೆ ತಾನು ತೋಟ ನೋಡಲೇಬೇಕೆಂದು ಹೇಳಿದರು. ತೋಟ ವೆರಿಫೈ ಮಾಡಬೇಕು ಎಂದಿದ್ದರು. ಆಕೆ ಹರ್ಷ, ಪತ್ನಿ ಊರ್ವಶಿ ಹೆಸರನ್ನೂ ಹೇಳಿದ್ದಳು. ಅರುಣಕುಮಾರಿ ಎಲ್ಲರ ಹೆಸರನ್ನು ಸಾರಾ ಸಾಗಾಟಾಗಿ ಹೇಳಿದ್ದರಿಂದ ನಾನೂ ಮೊದಲು ಆಕೆಯನ್ನು ನಂಬಿದ್ದೆ. ಆಕೆಯ ಜತೆ ಇನ್ನಿಬ್ಬರೂ ಹುಡುಗರು ಸಹ ಇದ್ದರು. ರಾಕೇಶ್ ಹಾಗೂ ಹರ್ಷ ತೋಟಕ್ಕೆ ಬಂದಿದ್ದರು. ಹರ್ಷರನ್ನು ತೋಟದಲ್ಲಿ ನೋಡಿದ ಅರುಣಾಕುಮಾರಿ ಶಾಕ್ ಆಗಿದ್ದರು. ಈ ಮೊದಲು ಹರ್ಷ ಸಾಲಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದರು ಎಂದು ಹೇಳಿದ್ದ ಅರುಣಾ ಬಳಿಕ ಹರ್ಷ ಯಾರೆಂದೇ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಹರ್ಷಾರ ಹಳೆಯ ಫೋಟೋವನ್ನು ಮಾತ್ರ ಅರುಣಾಕುಮಾರಿ ಗುರುತಿಸುತ್ತಿದ್ದರು. ಸಂಪೂರ್ಣ ಘಟನೆ ಗೊಂದಲಮಯವಾಗಿತ್ತು. ಈಕೆ ಧೀರಜ್ ಪ್ರಸಾದ್‌ರಿಂದ ಒತ್ತಡ ಇದೆ. ಧೀರಜ್ ಪ್ರಸಾದ್, ಶ್ರೀನಿವಾಸ್ ಪ್ರಸಾದ್ ಅವರ ಸಂಬಂಧಿ ಎಂದು ನನ್ನ ಬಳಿ ಹೇಳಿದ್ದಳು. ಈಕೆ ಫೇಸ್‌ಬುಕ್‌ನಲ್ಲಿ ರಾಕೇಶ್ ಶರ್ಮಾ ಫೋಟೋ ಡೌನ್‌ಲೋಡ್ ಮಾಡಿದ್ದಳು. ಬ್ಯಾಂಕ್‌ನಲ್ಲಿ ವಿಚಾರಿಸಿದ ವೇಳೆ ಈಕೆ -ಕ್ ಎಂದು ತಿಳಿದಿದೆ. ಕೂಡಲೇ ನಾವು ಉಮಾ ಪತಿ ಭೇಟಿ ಮಾಡಲು ಮುಂದಾದೆವು. ಅರುಣಕುಮಾರಿ ಅವರೇ ಭೇಟಿ ಮಾಡಿಸಿದ್ದರಿಂದ ನಮಗೂ ಸ್ಪಷ್ಟನೆ ಬೇಕಿತ್ತು. ನಾನೇ ಉಮಾಪತಿಗೆ ಪ್ರಕರಣ ಸಂಬಂಧ ದೂರನ್ನು ನೀಡಲು ಹೇಳಿದ್ದೆ.

ನಾನು ಆರ್‌ಆರ್‌ನಗರದಲ್ಲಿ ದೂರು ನೀಡುತ್ತೇನೆ ಎಂದಿದ್ದೆ. ‘ದೂರು ನೀಡಿದ ಬಳಿಕ ಅರುಣಕುಮಾರಿ ತಾವು ಸತ್ಯ ಹೇಳೋದಾಗಿ ಹೇಳಿದ್ದರು. ಹೀಗಾಗಿ ಸತ್ಯಾಂಶ ಹೇಳಿ ಹೋಗುವಂತೆ ಅರುಣಕುಮಾರಿಗೆ ತಿಳಿಸಿದವು. ಬಳಿಕ ಇಷ್ಟೆ ಮಾಡಿದ್ದು, ಉಮಾಪತಿ ಎಂದು ಅರುಣ್‌ಕುಮಾರಿ ಹೇಳಿದ್ದಾರೆ. ಅಲ್ಲದೇ ಆಕೆ ಈ ಎಲ್ಲಾ ಪ್ರಕರಣಕ್ಕೆ ಉಮಾಪತಿಯೇ ಕಾರಣ ಎಂದು ಹೇಳಿದ್ದಾರೆ. ಸತ್ಯ ಬಾಯಿ ಬಿಟ್ಟರೆ ಸಾಯಿಸಿ ಬಿಡುತ್ತೇನೆ ಎಂದು ಉಮಾಪತಿ ಬೆದರಿಕೆ ಹಾಕಿದ್ದಾರೆಂದು ಅರುಣ್ ಕುಮಾರಿ ತಿಳಿಸಿದ್ದರು.

***

ನಾನು ಈ ಪ್ರಕರಣದಲ್ಲಿ ಯಾರನ್ನೂ ದೂಷಿಸುತ್ತಿಲ್ಲ. ನಾನು ಅರುಣಕುಮಾರಿ ಹಾಗೂ ಉಮಾಪತಿಯನ್ನೇ ಮುಖಾಮುಖಿ ಮಾಡಿ ನಿಲ್ಲಿಸಿದ್ದೇನೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತಪ್ಪಿತಸ್ಥರು ಯಾರೆಂದು ತಿಳಿದರೆ ಅವರನ್ನು ಮಾತ್ರ ನಾನು ಸುಮ್ಮನೇ ಬಿಡೋದಿಲ್ಲ.
– ದರ್ಶನ್ ನಟ