Thursday, 12th December 2024

ಸಚಿವ ಆನಂದ್ ಸಿಂಗ್’ಗೆ ವಿಜಯನಗರ ಜಿಲ್ಲಾ ಉಸ್ತುವಾರಿ

ಹೊಸಪೇಟೆ: ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಅವರಿಗೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಮುಜರಾಯಿ ಖಾತೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಕೊಪ್ಪಳ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ.

ಜನವರಿ 24ರಂದು ಸರ್ಕಾರ ಆದೇಶ ಹೊರಡಿಸಿ ಆನಂದ್ ಸಿಂಗ್ ಹಾಗೂ ಶಶಿಕಲಾ ಅವರಿಗೆ ಕ್ರಮವಾಗಿ ಕೊಪ್ಪಳ, ವಿಜಯನಗರ ಜಿಲ್ಲಾ ಉಸ್ತುವಾರಿಯಾಗಿ ನೇಮಿಸಿತ್ತು.

ನೂತನ ಜಿಲ್ಲೆ ಉಸ್ತುವಾರಿ ವಹಿಸಬೇಕೆಂದು ಆನಂದ್ ಸಿಂಗ್ ಸತತವಾಗಿ ಒತ್ತಾಯಿಸುತ್ತ ಬಂದಿದ್ದರು. ಕೊನೆಗೂ ಅವರ ಮಾತಿಗೆ ಈಗ ಮನ್ನಣೆ ಸಿಕ್ಕಿದೆ. ಶಶಿಕಲಾ ಅವರು ವಿಜಯ ನಗರದತ್ತ ಸುಳಿಯದ ಕಾರಣ ತೀವ್ರ ಟೀಕೆಗೆ ಗುರಿಯಾಗಿತ್ತು.