Saturday, 14th December 2024

ಆ.23ರಿಂದ 9 ರಿಂದ 12ನೇ ತರಗತಿಗಳು ಆರಂಭ: ಬಿ.ಸಿ ನಾಗೇಶ್‌

ಬೆಂಗಳೂರು: ರಾಜ್ಯದಲ್ಲಿ 9 ರಿಂದ 12ನೇ ತರಗತಿಗಳು ಆ.23ರಿಂದ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಘೋಷಣೆ ಮಾಡಿದ್ದಾರೆ.

ಇಂದು ನಗರದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಬಿಸಿ ನಾಗೇಶ್ ಫ್ರೌಢ ಶಿಕ್ಷಣ ಮಂಡಳಿಯಲ್ಲಿ ಫಲಿತಾಂಶ ಪ್ರಕಟಿಸಿದ ಬಳಿಕ ಈ ಬಗ್ಗೆ ಮಾಹಿತಿ ನೀಡಿದರು.

ಇದೇ ವೇಳೆ ಮಕ್ಕಳನ್ನು ಶಾಲೆಗೆ ಕಳುಹಿಸಲು ತಂದೆ -ತಾಯಿ ಹೆದರುತ್ತಿದ್ದಾರೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಯಾವುದೇ ರೀತಿಯಲ್ಲಿ ಅಡೆ ತಡೆ ಇಲ್ಲದೇ ಮಕ್ಕಳಲ್ಲಿ ಸೊಂಕು ಉಂಟಾಗದಂತೆ ನಡೆಸಲಾಗಿದೆ, ಯಶಸ್ವಿಯಾಗಿ ಕೂಡ ಪರೀಕ್ಷೆ ಮುಗಿದಿದೆ. ಈ ಹಿನ್ನಲೆಯಲ್ಲಿ ಮಕ್ಕಳ ತಂದೆ-ತಾಯಿಯಗಳು ಶಾಲೆಗೆ ಕಳುಹಿಸುತ್ತಾರೆ ಎನ್ನುವ ನಂಬಿಕೆ ಇದೆ. ಶಾಲಾ ವೇಳೇಯಲ್ಲಿ ಎಲ್ಲಾ ಮಾರ್ಗಸೂಚನೆಗಳನ್ನು ಅನುಸರಿಸ ಲಾಗುವುದು ಎಂದು ಹೇಳಿದರು.