ಬೆಂಗಳೂರು: ಆರು ವಾರಗಳ ಜಾಮೀನು (Bail) ಪಡೆದು ಜೈಲುಮುಕ್ತರಾಗಿರುವ ನಟ ದರ್ಶನ್ (Actor Darshan), ನಿನ್ನೆ ಬೆನ್ನು ನೋವಿನ (Back pain) ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ (BGS Hospital) ದಾಖಲಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ತೀವ್ರ ಬೆನ್ನುನೋವು ಹಾಗೂ ಕಾಲುನೋವಿನಿಂದ ಬಳಲುತ್ತಿರುವುದು ರಿವೀಲ್ ಆಗಿದೆ. ದರ್ಶನ್ ಕಾರಿನಿಂದಿಳಿದು ಕುಂಟುತ್ತಾ ಬರುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ರೇಣುಕಾಸ್ವಾಮಿ ಕೊಲೆ (Renuka Swamy Murder Case) ಪ್ರಕರಣದ ಆರೋಪಿ, ನಟ ದರ್ಶನ್ ಬೆನ್ನುಹುರಿ ಹಾಗೂ ಕಾಲಿಗೆ ಚಿಕಿತ್ಸೆ ಪಡೆಯುವ ಸಲುವಾಗಿ ಶುಕ್ರವಾರ ಬೆಂಗಳೂರಿನ ಬಿಜಿಎಸ್ ಗ್ಲೆನೆಗಲ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊನ್ನೆ ಬಳ್ಳಾರಿ ಜೈಲಿನಿಂದ ಹೊರಬಂದ ದರ್ಶನ್ ಅವರನ್ನು ಕಾರಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ಇದಾದ ನಂತರ ನಿನ್ನೆ ದರ್ಶನ್ ತಮ್ಮ ಪುತ್ರ ವಿನೀಶ್ ಅವರ ಬರ್ತಡೇ ಅನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದರು. ಜೊತೆಗೆ, ದರ್ಶನ ಅವರ ಎಲ್ಲ ದುಬಾರಿ ಕಾರುಗಳನ್ನು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸ್ವಚ್ಛಗೊಳಿಸಿ ಪೂಜೆ ಮಾಡಲಾಗಿತ್ತು.
ಇದಾದ ನಂತರ ಇಂದು ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗಲು ನಿರ್ಧರಿಸಿದ್ದರು. ಇದರ ಬೆನ್ನಲ್ಲಿಯೇ ನಟ ದರ್ಶನ್ ಜಯನಗರದ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆ ಬರುವುದಾಗಿ ಕರೆ ಮಾಡಿ ಮಾಹಿತಿ ನೀಡಿದ್ದರಂತೆ. ಶುಕ್ರವಾರ ಮಧ್ಯಾಹ್ನ 1 ಗಂಟೆ ಒಳಗಾಗಿ ಆಸ್ಪತ್ರೆಗೆ ಬರುವುದಾಗಿಯೂ ತಿಳಿಸಿದ್ದರಂತೆ. ಆದರೆ, ಕೊನೇ ಕ್ಷಣದಲ್ಲಿ ಮನೆಯಲ್ಲಿ ನಿರ್ಧಾರ ಬದಲಿಸಿದ್ದಾರೆ. ಬೆನ್ನು ನೋವಿಗೆ ನೇರವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಬದಲಾಗಿ, ಮೊದಲು ತಪಾಸಣೆ ಮಾಡಿಸಿಕೊಂಡು ಫಿಸಿಯೋಥೆರಫಿ ಸೇರಿದಂತೆ ಇತರೆ ಚಿಕಿತ್ಸಾ ವಿಧಾನದ ಮೂಲಕ ಗುಣಪಡಿಸಬಹುದೇ ಎಂಬುದನ್ನು ಪ್ರಯತ್ನಿಸುತ್ತಾರೆ.
ನಟ ದರ್ಶನ್ ಮಧ್ಯಾಹ್ನ 2.30ರ ನಂತರ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಗೆ ಬಂದಿದ್ದಾರೆ. ಹಲವು ವೈದ್ಯಕೀಯ ಪರೀಕ್ಷೆ ನಡೆಸಿ ನಾಳೆಯೊಳಗೆ ದರ್ಶನ್ ಕುಟುಂಬಸ್ಥರಿಗೆ ವರದಿಯನ್ನು ನೀಡಲಾಗುತ್ತದೆ. ದರ್ಶನ್‌ಗೆ ತೀವ್ರ ಬೆನ್ನುನೋವು ಕಾಡ್ತಿರೋ ಹಿನ್ನೆಲೆಯಲ್ಲಿ ಇಂದು ಇಸಿಜಿ, ಸ್ಕ್ಯಾನಿಂಗ್, ಬಿಪಿ, ಶುಗರ್, ರಕ್ತ ಪರೀಕ್ಷೆ, ಲಿವರ್ ಫಂಕ್ಷನ್ ಟೆಸ್ಟ್ (LFT) ಪರೀಕ್ಷೆಗಳನ್ನು ಮಾಡಿಸುವ ಸಾಧ್ಯತೆಯಿದೆ. ಮೊದಲಿಗೆ ಫಿಸಿಯೋಥೆರಪಿ ಹಾಗೂ ಔಷಧಿಯಿಂದ ಗುಣಪಡಿಸಲು ಮನವಿ ಮಾಡಲಾಗಿದೆ. ಫಿಸಿಯೋ ಥೆರಪಿಯಲ್ಲಿ ಬೆನ್ನುನೋವು ಗುಣವಾಗದಿದ್ದಲ್ಲಿ ಸರ್ಜರಿ ಆಯ್ಕೆಯನ್ನು ಕೊನೆಗೆ ಇಟ್ಟುಕೊಳ್ಳಲಾಗಿದೆ.
ದರ್ಶನ್ ಆಸ್ಪತ್ರೆಗೆ ಆಗಮಿಸುವ ಸಂದರ್ಭದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದರೂ, ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಸೇರಿ ನಟನನ್ನು ನೋಡಿ ಹರ್ಷ ವ್ಯಕ್ತಪಡಿಸಿದರು. ʼಡಿ ಬಾಸ್ʼ ಎಂದು ಜೈಕಾರ ಕೂಗಿದರು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಈ ಸಂದರ್ಭದಲ್ಲಿ ಜೊತೆಗಿದ್ದರು.
ಇದನ್ನೂ ಓದಿ: Actor Darshan: ತೀವ್ರ ಬೆನ್ನು ನೋವು; ನಟ ದರ್ಶನ್ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲು