Saturday, 14th December 2024

ಡಿ.೧೨ ರೊಳಗೆ ನಮ್ಮ ಸಮಾಜಕ್ಕೆ ೨ಎ ಮೀಸಲಾತಿ ಕೊಡಲೇಬೇಕು

ಇಂಡಿ: ಆರ್ಥಿಕವಾಗಿ, ಸಾಮಾಜಿಕ, ಶೈಕ್ಷಣಿಕವಾಗಿ ೨ಎ ಮೀಸಲಾತಿ ಬೇಡಲಾಗುತ್ತಿದೆ ವಿನಹ: ರಾಜಕೀಯವಾಗಿ ಕೇಳತಾ ಇಲ್ಲ, ನಮ್ಮ ಬೋಮ್ಮಾಯಿ ಸಾಹೇಬ್ರು ಎಲ್ಲೋ ನಮ್ಮ ಮುಂದೇ ಮಾಡುತ್ತೇನೆ ಎಂದು ಹೇಳಿ ಹಿಂದೇ ಮತ್ತೇನು ಹೇಳುತ್ತಾರೆ ಗೊತ್ತಿಲ್ಲ, ಸುಮ್ಮನ್ನೆ ಜೊಕ್ಕೊಂಡು ಹೋಗಬೇಡಿ ಇನ್ನು ತಡೆಯುವ ಶಕ್ತಿ ಯಾರಿಂದಲೂ ಅಸಾಧ್ಯ. ಡಿ.೧೨ ರ ಒಳಗಾಗಿ ನಮ್ಮ ಸಮಾಜಕ್ಕೆ ೨ಎ ಮೀಸಲಾತಿ ಕೊಡಲೇಬೇಕು ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದರು.

ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದ ಹತ್ತಿರ ಬೃಹತ್ತ್ ವೇದಿ ಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾವೇಶ, ಗಡಿನಾಡು ಲಿಂಗಾಯತ ಪಂಚಮಸಾಲಿ ೨ಎ ಮೀಸಲಾತಿ ಹಕ್ಕೋತ್ತಾಯ, ರಾಷ್ಟç ಮಾತೆ ಕಿತ್ತೂರ ಚೆನ್ನಮ್ಮಾ ೧೪೪ನೇ ಜಯಂತ್ಯೋತ್ಸವ ೧೯೯ನೇ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಾನು ಮಿಸಲಾತಿ ಒಂದೇ ಸಮುದಾಯದ ಕುರಿತು ಸರ್ಕಾರದ ಮಟ್ಟದಲ್ಲಿ ಮಿಸಲಾತಿ ಕೇಳಿಲ್ಲ ಎಸ್ಸಿ.ಎಸ್.ಟಿ . ಬಣಜಿಗ ಎಲ್ಲ ಸಮುದಾಯದ ಎಳ್ಗೇ ಕುರಿತು ಕೇಳಿದ್ದೇವೆ.

ಪ್ರತಿಯೊಂದು ಸಮುದಾಯದಲ್ಲಿ ಬಡವರಿದ್ದಾರೆ ಶೈಕ್ಷಣಿಕ, ಸಾಮಾಜಿಕ ,ಆರ್ಥಿಕ ಅಭಿವೃದ್ದಿ ಹೊಂದಲು ಮಿಸಲಾತಿ ಎಲ್ಲಾ ಸಮುದಾಯಕ್ಕೆ ಸಂವಿಧಾನ ಬದ್ದ ನ್ಯಾಯ ಸಿಗಲಿ. ಈಗ ಮಿಸಲಾತಿ ಸಿಗುತ್ತದೆ ಎಂಬುದು ಕೆಲವರಿಗೆ ಗೊತ್ತಾಗಿದೆ ಪ್ರಾಣ ಕೊಟ್ಟೇವು ಮಿಸಲಾತಿ ಬಿಡುವುದಿಲ್ಲ ಎಂದು ನಿನ್ನೇಯಿಂದ ಹೊಸ ನಾಟಕ ಪ್ರಾರಂಭಿಸಿದ್ದಾರೆ. ಮಿಸಲಾತಿ ಕೊಟ್ಟರೆ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮಿಗಳಿಗೆ ,ಬಸವನಗೌಡ ಪಾಟೀಲರಿಗೆ ಕ್ರೀಡೇಟ್ ಹೋಗುತ್ತದೆ ಎಂಬುದು ಅವರದಾಗಿದೆ.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ ವೀರ ರಾಣಿ ಕಿತ್ತೂರ ಚೆನ್ನಮ್ಮಾ ದೇಶದ ಸ್ವಾತಂತ್ರö್ಯ ಸಾರ್ವ ಭೌಮ್ವಕ್ಕಾಗಿ ಹೋರಾಟ ಮಾಡಿದ ವೀರ ಮಹಿಳೆ. ೨ ಮಿಸಲಾತಿ ನಾವು ಯಾರಿಂದಲೂ ಕಿತ್ತುಕೊಳ್ಳುತ್ತಿಲ್ಲ ಸಂವಿಧಾನ ಬದ್ದ ಹಕ್ಕು ಪಡೆಯದೆ ಬಿಡುವುದಿಲ್ಲ ಎಂದು ಹೇಳಿದರು.

ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದಬಸವಜಯ ಮೃತ್ಯುಂಜಯಸ್ವಾಮಿಗಳು ಆರ್ಶೀವಚನ ನೀಡಿದರು.

ಮಾಜಿ ಶಾಸಕ ರವಿಕಾಂತ ಪಾಟೀಲ, ಮಾಜಿ ಶಾಸಕ ಡಾ, ಸಾರ್ವಭೌಮ ಬಗಲಿ, ಕಾಸುಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಎಸ್.ಎ ಪಾಟೀಲ, ವ್ಹಿ.ಎಚ್ ಬಿರಾದಾರ ,ಭೀಮನಗೌಡ ಪಾಟೀಲ, ಶಂಕರಗೌಡ ಬಿರಾದಾರ, ಶ್ರೀಮಂತ ಇಂಡಿ, ಸೋಮಶೇಖರ ದೇವರ ಸೇರಿದಂತೆ ಅನೇಕ ಮುಖಂಡರು ವೇದಿಕೆಯಲ್ಲಿದ್ದರು.
ಅನೀಲಗೌಡ ಬಿರಾದಾರ, ಬಾಳು ಮುಳಜಿ, ಶರಣಗೌಡ ಬಂಡಿ, ಸುಧಾಕರಗೌಡ ಬಿರಾದಾರ, ಭೀಮರಾಯಗೌಡ ಪಾಟೀಲ,ಭೀಮನಗೌಡ ಪಾಟೀಲ, ಸುರೇಶ ಶಿವೂರ, ಪ್ರಭು ಹೊಸಮನಿ ಭೀಮು ಪ್ರಚಂಡಿ, ಧನರಾಜ ಮುಜಗೊಂಡ, ಶಾಂತು ಶಿರಕನಹಳ್ಳಿ, ಬುದ್ದುಗೌಡ ಪಾಟೀಲ, ಉಮೇಶ ಲಚ್ಯಾಣ , ಲಕ್ಷಿö್ಮÃಕಾಂತ ಬಿರಾದಾರ, ಅಣ್ಣಪ್ಪ ಬಿದರಕೋಟಿ, ಎಂ.ಆರ ಪಾಟೀಲ, ಅಪ್ಪುಗೌಡ ಪಾಟೀಲ, ಶ್ರೀಕಾಂತ ಕುಡಿಗನೂರ, ಅಪ್ಪಾಸಾಹೇಬ ತಾಂಬೆ, ಶ್ರೀಶೈಲ ಮುಳಜಿ, ಶ್ರೀಮಂತ ಬಾರಿಕಾಯಿ, ರಾಜು ಹದಗಲ್ ಶ್ರೀಶೈಲಗೌಡ ಪಾಟೀಲ, ಪ್ರಭು ಶಿರಕನಹಳ್ಳಿಸೇರಿದಂತೆ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮಕ್ಕಿಂತ ಮುಂಚ್ಚೆ ವಿವಿಧ ವಾದ್ಯ ವೈಭೋಗಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೀರ ಮಹಿಳೆ ಕಿತ್ತೂರ ರಾಣಿ ಚೆನ್ನಮ್ಮಾ, ಸಂಗೋಳ್ಳಿ ರಾಯಣ್ಣನ ಸ್ಥಬ್ದ ಚಿತ್ರಣವನ್ನು ಹಾಗೂ ಕೂಡಲಸಂಗ ಪೀಠದ ಜಯಮೃತುಂಜಯ ಮಹಾಸ್ವಾಮಿಜೀಯವರನ್ನು ತೇರೆದ ವಾಹನದಲ್ಲಿ ಮೇರವಣಿಗೆ ಮಾಡಲಾಯಿತು.

ಪೋಟೋಕ್ಯಾಪ್ಸನ್ ೧೫ ಇಂಡಿ೦೧: ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದ ಹತ್ತಿರ ಬೃಹತ್ತ್ ವೇದಿಯಲ್ಲಿ ೨ ಎ ಮಿಸಲಾತಿ ಹೋರಾಟ ಸಭೆಯನ್ನು ಶಾಸಕ ಬಸವನಗೌಡ ಪಾಟೀಲ, ಕೂಡಲಸಂಗಮ ಪೀಠದ ಜಯಮೃತುಂಜಯ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸುತ್ತಿರುವುದು.

*

ಡಾ.ಬಾಬಾಸಾಹೇಬ ಅಂಬೇಡ್ಕರ ಇಡೀ ದೇಶದ ನಾಯಕ ಒಂದೇ ಸಮುದಾಯದ ನಾಯಕರಲ್ಲ ಅವರು ಈ ದೇಶದ ಹಣೆಬರಹ  ಬರೇದ ಮಹಾನ್ ದಾರ್ಶನಿಕ ಯುಗ ಪುರುಷ ಅವರಿಗೆ ಬೇರೆ ಬೇರೆ ದೇಶದವರಿಂದ ರಾಜ್ಯ ಮರ್ಯಾದೆ ಇತ್ತು ತನ್ನ ಮಕ್ಕಳು ಮರಿಮೋಮ್ಮಕ್ಕಳಿಗೆ ಏನೂ ಮಾಡಿಲ್ಲ,ಅಧಿಕಾರ, ಸಂಪತ್ತು ಗಳಿಸಲ್ಲಿಲ್ಲ ಎಷ್ಟೋ ಕಷ್ಟ ನಷ್ಟಗಳು ಅನುಭವಿಸಿದರೂ ಅವರು ತಪ್ಪು ನಿರ್ಣಯ ಕೈಗೊಳ್ಳಲಿಲ್ಲ ಭಾರತ ದೇಶದ ಇಡೀ ಎಲ್ಲ ಸಮುದಾಯಕ್ಕೆ ನ್ಯಾಯ ನೀಡಿದ್ದಾರೆ. ಆದ್ದರಿಂದಲೇ ಅವರನ್ನು ದೇವರ ಸ್ಥಾನದಲ್ಲಿ ಪೂಜಿಸುತ್ತಾರೆ ಎಂದರು.
ಬಸವನಗೌಡ ಪಾಟೀಲ ಯತ್ನಾಳ