Sunday, 15th December 2024

ಆನೆಕೆರೆ ಗ್ರಾಪಂ: ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತರ ಅವಿರೋಧ ಆಯ್ಕೆ

ತುರುವೇಕೆರೆ: ೧೫ ಸ್ಥಾನಗಳ ಗ್ರಾಮಪಂಚಾಯ್ತಿಯಲ್ಲಿ ೧೪ ಸದಸ್ಯರಿದ್ದು ಅಧ್ಯಕ್ಷ ಸ್ಥಾನ ಎಸ್.ಸಿ. ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ರ‍್ಗಕ್ಕೆ ಮೀಸಲಾಗಿದ್ದು ಎರಡನೇ ಅವಧಿಗೆ ನೆಡೆದ ಚುನಾವಣೆಯಲ್ಲಿ ಎಲ್ಲಾ ಸದಸ್ಯರು ಹಾಜರಿದ್ದು ಪಲ್ಲವಿ ನವೀನ್ ಕುಮಾರ್ ರವರನ್ನು ಬಿಟ್ಟು ಯಾರೂ ಸಹ ನಾಮಪತ್ರ ಸಲ್ಲಿಸದ ಕಾರಣ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಉಪಾ ಧ್ಯಕ್ಷರ ಸ್ಥಾನಕ್ಕೆ ರೇಖಾ ಹೆಚ್. ದೇವರಾಜ್ ರವರನ್ನು ಬಿಟ್ಟು ಯಾರು ಸಹ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಯಾಗಿ ರ‍್ತವ್ಯ ನರ‍್ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ. ಪದ್ಮನಾಭ್ ಇವರುಗಳನ್ನು ಅವಿರೋಧ ಆಯ್ಕೆ ಎಂದು ಘೋಷಿಸಿದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಗಳಿಗೆ ಹಿತೈಷಿಗಳು ಹಾಗು ಅಭಿಮಾನಿಗಳು ಹಾರ ಹಾಕಿ ಅಭಿನಂದನೆ ಸಲ್ಲಿಸಿದರು.

ನಂತರ ನೂತನ ಅಧ್ಯಕ್ಷರು ಮಾತನಾಡಿ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಲು ಸಹಕರಿಸಿದ ಎಲ್ಲ ಸದಸ್ಯರುಗಳಿಗೂ ಹಾಗೂ ಬೆಂಬಲಿಗರಿಗೂ ನನ್ನ ಧನ್ಯವಾದಗಳು ಎಂದು ತಿಳಿಸಿ ನನ್ನ ಅಧಿಕಾರಾವಧಿಯಲ್ಲಿ ಬಹಳಷ್ಟು ಅಭಿವೃದ್ಧಿ ಕರ‍್ಯಗಳಿಗೆ ಒತ್ತು ಕೊಟ್ಟು ಹಾಗೂ ಮೂಲಭೂತ ಸೌರ‍್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹಾಗೆಯೇ ಮಾದರಿ ಗ್ರಾಮ ಪಂಚಾಯತಿ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ತೊರೆಮಾವಿನಹಳ್ಳಿ ರಾಮಕೃಷ್ಣ, ಸೋಮೇನಹಳ್ಳಿ ದಿಲೀಪ್, ಮಲಸೀಮೆ ಶ್ರೀನಿವಾಸ್, ಪುನೀತ್ ಭೂವನಹಳ್ಳಿ, ನಂದೀಶ್ ಗೌಡ, ಮಂಜುನಾಥ್ ಜಿ.ಏನ್. ವಕೀಲರು , ಶಿವಕುಮಾರ್ ಮಾಜಿ ಸದಸ್ಯರು, ನಂಜುಂಡಪ್ಪ , ಪುಟ್ಟೇಗೌಡ ,ಉಮೇಶ್, ಜಯದೇವ್ ಸೇರಿದಂತೆ ಸದಸ್ಯರುಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.