ಮುದ್ದೇಬಿಹಾಳ: ಬೈಕ್ ಮೇಲೆ ತೆರಳುತ್ತಿದ್ದ ಯುವಕನ ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹೆಸ್ಕಾಂ ಕಚೇರಿ ಎದುರು ನಡೆದಿದೆ.
ಮುದ್ನಾಳ ತಾಂಡಾದ ನಿವಾಸಿ ಸಚಿನ್ ಬಸವರಾಜ ಲಮಾಣಿ(೨೨)ಮೃತಪಟ್ಟಿರುವ ಯುವಕ ಎಂದು ಗುರುತಿಸಲಾಗಿದೆ.
ಅಪರಿಚಿತ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಅದರ ರಭಸಕ್ಕೆ ಮುಂದೆ ಇದ್ದು ಕಬ್ಬಿಣದ ಗ್ರಿಲ್ ಅಳವಡಿಸಿದ್ದ ಡಿವೈಡರ್‌ಗೆ ಬೈಕ್ ಸಮೇತ ಸವಾರ ಡಿಕ್ಕಿ ಹೊಡೆದಿದ್ದಾನೆ. ಈ ಸಮಯದಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿದ್ದು ಸ್ಥಳದಲ್ಲಿಯೇ ಆತ ಜೀವ ಬಿಟ್ಟಿದ್ದಾನೆ.