Thursday, 12th December 2024

Anekal News: ಆನೇಕಲ್ ಸಮೀಪ 5 ಕಾಡಾನೆಗಳು ಪ್ರತ್ಯಕ್ಷ; ಜನರಲ್ಲಿ ಆತಂಕ ಸೃಷ್ಟಿ

Anekal News

ಆನೇಕಲ್: ಬನ್ನೇರುಘಟ್ಟ ವನ್ಯಜೀವಿ ವಿಭಾಗದ ಆನೇಕಲ್ (Anekal News) ಸಮೀಪದ ಕಾಳನಾಯಕನಹಳ್ಳಿ ಕೆರೆಯಲ್ಲಿ ಐದು ಕಾಡಾನೆಗಳು ಬೀಡುಬಿಟ್ಟು ಜನರಲ್ಲಿ ಆತಂಕ ಸೃಷ್ಟಿಸಿದ್ದವು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಸಿಬ್ಬಂದಿ 5 ಸಲಗಗಳನ್ನು ಕಾಡಿಗೆ ಅಟ್ಟಿದ್ದಾರೆ.

ಆಹಾರ ಹುಡುಕಿಕೊಂಡು ಶನಿವಾರ ರಾತ್ರಿ ಬಂದಿದ್ದ ಐದು ಕಾಡಾನೆಗಳು ಬೆಳಗಾದರೂ ಕಾಡಿಗೆ ಹಿಂದಿರುಗದೆ ಕಾಳನಾಯಕನಹಳ್ಳಿಯ ನೀಲಗಿರಿ ತೋಪಿನಲ್ಲಿ ಬೀಡು ಬಿಟ್ಟಿದ್ದವು. ಇದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು. ಬೆಳಗ್ಗೆ ವಿಚಾರ ತಿಳಿದ ಗ್ರಾಮಸ್ಥರು ಆನೆ ನೋಡಲು ನೀಲಗಿರಿ ತೋಪಿನ ಬಳಿ ಜಮಾಯಿಸಿದ್ದರು. ಗ್ರಾಮಸ್ಥರು ನೀಡಿದ ಮಾಹಿತಿಗೆ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಓಡಿಸಲು ಕಾರ್ಯಾಚರಣೆ ಆರಂಭಿಸಿದರು. ಸಂಜೆಯ ವೇಳೆಗೆ ಮುತ್ಯಾಲಮಡುವು ಅರಣ್ಯ ಪ್ರದೇಶಕ್ಕೆ ಐದೂ ಆನೆಗಳನ್ನು ಓಡಿಸಲಾಯಿತು.

ಕಾಳನಾಯಕನಹಳ್ಳಿಯಲ್ಲಿ ಬೆಳಗ್ಗೆ ಕಾಣಿಸಿಕೊಂಡಿದ್ದ ಕಾಡಾನೆಗಳು ಸ್ವಲ್ಪ ಹೊತ್ತಿನಲ್ಲಿಯೇ ತೆಲಗರಹಳ್ಳಿಯಲ್ಲಿ ಪ್ರತ್ಯಕ್ಷವಾಗಿದ್ದವು. ಅಲ್ಲಿಂದ ಸಿಂಗಸಂದ್ರದ ನೀಲಗಿರಿ ತೋಪಿನತ್ತ ಸಾಗಿದವು. ದಾರಿಯುದ್ದಕ್ಕೂ ಬಾಳೆ ತೋಟ, ರಾಗಿ ಬೆಳೆ. ತೆಂಗಿನ ಗಿಡಗಳನ್ನು ಕಿತ್ತೆಸೆದು ನೀಲಗಿರಿ ಮರಗಳನ್ನು ಮುರಿದು ಹಾಕಿ ದಾಂಧಲೆ ನಡೆಸಿದವು. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿ ಆನೆಗಳನ್ನು ಸಿಂಗಸಂದ್ರದಿಂದ ತೆಲರಹಳ್ಳಿಯತ್ತ ಓಡಿಸಿದರು.
ಅಲ್ಲಿಂದ ಮುತ್ಯಾಲಮಡುವು ಕಾಡಿಗೆ ಅಟ್ಟಲಾಗಿದೆ.

ಕಾಳಿಂಗ ಸರ್ಪದ ಮಂಡೆಗೆ ಮುತ್ತಿಟ್ಟ ಯುವತಿ; ಎದೆ ಝಲ್ಲೆನ್ನುವ ವಿಡಿಯೊ ಇಲ್ಲಿದೆ…

Viral Video

ಬೆಂಗಳೂರು : ಹಾವುಗಳನ್ನು ದೂರದಿಂದ ನೋಡಿದರೆ ಸಾಕು ಜನರು ಹೆದರಿ ಓಡುತ್ತಾರೆ. ಅದರಲ್ಲೂ ಕಾಳಿಂಗ ಸರ್ಪವೆಂದರೆ ಬೆಚ್ಚಿಬೀಳುತ್ತಾರೆ. ಯಾಕೆಂದರೆ ಅದು ಭಯಂಕರ ವಿಷಕಾರಿ, ಕಚ್ಚಿದರೆ ಸಾವು ಖಚಿತ. ಅಂತಹದರಲ್ಲಿ ಯುವತಿಯೊಬ್ಬಳು ಇಂತಹ ವಿಷಕಾರಿ ಕಾಳಿಂಗ ಸರ್ಪದ ಜೊತೆಗೆ ಆಟವಾಡಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆದ ಈ ವಿಡಿಯೊ ಕಂಡು ವೀಕ್ಷಕರು ಹೌಹಾರಿದ್ದಾರೆ. ಹಾಗೇ ಆ ಯುವತಿಯ ಕೆಲಸಕ್ಕೆ ವೀಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ವೈರಲ್ ಆಗಿರುವ ಈ ವಿಡಿಯೊದಲ್ಲಿ ಯುವತಿಯೊಬ್ಬಳು ಅಪಾಯಕಾರಿಯಾದ ಕಾಳಿಂಗ ಸರ್ಪದ ಪಕ್ಕದಲ್ಲಿ  ಕುಳಿತಿದ್ದು ಮಾತ್ರವಲ್ಲ ಅದರ ಜೊತೆಗೆ ಆಟವಾಡುತ್ತಾ ಅದರ ತಲೆಗೆ ಮುತ್ತಿಟ್ಟಿದ್ದಾಳೆ.  ಇದಲ್ಲದೆ, ಯುವತಿ ತನ್ನ ಕೆನ್ನೆಯನ್ನು ಕಾಳಿಂಗ ಸರ್ಪದ ಬಾಯಿಯ ಬಳಿ ಇಟ್ಟು ತನಗೂ ಮುತ್ತು ಕೊಡುವಂತೆ ಹೇಳಿದ್ದಾಳೆ.

ಈ ವಿಡಿಯೊವನ್ನು ಔಲಿಯಾ ಖೈರುನಿಸಾ ಎಂಬ ಇನ್ಸ್ಟಾಗ್ರಾಂ ಹ್ಯಾಂಡಲ್‍ನಲ್ಲಿ ಹಂಚಿಕೊಳ್ಳಲಾಗಿದೆ. ಈ ಯುವತಿ ವನ್ಯಜೀವಿ ಪ್ರೇಮಿಯಾಗಿದ್ದು ಯೂಟ್ಯೂಬ್‍ನಲ್ಲಿ 80,000 ಕ್ಕೂ ಹೆಚ್ಚು ಫಾಲೋವರ್ಸ್‍ ಅನ್ನು  ಹೊಂದಿದ್ದಾಳೆ. ಯುವತಿ ತನ್ನ ಪೇಜ್‍ನಲ್ಲಿ  ವಿವಿಧ ಪ್ರಾಣಿಗಳೊಂದಿಗಿನ ಸಾಕಷ್ಟು ವಿಡಿಯೊಗಳನ್ನು, ಪೋಸ್ಟ್ ಮಾಡಿದ್ದಾಳೆ.

ಈ ವಿಡಿಯೊ ನೋಡಿದವರು ಬೆಚ್ಚಿ ಬಿದ್ದಿದ್ದಾರೆ ಮತ್ತು ತಮ್ಮ ಕಳವಳವನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ. “ಹಾವಿನ ಬಗ್ಗೆ ಎಚ್ಚರದಿಂದಿರಿ. ಎಂದು ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ. “ನಾಗರಹಾವನ್ನು ಚುಂಬಿಸುವುದು ತುಂಬಾ ಮೂರ್ಖತನದ ಆಲೋಚನೆ” ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ.

ಇದನ್ನೂ ಓದಿ: ನಾಗಾ ಸಾಧುಗಳ ಬಗ್ಗೆ ಗೊತ್ತಿರದ ಕುತೂಹಲಕಾರಿ ವಿಷಯಗಳು ಇಲ್ಲಿವೆ ಓದಿ…

“ಈ ಹುಡುಗಿ ಮಾಡಿದ ಕೆಲಸ ತುಂಬಾ ಅಪಾಯಕಾರಿ” ಎಂದು ಮೂರನೇ ಬಳಕೆದಾರರು ಹೇಳಿದ್ದಾರೆ. ಮತ್ತು ಕೆಲವರು ಅವಳ ಕೆಲಸವನ್ನು ಹೊಗಳಿದ್ದಾರೆ ಮತ್ತು ಅಪಾಯಕಾರಿ ಪ್ರಾಣಿಗಳಿಗೆ ತುಂಬಾ ಹತ್ತಿರವಾಗಿದ್ದಕ್ಕಾಗಿ ಅವಳ ಧೈರ್ಯವನ್ನು ಮೆಚ್ಚಿದ್ದಾರೆ.