ಮಾಡಲಗೇರಿ ನಾಗರಾಜ್ ನಾಯ್ಕ .ಸಿ
ಹರಪನಹಳ್ಳಿ: ಪಟ್ಟಣದ ಆಚಾರ್ಯ ಲೇಔಟ್ ಬಡಾವಣೆಯು ಶ್ರ್ರೀಮಂತಿಕೆ ಬಡಾವಣೆಯಲ್ಲಿ ಸಣ್ಣ ಮಳೆಯಾದರೆ ಸಾಕು ರಸ್ತೆಗಳು ರಾಡಿಯಾಗುತ್ತವೆ.
ತಗ್ಗು ದಿನ್ನೆಗಳಲ್ಲಿ ನಿಂತ ನೀರಿನಿಂದ ದಿಕ್ಕು ದೋಚದೆ ಜಾರಿ ಬೀಳೋದು ಪಕ್ಕಾ, ವೃದ್ದರು, ಮಹಿಳೆಯರು, ವಿದ್ಯಾರ್ಥಿಗಳು ಉದ್ದೇಶಿತ ಸ್ಥಳಗಳಿಗೆ ತಲುಪಲು ಮಳೆಗಾಲದಲ್ಲಿ ಪಟ್ಟಣದ ನಾನಾ ವಾರ್ಡ್‍ಗಳ ರಸ್ತೆಗಳು ಸರ್ಕಸ್ ನಡೆಸಬೇಕಿದೆ. ಪಟ್ಟಣದ ಹಲವು ವಾರ್ಡ್‍ನ ರಸ್ತೆಗಳು ಅಧ್ವಾನಗೊಂಡಿವೆ.
ಇದು ಜನರ ಸುಗಮ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ರಾತ್ರಿ ಸಮಯದಲ್ಲಿ ನಡೆದಾಡಲು ಹಿಂದೇಟು ಹಾಕುವಂತಾಗಿದ್ದು, ರಸ್ತೆ ದುರಸ್ತಿಗೊಳಿಸಲು ಪಟ್ಟಣದ ಪುರಸಭೆಗೆ ಸ್ಥಳೀಯರು ಮಾಡಿದ ಮನವಿಗೆ ಸ್ಪಂದನೆ ದೊರೆತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಪಟ್ಟಣದ ಆಚಾರ್ಯ ಲೇಔಟ್, ಕಾಶಿಸಂಗಮೇಶ್ವರ ಬಡಾವಣೆ, ಕುರುಬಗೇರಿ, ಪ್ರವಾಸಿ ಮಂಧಿರ ವೃತ್ತ, ಎಸ್.ಬಿ.ಐ. ಬ್ಯಾಂಕ್ ರಸ್ತೆ, ಬಾಣಗೆರಿ, ಬಾಪೂಜಿನಗರ, ಅರಸಿಕೇರಿ ರಸ್ತೆ. ಹಾಗೂ ಪಟ್ಟಣದ ಇತರೆ ವಾರ್ಡ್ ಗಳಿಗೆ ತರೆಳಲುವ ಮಾರ್ಗದ ರಸ್ತೆಗಳಲ್ಲಿ ವಾಹನ, ಪಾದಚಾರಿಗಳ ಸಂಚಾರ ಕಷ್ಟಸಾಧ್ಯವಾಗಿದೆ.
ಬದಲಾಗದ ರಸ್ತೆ ಅವಸ್ಥೆ ಪಟ್ಟಣದ ಪುರಸಭೆ ವ್ಯಾಪಿಯಲ್ಲಿ ಬರುವ ರಸ್ತೆಗಳ ದುರಸ್ತಿ, ಹೊಸ ರಸ್ತೆಗಳ ನಿರ್ಮಾಣ ಸೇರಿದಂತೆ ಹಲವು ಮೂಲ ಸೌಕರ್ಯ ಕಲ್ಪಿಸಲು ಸರಕಾರದಿಂದ ನುದಾನ ಮಂಜೂರಾಗುತ್ತಿದ್ದರೂ, ಪಟ್ಟಣದ ಹಲವು ವಾರ್ಡ್‍ನ ರಸ್ತೆಗಳ ಸ್ಥಿತಿ ಬದಲಾಗಿಲ್ಲ. ಸ್ಥೀಳಿಯರು ತಾಪತ್ರಯದೊಂದಿಗೆ ದೈನಂದಿನ ಕೆಲಸ ಕಾರ್ಯ ಗಳಿಗೆ ಅಣಿಗೊಳ್ಳಬೇಕಿದೆ. ಬೇಸಿಗೆಯಲ್ಲಿ ವಿಪರೀತ ಧೂಳಿನಿಂದ ತೊಂದರೆ ಅನುಭವಿಸಿದರೆ, ಮಳೆಗಾಲದಲ್ಲಿ ರಾಡಿಯಲ್ಲಿ ನಡೆದಾಡಬೇಕಿದೆ.
***
ಸಣ್ಣ ಮಳೆ ಬಂದರೂ ಪಟ್ಟಣದ ಆಚಾರ್ಯ ಲೇಔಟ್ ವಾರ್ಡ್ ಸೆರದಂತೆ ಕೆಲ ವಾರ್ಡ್‍ಗಳಲ್ಲಿ ಸಾರ್ವಜನಿಕರು ಮತ್ತು ಮಕ್ಕಳು ಸಂಚಾರ ಮಾಡುವುದೇ ಕಷ್ಟ ವಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಹಾಗೂ ಸಂಬಂದಪಟ್ಟ ಪುರಸಭೆ ಅಧ್ಯಕ್ಷರು ಸದಸ್ಯರು ಕಾಳಜಿ ವಹಿಸಿ ದುರಸ್ತಿಗೆ ಕ್ರಮವಹಿಸಲು ಮುಂದಾಗಬೇಕು.
ಹೆಚ್.ಎಂ. ಸಂತೋಷ್, ಪ್ರಗತಿಪರ ಸಂಘಟನೆಯ ಯುವ ಮುಖಂಡ