Thursday, 12th December 2024

37 ಹೊಸ ಕರೋನಾ ಪ್ರಕರಣ: ಸೋಂಕಿತರ ಸಂಖ್ಯೆ 651

ವಿಶ್ವವಾಣಿ ಸುದ್ದಿಮನೆ
 ಬೆಂಗಳೂರು
ಬೆಂಗಳೂರಿನಲ್ಲಿ ಪೊಲೀಸ್ ಸೇರಿದಂತೆ  ಒಟ್ಟು 37 ಹೊಸ ಕರೋನಾ ಪ್ರಕರಣಗಳು ರಾಜ್ಯದಲ್ಲಿ ದೃಢವಾಗಿದ್ದು ಸೋಂಕಿತರ ಸಂಖ್ಯೆ 651ಕ್ಕೆ ಏರಿದೆ. ಇಬ್ಬರು ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 27 ತಲುಪಿದೆ.
321 ಜನ ಗುಣಮುಖರಾಗಿ ಮನೆಗೆ ತೆರಳಿದ್ದು 300 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರ ಸ್ಥಿತಿ‌ಗಂಭೀರವಾಗಿದ್ದು ತೀವ್ರ ನಿಗಾ ಘಟಕಗಳಲ್ಲಿರಿಸಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಶ್ರೂಷಕಿಯಿಂದ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರಲ್ಲಿ 19 ಜನರಿಗೆ ಸೋಂಕು ಹರಡಿದ್ದು ಒಟ್ಟು 22 ಮಂದಿಯಲ್ಲಿ‌ ಸೋಂಕು ದೃಢವಾಗಿದೆ. ಬೀದರ್ ನಿಂದ 7,ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಹಾವೇರಿಯ ಸವಣೂರು, ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಂದು, ಕಲಬುರಗಿ2 ಹಾಗೂ ಮಂಡ್ಯ ಜಿಲ್ಲೆಗೆ ಮುಂಬಯಿಯಿಂದ ಆಗಮಿಸಿರುವ ಹಿನ್ನೆಲೆ‌ ಹೊಂದಿರುವ  ಇಬ್ಬರಲ್ಲಿ ಸೋಂಕು ಮತ್ತೆ ಕಂಡು ಬಂದಿದೆ.
 *ಕಾರ್ಮಿಕರಿಗೆ ಉಚಿತ ಸಾರಿಗೆ ಸೌಲಭ್ಯ ಎರಡು ದಿನಗಳ‌ ವಿಸ್ತರಣೆ*
ವಲಸೆ ಕಾರ್ಮಿಕರಿಗೆ ಉಚಿತ ಬಸ್ ಪ್ರಯಾಣ ಸೌಕರ್ಯವನ್ನು ಮುಂದಿನ ಎರಡು ದಿನಗಳ ಅವಧಿಗೆ ಸರ್ಕಾರವು ವಿಸ್ತರಿಸಿದೆ. ಈಗಾಗಲೇ 951 ಬಸ್‌ ಗಳಲ್ಲಿ 30 ಸಾವಿರ ಜನರು ತಮ್ಮ‌ಊರುಗಳಿಗೆ ಪ್ರಯಾಣಿಸಿದ್ದಾರೆ. ಬೆಂಗಳೂರಿನಲ್ಲಿ ಇದಕ್ಕಾಗಿ 550 ಬಸ್ ಗಳು ಹಾಗೂ ಇತರೆ ನಗರಗಳಲ್ಲಿ 400 ಬಸ್ ಗಳನ್ನು ಈ ಸೌಲಭ್ಯಕ್ಕೋಸ್ಕರ ಕಾಯ್ದಿರಿಸಲಾಗಿದೆ. ರಾಜಾಸ್ಥಾನ, ಬಿಹಾರ, ಒಡಿಸ್ಸಾ ರಾಜ್ಯಗಳಿಗೆ ರೈಲು ಸೌಲಭ್ಯವನ್ನೂ  ಒದಗಿಸಲಾಗಿದೆ.
 *ಖಾಸಗಿ ಮೆಡಿಕಲ್ ಕಾಲೇಜುಗಳಲ್ಲೂ‌ ಕೋವಿಡ್ ಲ್ಯಾಬ್ ಗಳು*
ರಾಜ್ಯದಲ್ಲಿರುವ ಎಲ್ಲಾ ಖಾಸಗಿ‌ ಮೆಡಿಕಲ್ ಕಾಲೇಜುಗಳು ಹಾಗೂ ಇ‌ಎಸ್ಐಸಿ ಮೆಡಿಕಲ್ ಕಾಲೇಜುಗಳಲ್ಲಿ ಕಡ್ಡಾಯವಾಗಿ ಕೋವಿಡ್ ಪರೀಕ್ಷಾರ್ಥವಾದ ಆರ್.ಟಿ.ಪಿ.ಸಿ.ಆರ್ ಲ್ಯಾಬ್ ಗಳನ್ನು ಪ್ರಾರಂಭಿಸಬೇಕೆಂದು ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ.
 *ಕೋವಿಡ್ ಕೆಲಸದಲ್ಲಿ ಮೃತರಾಗುವ ನೌಕರರ ಕುಟುಂಬಕ್ಕೆ ಮೂವತ್ತು ಲಕ್ಷ ಪರಿಹಾರ*
ಕೋವಿಡ್ ಪರಿಹಾರ‌ ಕಾರ್ಯದಲ್ಲಿ ತೊಡಗಿಕೊಂಡಿರುವ ಆಶಾ ಕಾರ್ಯಕರ್ತೆ ಯರು, ಪೊಲೀಸ್, ಪೌರಕಾರ್ಮಿಕರು ಸೇರಿದಂತೆ ಹಲವು ನೌಕರರು ದುರದೃಷ್ಟವಷಾತ್ ಮೃತಪಟ್ಟಲ್ಲಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮಾರ್ಗಸೂಚಿಗಳಂತೆ ಅವರ ಕುಟುಂಬಕ್ಕೆ ಮೂವತ್ತು ಲಕ್ಷ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.
ಸೋಂಕಿತರ ವಿವರ:
1. ರೋಗಿ 643: ಬೀದರ್ ನಿವಾಸಿ 35 ವರ್ಷದ ಮಹಿಳೆ. ರೋಗಿ 590ರ ಜೊತೆ ಸಂಪರ್ಕ
2. ರೋಗಿ 644: ಬೀದರ್ ನಿವಾಸಿ 46 ವರ್ಷದ ಮಹಿಳೆ. ರೋಗಿ 590ರ ಜೊತೆ ಸಂಪರ್ಕ
3. ರೋಗಿ 645: ಬೀದರ್ ನಿವಾಸಿ 50 ವರ್ಷದ ಮಹಿಳೆ. ರೋಗಿ 590ರ ಜೊತೆ ಸಂಪರ್ಕ
4. ರೋಗಿ 646: ಬೀದರ್ ನಿವಾಸಿ 16 ವರ್ಷದ ಬಾಲಕ. ರೋಗಿ 590ರ ಜೊತೆ ಸಂಪರ್ಕ
4. ರೋಗಿ 647: ಬೀದರ್ ನಿವಾಸಿ 72 ವರ್ಷದ ವೃದ್ಧೆ. ರೋಗಿ 590ರ ಜೊತೆ ಸಂಪರ್ಕ
5. ರೋಗಿ 648: ಬೀದರ್ ನಿವಾಸಿ 22 ವರ್ಷದ ಯುವಕ. ರೋಗಿ 590ರ ಜೊತೆ ಸಂಪರ್ಕ
6. ರೋಗಿ 649: ಬೀದರ್ ನಿವಾಸಿ 60 ವರ್ಷದ ವೃದ್ಧ. ರೋಗಿ 590ರ ಜೊತೆ ಸಂಪರ್ಕ
7. ರೋಗಿ 650: ಬೆಂಗಳೂರ ನಗರದ 40 ವರ್ಷದ ಪುರುಷ. ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
8. ರೋಗಿ 651: ದಾವಣಗೆರೆಯ 48 ವರ್ಷದ ಮಹಿಳೆ. ರೋಗಿ 533ರ ಜೊತೆ ದ್ವಿತೀಯ ಸಂಪರ್ಕ
ಬೆಳಗ್ಗೆ ಕಲಬುರಗಿಯಲ್ಲಿ 56 ವರ್ಷದ ಪುರುಷ ಸಾವನ್ನಪ್ಪಿರುವ ಬಗ್ಗೆ ಆರೋಗ್ಯ ಇಲಾಖೆ ತಿಳಿಸಿತ್ತು. ಸಂಜೆ ಬುಲೆಟಿನ್ ನಲ್ಲಿ ದಾವಣಗೆರೆಯ 48 ವರ್ಷದ ಮಹಿಳೆ (ರೋಗಿ 651) ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ಮೇ 1ರಂದು ಆಸ್ಪತ್ರೆಗೆ ದಾಖಲಾಗಿದ್ದರು. ದಾವಣಗೆರೆಯಲ್ಲಿ ಇದು ಎರಡನೇ ಸಾವು ಆಗಿದೆ. ಇಂದು ಒಟ್ಟು 28 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ದಾವಣಗೆರೆಯಲ್ಲಿ ಕರೋನಾಗೆ ಎರಡನೇ ಬಲಿ
ಕರೋನಾ ವೈರಸ್‍ಗೆ ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದ್ದು, 48 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಸ್ಟಾಫ್ ನರ್ಸ್(ರೋಗಿ ಸಂಖ್ಯೆ 533) ದ್ವಿತೀಯ ಸಂಪರ್ಕಕ್ಕೆ ಬಂದ ರೋಗಿ ಸಂಖ್ಯೆ 651 ಮೃತಪಟ್ಟಿದ್ದಾರೆ. ಭಾನುವಾರ ಈ ಮಹಿಳೆ ಸೇರಿದಂತೆ 21 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಜಿಲ್ಲಾ ಆಸ್ಪತ್ರೆ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ದಾವಣಗೆರೆಯಲ್ಲಿ ಒಟ್ಟು 32 ಮಂದಿಗೆ ಸಂಕು ಬಂದಿದ್ದು, 28 ಸಕ್ರಿಯ ಪ್ರಕರಣಗಳಿವೆ. ಇಬ್ಬರು ಈಗಾಗಲೇ ಡಿಸ್ಚಾರ್ಜ್ ಆಗಿದ್ದಾರೆ. ಮೇ1 ರಂದು 69 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಜಾಲಿನಗರದ ವೃದ್ಧನಿಗೆ ಸೋಂಕು ಹೇಗೆ ಬಂದಿದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.