ಬೆಂಗಳೂರು: ಸೆಷನ್ಸ್ ಕೋರ್ಟ್ ಬೇಲ್ ನಿರಾಕರಿಸಿರುವ ಕಾರಣ ದರ್ಶನ್ (Actor Darshan) ಕಾರಾಗೃಹ ವಾಸ ಮುಂದುವರಿಸಿದೆ. ರೇಣುಕಾಸ್ವಾಮಿ ಕೇಸ್ ಅವರನ್ನು ಇನ್ನಷ್ಟು ದಿನ ಜೈಲಿನಲ್ಲಿ ಕಳೆಯುವಂತೆ ಮಾಡುವುದು ನಿಶ್ಚಿತ.ಈ ನಡುವೆ ಅವರಿಗೆ ನಡು ಬೇನೆಯೂ ಶುರುವಾಗಿದೆ ಇದು ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಹೊರ ಬರುವಂತಿಲ್ಲ, ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ ಹಾಗೂ ಬೆನ್ನು ನೋವು ತಡೆದುಕೊಳ್ಳುವಂತಿಲ್ಲ. ಹೀಗಾಗಿ ಅವರಿಗೆ ಸದ್ಯದ ಪರಿಹಾರ ಎಂಬಂತೆ ಮೆಡಿಕಲ್ ಹಾಸಿಗೆ ಮತ್ತು ದಿಂಬು ಒದಗಿಸಲಾಗಿದೆ. ಇವುಗಳನ್ನು ನ್ಯೂರೂ ಸರ್ಜನ್ ಸಲಹೆ ಮೇರೆಗೆ ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ.
ಬೆನ್ನು ನೋವಿ ತೀವ್ರಗೊಂಡಿರುವ ಕಾರಣ ದರ್ಶನ್ ಅವರನ್ನು ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಪರೀಕ್ಷೆ ಮಾಡುತ್ತಲೇ ಇದ್ದಾರೆ. ಮಂಗಳವಾರ ಜೈಲಾಧಿಕಾರಿಗಳಿಗೆ ಅವರ ನೋವಿನ ಮೆಡಿಕಲ್ ರಿಪೋರ್ಟ್ ಸಲ್ಲಿಕೆಯಾಗಿದೆ. ಅದನ್ನು ಪರೀಕ್ಷಿಸಿ ಮೇಲಾಧಿಕಾರಿಗಳೊಂದಿಗೆ ಜೈಲಾಧಿಕಾರಿಗಳು ಚರ್ಚೆ ಮಾಡಿದ್ದಾರೆ. ದರ್ಶನ್‌ಗೆ ಸದ್ಯಕ್ಕೆ ಏನು ಪರಿಹಾರ ಸೂಚಿಸಬಹುದು ಎಂಬುದನ್ನು ಕಂಡುಕೊಂಡಿದ್ದಾರೆ.
ದರ್ಶನ್ ಅವರ ತಪಾಸಣೆ ನಡೆಸಿದ ವಿಮ್ಸ್ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಅವರು ಆರ್ಥೊ ಬೆಡ್ & ದಿಂಬು ನೀಡುವಂತೆ ಸೂಚಿಸಿದ್ದಾರೆ ದರ್ಶನ್ ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಿಂದ ಹಾಸಿಗೆ ದಿಂಬು ರವಾನೆ ಕೊಡಲಾಗಿದೆ. ಆ್ಯಂಬುಲೆನ್ಸ್ ಮೂಲಕ ಅವರೆಡನ್ನೂ ತಂದು ದರ್ಶನ್ ಇರುವ ಬ್ಯಾರೆಕ್‌ಗೆ ಶಿಫ್ಟ್ ಮಾಡಲಾಗಿದೆ.
ಬೆಂಗಳೂರಿಗೆ ಬಿಡಿ
ಜೈಲಿನಲ್ಲಿರುವ ದರ್ಶನ್‌ಗೆ ದಿನ ಬೆನ್ನು ನೋವು ಉಲ್ಬಣವಾಗುತ್ತಿದೆ. ತಪಾಸಣೆ ನಡೆಸಿದ ವೈದ್ಯರು, ಜೈಲಲ್ಲೇ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದಾರೆ. ಆದರೆ ನನಗೆ ಇಲ್ಲಿ ಟ್ರೀಟ್‌ಮೆಂಟ್ ಬೇಡ, ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಿ ಎಂದ ದರ್ಶನ್ ಹಠ ಮಾಡುತ್ತಿದ್ದಾರೆ. ಅದಕ್ಕಾಗಿ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದಾರೆ.
ಇದನ್ನೂ ಓದಿ: Actor Darshan: ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋದ ದರ್ಶನ್
ಬಳ್ಳಾರಿಯಲ್ಲಿ ಚಿಕಿತ್ಸೆ ಬೇಡ ಬೆಂಗಳೂರಿಗೆ ಕಳುಹಿಸಲು ಶಿಫಾರಸು ಮಾಡಿ ಎಂದು ಜೈಲಾಧಿಕಾರಿಗಳಿಗೆ ಕೋರುತ್ತಲೇ ಇದ್ದಾರೆ. ಪದೇ ಪದೇ ದರ್ಶನ್ ಬೇಡಿಕೆ ಇಡುತ್ತಿರುವುದರಿಂದ ಸದ್ಯಕ್ಕೆ ಬೆಡ್ ಮತ್ತು ದಿಂಬು ಕೊಟ್ಟಿದ್ದಾರೆ.