Monday, 4th November 2024

ಸ್ಮಾರಕದ ಮರು ನಿರ್ಮಾಣಕ್ಕೆ 3ಡಿ ತಂತ್ರಜ್ಞಾನ ಸಹಕಾರಿ

ಪಾಂಡವಪುರ: ಹಾನಿಗೊಳಗಾದ ಸ್ಮಾರಕದ ಮರು ನಿರ್ಮಾಣಕ್ಕೆ 3ಡಿ ತಂತ್ರಜ್ಞಾನ ಸಹಕಾರಿ ಎಂದು ಲೇಖಕ ಹರವುದೇವೇಗೌಡ ಹೇಳಿದರು

ಹರವು ಗ್ರಾಮದ ಪ್ರಾಚೀನ ಸ್ಮಾರಕ ರಾಮದೇವರ ದೇಗುಲ ಕಳೆದ 20ವರ್ಷಗಳಿಂದ ಕಾಮಗಾರಿ ನಡೆದು ಕಳೆದ ನಾಲ್ಕು ವರ್ಷಗಳ ಹಿಂದೆ ಲೋಕಾರ್ಪಣೆಯಾಗಿತ್ತು . ಈಗ ಈ ಸ್ಮಾರಕವನ್ನು ಪುರಾತತ್ವ ಮತ್ತು ಪ್ರಾಚ್ಯ ವಸ್ತು ಸಂಗ್ರಹಾಲಯಗಳ ಇಲಾಖೆ ಈಗ 3ಡಿ ತಂತ್ರಜ್ಞಾನ ಬಳಸಿ ಡಿಜಿಟಲೀಕರಣಗೊಳಿಸು ಕಾರ್ಯಕ್ಕೆ ಹೊಸವರ್ಷದ ದಿನವಾದ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು

ಡಿಜಿಟಲೀಕರಣದ ಮೂಲಕ ಸ್ಮಾರಕದ ಸಮರ್ಪಕ ಅಳತೆ, ಆಳ, ಅಗಲ ಹಾಗು ಸ್ಮಾರಕಕ್ಕೆ ಬಳಸಲಾಗಿರುವ ಸಾಮಗ್ರಿಗಳು, ನಿರ್ಮಾಣಗೊಂಡ ವರ್ಷ, ಯಾರಕಾಲದಲ್ಲಿ ನಿರ್ಮಾಣಗೊಂಡಿದೆ ಎನ್ನುವ ಅಂಶಗಳನ್ನು ಪತ್ತೆಹಚ್ಚಲು ಸುಲಭವಾಗುತ್ತದೆ ಎಂದರು

ಇದರಿಂದ ಮುಂದೆ ಸಂಶೋದಕರಿಗೆ , ಇತಿಹಾಸದ ವಿದ್ಯಾರ್ಥಿಗಳಿಗೆ ಉಪಯೋಗವಾಗುವುದರ ಜೊತೆಗೆ ಭವಿಷ್ಯದಲ್ಲಿ ಮುಂದೆ ಹಾನಿಗೊಳಗಾದರೆ ಪುನರ್ ನಿರ್ಮಿಸಲು ಈ ತಂತ್ರಜ್ಞಾನ ಬಹಳ ಉಪಯೋಗವಾಗುತ್ತದೆ ಎಂದರು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯ ರಾಜಶೇಖರ್, ಸಚಿನ್ ಇದ್ದರು.