Saturday, 26th October 2024

ಎರಡು ಕ್ಷೇತ್ರಗಳಲ್ಲಿ ಕೈ-ದಳ ಒಳ ಒಪ್ಪಂದ?

ಹುಣಸೂರು ಕಾಂಗ್ರೆೆಸ್‌ಗೆ, ಯಶವಂತಪುರ ಜೆಡಿಎಸ್‌ಗೆ 12 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಮೇಲ್ನೋೋಟಕ್ಕೆೆ ಮಾತ್ರ ಕಾಂಗ್ರೆೆಸ್-ಜೆಡಿಎಸ್ ಮೈತ್ರಿಿ ಅಂತ್ಯ ಎಂದು ಬೀಗುತ್ತಿಿರುವ ಎರಡೂ ಪಕ್ಷದ ನಾಯಕರು ಉಪಚುನಾವಣೆಯಲ್ಲಿ ಮತ್ತೆೆ ಒಂದಾಗಿರುವುದು ಬೆಳಕಿಗೆ ಬಂದಿದೆ. ಹುಣಸೂರು ಮತ್ತು ಯಶವಂತಪುರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿಗೆ ಒಳ ಒಪ್ಪಂದ ನಡೆದಿರುವ ಗುಮಾನಿ ಕೇಳಿ ಬಂದಿದೆ.
ಅನರ್ಹರನ್ನೇ ಗುರಿಯಾಗಿಸಿಕೊಂಡಿರುವ ಕಾಂಗ್ರೆೆಸ್-ಜೆಡಿಎಸ್ ಮತ್ತೊೊಮ್ಮೆೆ ಮೈತ್ರಿಿಗೆ ಮುಂದಾಗಿದ್ದಾಾರೆ. ಈ ಎರಡೂ ಕ್ಷೇತ್ರಗಳಲ್ಲಿ ಹುಣಸೂರು ಕಾಂಗ್ರೆೆಸ್‌ಗೆ ಮತ್ತು ಯಶವಂತಪುರ ಜೆಡಿಎಸ್‌ಗೆ ಎಂದು ನಾಯಕರಲ್ಲಿ ಮಾತುಕತೆ ನಡೆದಿರುವುದು ಮಾಹಿತಿ ಮೂಲಗಳು ತಿಳಿಸಿವೆ. ಏಕೆಂದರೆ ಈ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಾಬಲ್ಯ ಇಲ್ಲದಿದ್ದರೂ ಕಾಂಗ್ರೆೆಸ್-ಜೆಡಿಎಸ್ ಪೈಪೋಟಿ ಇರುವುದರಿಂದ ಹೊಂದಾಣಿಕೆಯ ಮಂತ್ರ ಜಪಿಸಲಾಗುತ್ತಿಿದೆ.

ಯಶವಂತಪುರದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆೆಸ್‌ನಿಂದ ಸ್ಪರ್ಧಿಸಿ ಎಸ್.ಟಿ.ಸೋಮಶೇಖರ್ ಅವರು 1,15,273 ಮತಗಳನ್ನು ಪಡೆದು ವಿಜೇತರಾಗಿದ್ದರು. ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರು 1,04,562 ಪಡೆದು ಎರಡನೇ ಸ್ಥಾಾನ, ನಂತರ ಬಿಜೆಪಿ ಅಭ್ಯರ್ಥಿ ಜಗ್ಗೇಶ್ 59,308 ಮತ ಪಡೆದು ಮೂರನೇ ಸ್ಥಾಾನ ಪಡೆದರು. ಜವರಾಯಿಗೌಡ ವಿರುದ್ಧ ಎಸ್.ಟಿ.ಸೋಮಶೇಖರ್ 10,711 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಇಲ್ಲಿ ನಡೆಯುವ ಮ್ಯಾಾಜಿಕ್ ಬೇರೆಯಾಗಿದೆ. ಕಾಂಗ್ರೆೆಸ್‌ಗೆ ಗುಡ್‌ಬಾಯ್ ಹೇಳಿ ಬಿಜೆಪಿ ಸೇರಿರುವ ಸೋಮಶೇಖರ್‌ಗೆ ಕಾಂಗ್ರೆೆಸ್‌ನ ಕೆಲ ಕಾರ್ಯಕರ್ತರು ಕೈ ಕೊಡಲಿದ್ದಾಾರೆ. ಇವರ ಪ್ರಾಾಬಲ್ಯ ಹೆಚ್ಚಿಿದ್ದರೂ ಕಾಂಗ್ರೆೆಸ್ ಮತಗಳು ಪಡೆಯುವುದು ಸುಲಭದ ಮಾತಲ್ಲ. ಆದ್ದರಿಂದಾಗಿ ಇದೀಗ ಜೆಡಿಎಸ್ ಪ್ರಬಲವಾಗಿದ್ದು, ಈ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಾಮಿ ಮುಂದಾಗಿದ್ದಾಾರೆ.

ಹುಣಸೂರು ಜೆಡಿಎಸ್ ಕೋಟೆ ಎನ್ನುವುದಕ್ಕಿಿಂತ ಕಾಂಗ್ರೆೆಸ್ ತೆಕ್ಕೆೆಗೆ ಜಾರಿ ಹೋಗುವ ಸಾಧ್ಯತೆ ಇದೆ. ಏಕೆಂದರೆ 2013ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆೆಸ್ ನ ಎಚ್.ಪಿ.ಮಂಜುನಾಥ್ ಗೆದ್ದಿದ್ದರು. 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್.ವಿಶ್ವನಾಥ ಅವರು 8,575 ಅಂತರದಲ್ಲಿ ಎಚ್.ಪಿ.ಮಂಜುನಾಥ್ ವಿರುದ್ಧ ಗೆಲುವು ಸಾಧಿಸಿದ್ದರು. ಉಪಚುನಾವಣೆಯಲ್ಲಿ ಎಚ್.ಪಿ.ಮಂಜುನಾಥ್ ಗೆಲ್ಲುವ ವಿಶ್ವಾಾಸ ಹೊಂದಿರುವ ಕಾರಣ ಜೆಡಿಎಸ್ ಈ ಕ್ಷೇತ್ರವನ್ನು ಕಾಂಗ್ರೆೆಸ್‌ಗೆ ಬಿಟ್ಟುಕೊಟ್ಟಿಿದೆ ಎನ್ನಲಾಗಿದೆ.
ಈಗಾಗಲೇ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾಾರೆ. ಇಲ್ಲಿ ಕಾಂಗ್ರೆೆಸ್ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡುವ ಸಾಧ್ಯತೆ ಇದೆ. 15 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ 12 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಲಿದೆ. ಹೊಸಕೋಟೆಯಲ್ಲಿ ಪಕ್ಷದ ಅಭ್ಯರ್ಥಿ ಶರತ್ ಬಚ್ಚೇಗೌಡರಿಗೆ ಜೆಡಿಎಸ್ ಬೆಂಬಲ ಸೂಚಿಸಿದೆ. ಹಿರೇಕೆರೂರು ಮತ್ತು ಅಥಣಿಯಲ್ಲಿ ಅಭ್ಯರ್ಥಿಗಳು ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದಿರುವುದು ಜೆಡಿಎಸ್‌ಗೆ ಭಾರಿ ಹಿನ್ನಡೆ ಉಂಟು ಮಾಡಿದೆ.

ಎರಡು ಕ್ಷೇತ್ರಗಳಲ್ಲಿ ದಳಕ್ಕೆೆ ಮರ್ಮಾಘಾತ
ಹಾವೇರಿ ಜಿಲ್ಲೆ ಹಿರೇಕೆರೂರು ಮತ್ತು ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆಯುವ ಮೂಲಕ ಫಲಿತಾಂಶಕ್ಕೂ ಮುನ್ನವೇ ದಳಪತಿಗಳಿಗೆ ಮರ್ಮಾಘಾತವಾಗಿದೆ. ಹಿರೇಕೆರೂರು ರಟ್ಟೆೆಹಳ್ಳಿಿಯ ಕಬ್ಬಿಿಣ ಕಂತಿಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಾಮಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಮಠಾಧೀಶರು, ಹಿರಿಯರು, ಸಮಾಜದ ಮುಖಂಡರು ಹಾಗೂ ಭಕ್ತರ ಒತ್ತಡಕ್ಕೆೆ ಮಣಿದು ನಾಮಪತ್ರ ವಾಪಸ್ ಪಡೆದಿದ್ದಾರೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಸ್ವಾಾಮೀಜಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದರು. ಅಲ್ಲದೆ ರಂಭಾಪುರಿ ಮಠದ ಶ್ರೀಗಳು ಕೂಡ ನಾಮಪತ್ರ ವಾಪಸ್ ತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಿದ್ದಾಜಿದ್ದಿನ ಕಣವಾಗಿರುವ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಿಳಿದಿದ್ದ ಗುರುದಾಶ್ಯಾಾಳ್ ಕೊನೆಗೂ ನಾಮಪತ್ರ ಹಿಂಪಡೆಯಲು ಸಮ್ಮತಿಸಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿಯ ಪರಮಾಪ್ತರಾಗಿದ್ದ ಗುರು ದಾಶ್ಯಾಾಳ್ ಮೂರು ದಿನಗಳ ಹಿಂದೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ದಿಢೀರನೆ ನಾಪತ್ತೆೆಯಾಗಿದ್ದರು. ನಾಮಪತ್ರ ಹಿಂಪಡೆಯುವಂತೆ ಬಿಜೆಪಿಯವರು ಒತ್ತಡ ಹಾಕಬಹುದೆಂಬ ಹಿನ್ನೆೆಲೆಯಲ್ಲಿ ಯಾರ ಕೈಗೂ ಸಿಗದಂತೆ ಗೌಪ್ಯ ಸ್ಥಳದಲ್ಲಿದ್ದರು. ಬುಧವಾರ ದೂರವಾಣಿ ಮೂಲಕ ಪತ್ತೆೆಹಚ್ಚಿಿದ ಲಕ್ಷ್ಮಣ್ ಸವದಿ ನಾಮಪತ್ರ ಹಿಂಪಡೆಯುವಂತೆ ಮನವರಿಕೆ ಮಾಡಿದರು.

* ಪೈಪೋಟಿ ಇರುವುದರಿಂದ ಹೊಂದಾಣಿಕೆಯ ಮಂತ್ರ ಜಪ
* ಅಭ್ಯರ್ಥಿ ಗೆಲುವಿಗೆ ಮುಂದಾದ ಎಚ್‌ಡಿಕೆ
* ಶರತ್ ಬಚ್ಚೇಗೌಡರಿಗೆ ಜೆಡಿಎಸ್ ಬೆಂಬಲ
* ಹಿರೇಕೆರೂರು ಮತ್ತು ಅಥಣಿಯಲ್ಲಿ ಜೆಡಿಎಸ್‌ಗೆ ಭಾರಿ ಹಿನ್ನೆೆಡೆ