Thursday, 19th September 2024

Actor Darshan: ದರ್ಶನ್‌ ಸಲ್ಲಿಸಿದ ಈ ಅರ್ಜಿಗೆ ಹೈಕೋರ್ಟ್‌ ಓಕೆ ಅಂದ್ರೆ ರೇಣುಕಾಸ್ವಾಮಿ ಕೊಲೆ ವಿವರ ಯಾವುದೂ ನಿಮಗೆ ಸಿಗೋಲ್ಲ!

actor darshan renukaswamy murder charge sheet

ಬೆಂಗಳೂರು: ನಟ ದರ್ಶನ್ (Actor Darshan) ತಮ್ಮ ವಿರುದ್ಧ ಕೋರ್ಟಿಗೆ ಸಲ್ಲಿಸಿರುವ ರೇಣುಕಾಸ್ವಾಮಿ ಕೊಲೆಯ (Renukaswamy Murder case) ಚಾರ್ಜ್‌ಶೀಟ್‌ನ (Charge sheet) ವಿವರಗಳನ್ನು ಬಹಿರಂಗಪಡಿಸದಂತೆ ಕೋರಿ ಹೈಕೋರ್ಟ್‌ಗೆ (High Court) ಮೊರೆ ಹೋಗಿದ್ದಾರೆ. ದರ್ಶನ್‌ ವಕೀಲರು ಈ ಕುರಿತು ಕೋರ್ಟ್‌ಗೆ ಮನವಿ ಸಲ್ಲಿಸಿದ್ದು, ಇದಕ್ಕೆ ನ್ಯಾಯಾಧೀಶರು ಸೈ ಎಂದರೆ ದರ್ಶನ್‌ ತೋರಿದ ಕ್ರೌರ್ಯದ ವಿವರಗಳು ಇನ್ನು ಮುಂದೆ ಓದುಗರಿಗೆ ಸಿಗುವುದಿಲ್ಲ.

ದರ್ಶನ್ ವಿರುದ್ಧ ಕೋರ್ಟ್​ಗೆ ಸಲ್ಲಿಕೆ ಆದ ಚಾರ್ಜ್​ಶೀಟ್​ನಲ್ಲಿರುವ ವಿಚಾರಗಳನ್ನು ಮಾಧ್ಯಮಗಳು ಪಡೆದುಕೊಂಡು ಯಾವುದನ್ನೂ ಬಿಡದೆ ವರದಿ ಮಾಡುತ್ತಿವೆ. ರೇಣುಕಾಸ್ವಾಮಿ ಮೇಲೆ ದರ್ಶನ್ ನಡೆಸಿದ ಹಲ್ಲೆಯ ಕ್ರೌರ್ಯ ಯಾವ ರೀತಿ ಇತ್ತು ಎಂಬುದು ಬಹಿರಂಗವಾಗುತ್ತಿದೆ. ಈಗ ದರ್ಶನ್ ಇದಕ್ಕೆ ನಿರ್ಬಂಧ ಕೋರಿ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಪರ ವಕೀಲರು ಈ ವಿಚಾರದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ 17 ಜನರ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ ಆಗಿದೆ. ಚಾರ್ಜ್​ಶೀಟ್​ನಲ್ಲಿ ದರ್ಶನ್ ಏನು ಮಾಡಿದ್ದರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ರೇಣುಕಾ ಸ್ವಾಮಿಗೆ ಕೊಟ್ಟ ಚಿತ್ರಹಿಂಸೆಗಳ ವಿವರಣೆ ಇದೆ. ಇವುಗಳ ಪ್ರಸಾರದ ಮೇಲೆ ನಿರ್ಬಂಧ ಹೇರಿ ಎಂದು ದರ್ಶನ್ ಕೋರಿದ್ದಾರೆ.

ದರ್ಶನ್‌ ಬೂಟುಗಾಲಿನಲ್ಲಿ ರೇಣುಕಾಸ್ವಾಮಿ ವೃಷಣಕ್ಕೆ ಒದ್ದಿದ್ದ. ಸಸ್ಯಾಹಾರಿಯಾದ ರೇಣುಕಾಸ್ವಾಮಿಗೆ ಚಿಕನ್‌ ಬಿರಿಯಾನಿ ತಿನ್ನಿಸಿದ್ದ. ಅದನ್ನು ರೇಣುಕಾಸ್ವಾಮಿ ಉಗುಳಿದಾಗ ʼಅನ್ನ ಉಗುಳ್ತೀಯಾ… ಮಗನೇʼ ಎಂದು ಒದ್ದಿದ್ದ. ಪವಿತ್ರ ಗೌಡ ಚಪ್ಪಲಿ ತೆಗೆದುಕೊಂಡು ಥಳಿಸಿದ್ದ. ಪೊಲೀಸ್‌ ಲಾಠಿ ಮುರಿದುಹೋಗುವಂತೆ ಬಾರಿಸಿದ್ದ. ತಲೆ ಹಿಡಿದು ಲಾರಿಗೆ ಘಟ್ಟಿಸಿದ್ದ. ಬೆಲ್ಟ್‌ನಿಂದ ಬಾರಿಸಿದ್ದ. ಈ ಎಲ್ಲ ವಿವರಗಳೂ ಚಾರ್ಜ್‌ಶೀಟ್‌ನಲ್ಲಿ ದಾಖಲಾಗಿದ್ದವು. ಜೊತೆಗೆ ದರ್ಶನ್‌ ಶೂಗಳು, ಬೆಲ್ಟ್‌, ಬಟ್ಟೆ, ಎಲ್ಲದರಲ್ಲೂ ಇದಕ್ಕೆ ಪೂರಕ ಸಾಕ್ಷ್ಯಗಳು ದೊರೆತಿದ್ದವು.

ಇವೆಲ್ಲವನ್ನೂ ಮೀಡಿಯಾಗಳು ವರದಿ ಮಾಡಿವೆ. ಇದುವರೆಗೂ ದರ್ಶನ್‌ಗೆ ಟಿವಿ ಲಭ್ಯವಿಲ್ಲದ ಕಾರಣ ಈ ವರದಿಗಳು ಆತನ ಕಣ್ಣಿಗೆ ಬಿದ್ದಿರಲಿಲ್ಲ. ಇದೀಗ ದರ್ಶನ್ ಇರುವ ಜೈಲಿನ ಸೆಲ್​ಗೆ ಟಿವಿ ಬಂದಿದೆ. ಜೈಲಿನ ನಿಯಮದಂತೆ ಅವರಿಗೆ ಟಿವಿ ನೀಡಲಾಗಿದೆ. ಟಿವಿ ನೋಡಿದ ಬಳಿಕ ದರ್ಶನ್‌ ಈ ಅರ್ಜಿ ಸಲ್ಲಿಸಲು ನಿರ್ಧರಿಸಿದರು ಎಂದು ಹೇಳಲಾಗಿದೆ.

ಈ ಸುದ್ದಿ ಓದಿ: Actor Darshan: ರೇಣುಕಸ್ವಾಮಿಗೆ ಬಲವಂತದಿಂದ ಚಿಕನ್‌ ತಿನ್ನಿಸಿ, ʼಅನ್ನ ಉಗುಳ್ತೀಯಾ… ಮಗನೇʼ ಎಂದು ಒದ್ದಿದ್ದ ದರ್ಶನ್!

Leave a Reply

Your email address will not be published. Required fields are marked *