Friday, 13th December 2024

ಹಿರಿಯ ವಿದ್ವಾಂಸ ಎ.ನರಸಿಂಹ ಭಟ್ ನಿಧನ

ಕಾಸರಗೋಡು: ಹಿರಿಯ ವಿದ್ವಾಂಸ, ಭಾಷಾಂತರಕಾರ, ನಿವೃತ್ತ ಎಇಒ ಎ.ನರಸಿಂಹ ಭಟ್ (92) ಶನಿವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೂಲತಃ ಅಡ್ಯನಡ್ಕ ನಿವಾಸಿಯಾಗಿದ್ದ ಕಾಸರಗೋಡು ಕೋಟೆಕಣಿ ನಿವಾಸಿಯಾಗಿದ್ದ ನರಸಿಂಹ ಭಟ್‌ ಅವರು, ಮುಂದೆ ಅಧ್ಯಾಪಕರಾಗಿ, ಮುಖ್ಯೋ ಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.

ಉಪಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಸಾಹಿತಿ ಹಾಗೂ ಶ್ರೇಷ್ಠ ಬರಹಗಾರರಾಗಿದ್ದ ಅವರು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಇವರು ಕಾಸರಗೋಡು ಹವ್ಯಕ ಭಾರತೀ ಸೇವಾ ಟ್ರಸ್ಟ್ ನ ಹಿರಿಯ ಸದಸ್ಯರೂ ಆಗಿದ್ದರು.

ಮೃತರು ಒಬ್ಬ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.