Sunday, 3rd November 2024

ಡಾ| ಪ್ರಭುಗೌಡರಿಗೆ ನಯನ ಭಾರ್ಗವ, ರವಿಚಂದ್ರಗೆ ಆದರ್ಶ ಪತ್ರಕರ್ತ ಪ್ರಶಸ್ತಿ

ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ನಾಳೆ

ಮುದ್ದೇಬಿಹಾಳ: ಇಲ್ಲಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ತಾಲೂಕು ಪತ್ರಿಕಾ ವಿತರಕರ ಸಂಘ ಮತ್ತು ಶ್ರೀ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಜು.29ರಂದು ಬೆಳಿಗ್ಗೆ 10 ಗಂಟೆಗೆ ಎಪಿಎಂಸಿಯಲ್ಲಿರುವ ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ಸಭಾ ಭವನದಲ್ಲಿ ಪತ್ರಿಕಾ ದಿನಾಚರಣೆ, ಸಂಘದ ಸದಸ್ಯರಿಗೆ 2022-23ನೇ ಸಾಲಿನ ಐಡಿ ಕಾರ್ಡ ವಿತರಣೆ, 2022-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ, ತಾಲೂಕಿನ ಪತ್ರಿಕಾ ವಿತರಕರಿಗೆ ಸೌಲಭ್ಯ ವಿತರಣೆ, ಜಿಲ್ಲಾ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ, ಸಾಧಕರಿಗೆ ಪ್ರಶಸ್ತಿ ಪ್ರದಾನ ಮತ್ತು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ.

ಕುಂಟೋಜಿ ಸಂಸ್ಥಾನ ಹಿರೇಮಠದ ಡಾ| ಚನ್ನವೀರ ದೇವರು ದಿವ್ಯ ಸಾನಿಧ್ಯವಹಿಸುವರು. ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಉದ್ಘಾಟಿಸು ವರು.

ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಐಡಿ ಕಾರ್ಡ ವಿತರಿಸುವರು. ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ ಅವರು ಪತ್ರಿಕೋ ದ್ಯಮ ಅಂದು-ಇಂದು-ಮುಂದೆ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುವರು. ಸಂಘದ ತಾಲೂಕು ಅಧ್ಯಕ್ಷ ಮುತ್ತು ವಡವಡಗಿ ಅಧ್ಯಕ್ಷತೆ ವಹಿಸುವರು.

ಮಾಜಿ ಶಾಸಕ ಸಿ.ಎಸ್.ನಾಡಗೌಡ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಜೆಡಿಎಸ್ ನಾಯಕಿ ಮಂಗಳಾದೇವಿ ಬಿರಾ ದಾರ, ತಹಸೀಲ್ದಾರ್ ಕಡಕಭಾವಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಮೌಲಾನಾ ಕಾರಿ ಇಸಾಕ ಮಾಗಿ, ಹಿರಿಯ ಪತ್ರಿಕಾ ವಿತರಕ ಎಸ್.ಬಿ.ಕತ್ತಿ ಉಪಸ್ಥಿತರಿರುವರು.

ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಢವಳಗಿಯ ಸಮಾಜಸೇವಕ ಸಿದ್ದನಗೌಡ ಬಿರಾದಾರ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಬಾಲಾಜಿ ಸಕ್ಕರೆ ಕಾರ್ಖಾನೆಯ ಎಂಡಿ ವೆಂಕಟೇಶ ಪಾಟೀಲ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ವಿಶೇಷ ಆಹ್ವಾನಿತರಾಗಿ, ತಾಪಂ ಇಓ ಎಸ್.ವೈ.ಹೊಕ್ರಾಣಿ, ಸಿಪಿಐ ಆನಂದ ವಾಘ್ಮೋಡೆ, ಬಿಇಓ ಎಸ್.ಜೆ. ನಾಯಕ, ಬಿಜೆಪಿ ಅಧ್ಯಕ್ಷ ಡಾ| ಪರಶುರಾಮ ಪವಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಜೆಡಿಎಸ್ ಅಧ್ಯಕ್ಷ ಪ್ರಭು ಪಾಟೀಲ ವಿಶೇಷ ಆಮಂತ್ರಿತರಾಗಿ ಭಾಗವಹಿಸಲಿದ್ದಾರೆ.

*ಪ್ರಶಸ್ತಿ ಪ್ರದಾನ- ಪ್ರತಿಭಾ ಪುರಸ್ಕಾರ: ಶ್ರೀ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್ ಮತ್ತು ಕುಂಟೋಜಿ ಸಂಸ್ಥಾನ ಹಿರೇಮಠದಿಂದ ಸಾಧಕರಿಗೆ ಕೊಡಮಾಡಲ್ಪಡುವ ನಯನ ಭಾರ್ಗವ ಪ್ರಶಸ್ತಿಗೆ ವಿಜಯಪುರದ ಖ್ಯಾತ ನೇತ್ರ ತಜ್ಞರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕರಾದ ಡಾ| ಪ್ರಭುಗೌಡ ಬಿ ಎಲ್ ಅವರು ಆಯ್ಕೆ ಆಗಿದ್ದಾರೆ.

ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪತ್ರಿಕಾ ವಿತರಕರ ಸಂಘ ಕೊಡಮಾಡಲ್ಪಡುವ ಆದರ್ಶ ಪತ್ರಕರ್ತ ಪ್ರಶಸ್ತಿಗೆ ಸಿಂದಗಿಯ ಪತ್ರಕರ್ತ ರವಿಚಂದ್ರ ಮಲ್ಲೇದ ಆಯ್ಕೆ ಆಗಿದ್ದಾರೆ. ಇವರಿಬ್ಬರಿಗೂ ಇದೇ ಕಾರ್ಯಕ್ರಮದಲ್ಲಿ ಶ್ರೀಗಳು, ಶಾಸಕರು, ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ವೇಳೆ ಪತ್ರಕರ್ತರ ನಾಲತವಾಡದ ಮಹಿಬೂಬ ಹಳ್ಳೂರ ಅವರ ಪುತ್ರ ಅಮಾನುಲ್ಲಾ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.96 ಅಂಕ ಅಂಕ ಗಳಿಸಿದ ಹಿನ್ನೆಲೆ ಆತನಿಗೆ ಪ್ರತಿಭಾ ಪುರಸ್ಕಾರ ನೀಡ ಲಾಗುತ್ತದೆ.