Thursday, 19th September 2024

Actress Sakunthala: ಖ್ಯಾತ ಬಹುಭಾಷಾ ನಟಿ ಶಕುಂತಲಾ ಹೃದಯಾಘಾತದಿಂದ ನಿಧನ

Actress Sakunthala

ಬೆಂಗಳೂರು: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಬಹುಭಾಷಾ ನಟಿ ಎ. ಶಕುಂತಲಾ (84) (Actress Sakunthala) ಅವರು ಹೃದಯಾಘಾತದಿಂದ ನಗರದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಂಗಳೂರಿನ ಮಗಳ ಮನೆಯಲ್ಲಿ ವಾಸವಾಗಿದ್ದ ಅವರಿಗೆ ಮಂಗಳವಾರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಶಕುಂತಲಾ ಅವರ ಮಗಳು ಸೆಲ್ವಿ ಮಾಹಿತಿ ಹಂಚಿಕೊಂಡಿದ್ದು, ತಾಯಿಗೆ ಎದೆನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.

ಶಕುಂತಲಾ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಜತೆಗೆ ಅನೇಕ ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದಾರೆ. ತಮಿಳುನಾಡಿನ ಸೇಲಂ ಜಿಲ್ಲೆಯ ಅರಿಸಿಪಾಳ್ಯಂ ಮೂಲದವರಾದ ಇವರು, ತಮಿಳಿನಲ್ಲಿ ಎಂಜಿಆರ್‌, ಶಿವಾಜಿ ಗಣೇಶನ್‌ ಮತ್ತಿತರ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. 1970ರಲ್ಲಿ ತೆರೆಗೆ ಬಂದ ಪೊಲೀಸ್‌ ಥ್ರಿಲ್ಲರ್‌ ʼಸಿಐಡಿ ಶಂಕರ್‌ʼ ಸಿನಿಮಾ ಮೂಲಕ ಇವರು ಖ್ಯಾತಿ ಗಳಿಸಿದ್ದು, ಆ ನಂತರ ಇವರು ʼಸಿಐಡಿ ಶಕುಂತಲಾʼ ಎಂದೇ ಜನಪ್ರಿಯರಾದರು.

ಆರಂಭದಲ್ಲಿ ಡ್ಯಾನ್ಸರ್‌ ಆಗಿದ್ದ ಇವರು ನಂತರ ಸಣ್ಣಪುಟ್ಟ ಪಾತ್ರಗಳಿಂದ ತಮಿಳು ಚಿತ್ರರಂಗ ಪ್ರವೇಶ ಮಾಡಿದ್ದರು. ಇವರ ತಂದೆ-ತಾಯಿ ತಮಿಳಿನ ಹಳೆಯ ಚಿತ್ರ ʼಶಕುಂತಲಾʼ ಚಿತ್ರದಿಂದ ಪ್ರೇರಣೆಗೊಂಡು ಇವರಿಗೆ ಅದೇ ಹೆಸರು ನಾಮಕರಣ ಮಾಡಿದ್ದರು. ಶಕುಂತಲಾ ಅವರು ಅಶಿಕ್ಷಿತ ಪ್ರತಿಭೆ, ಕೊಟ್ಟ ದೇವತೆ, ಪಶ್ಚಾತ್ತಾಪ, ವಸಂತ ಅರಮನೆ, ನ್ಯಾಯ, ಭಾರತ ವಿಲಾಸ, ರಾಜರಾಜ ಚೋಳನ್, ಪೊನ್ನುಂಚಲ್ ಸೇರಿ ಹಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಶಕುಂತಲಾ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಸೇರಿ ದಕ್ಷಿಣ ಭಾರತದ ಪ್ರಮುಖ ನಟ, ನಟಿಯರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕ ಕೋಡಳ್ಳಿ ಶಿವರಾಮ್ ನಿಧನ

Kodalli Shivaram

ಬೆಂಗಳೂರು: ರಾಜ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಕೋಡಳ್ಳಿ ಶಿವರಾಮ್(75) ಅವರು (Kodalli Shivaram) ಮಂಗಳವಾರ ರಾತ್ರಿ ನಿಧನರಾದರು. 1978ರಲ್ಲಿ ಟಿ.ಎಸ್‌.ನಾಗಾಭರಣ ನಿರ್ದೇಶನದಲ್ಲಿ ತೆರೆಕಂಡ ʼಗ್ರಹಣʼ ಚಿತ್ರಕ್ಕೆ ಕೋಡಳ್ಳಿ ಶಿವರಾಮ್‌ ಅವರು ಕತೆ ಬರೆದಿದ್ದರು. ಇದಕ್ಕೆ ರಾಜ್ಯ, ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.

ಕೋಡಳ್ಳಿ ಶಿವರಾಮ್‌ ಅವರು ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಾಣ ಮಾಡಿ ಖ್ಯಾತಿ ಗಳಿಸಿದ್ದಾರೆ. ಅವಿವಾಹಿತರಾಗಿದ್ದ ಇವರು ಬೆಂಗಳೂರಿನ ಹನುಮಂತ ನಗರದಲ್ಲಿ ವಾಸವಾಗಿದ್ದರು. ಮಂಗಳವಾರ ಹೃದಯಾಘಾತದಿಂದ ನಿಧನರಾಗಿರುವುದಾಗಿ ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ | Janamejaya Umarji Column: ವಿಮೋಚನೆಯನ್ನು ಏಕೀಕರಣವೆನ್ನುವ ಹುನ್ನಾರ

ಕೋಡಳ್ಳಿ ಶಿವರಾಮ್‌ ಅವರ ನಿಧನದ ಬಗ್ಗೆ ಬಗ್ಗೆ ಕುಟುಂಬಸ್ಥರಿಂದ ಮಾಹಿತಿ ಹಂಚಿಕೊಂಡಿದ್ದು, ಇಂದು ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *