Saturday, 14th December 2024

ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು

ಇಂಡಿ: ಇಂದಿರಾಗಾಂಧಿ ವೃದ್ಯಪ್ಯ ವೇತನ ಹಾಗೂ ಸಂಧ್ಯಾಸುರಕ್ಷಾ ಯೋಜನೆ ಅಡಿಯಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಿ ರ‍್ಹರಲ್ಲದ ಫನಾನು ಭವಿಗಳಿಗೆ ಈ ಯೋಜನೆಯ ಫಲಾನುಭವಿಗಳನ್ನಾಗಿ ಮಾಡಿ ಭೃಷ್ಠಚಾರ ಎಸಗಿದ್ದು ಕೂಡಲೆ ಇದನ್ನು ತನಿಖೆ ಮಾಡಿ ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾಗೇಶ ಶಿವಶರಣ ತಹಶೀಲ್ದಾರ ಬಿ.ಎಸ್‌.ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು.

ತಹಶೀಲ್ದಾರ ಕಚೇರಿಯಿಂದ ಈ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಪಡೆದುಕೊಂಡಿದ್ದು, ಮಂಜೂರು ಮಾಡಿದ ೩೪೫೬ ಫಲಾನುಭವಿಗಳಲ್ಲಿ ೫೦೨ ಫಲಾನುಭವಿಗಳು ಇಂದಿರಾಗಾಂಧಿ ರಾಷ್ಟ್ರೀಯ ವೃದ್ಯಾಪ್ಯ ವೇತನ ಹಾಗೂ ಸಂಧ್ಯಾಸುರಕ್ಷಾ ಯೋಜನೆಗೆ ರ‍್ಹರಾಗಿರುವುದಿಲ್ಲ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

೫೦೨ ಅರ‍್ಹ ಫಲಾನುಭವಿಗಳ ವಯಸ್ಸು ಕಡಿಮೆ ಇದ್ದರೂ ಕೂಡಾ ಸಂಬಂಧಿಸಿದ ಅಧಿಕಾರಿಗಳು ಅದನ್ನು ಕೂಲಂಕೂಷವಾಗಿ ವಿಚಾರಣೆ ಮಾಡದೆ ಮಂಜೂರು ನೀಡಿರುತ್ತಾರೆ. ಅಲ್ಲದೆ ಇಂಡಿ ತಾಲೂಕಿನವರು ಅಲ್ಲದೆ ಇರುವ ಫಲಾನುಭವಿಗಳಿಗೂ ಮಂಜೂರು ಆದೇಶ ಪತ್ರ ನೀಡಿದ್ದಾರೆ.

ಕೆಲವರು ಖೋಟ್ಟಿ ದಾಖಲೆಗಳನ್ನು ಸಲ್ಲಿಸಿ ಯೋಜನೆಯ ಫಲಾನುಭವಿಗಳಾಗಿದ್ದು, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಯಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆ ಸರ‍್ಪಕವಾಗಿ ರ‍್ಹ ಫಲಾನುಭವಿಗಳಿಗೆ ತಲುಪಿಸಬೇಕಾದ ಅಧಿಕಾರಿಗಳು ಪ್ರತಿ ರ‍್ಜಿದಾರರಿಂದ ೨ ಸಾವಿರ ರೂ.ಗಳನ್ನು ಪಡೆದುಕೊಂಡು ಏಜೆಂಟರ ಮೂಲಕ ಖೊಟ್ಟಿ ದಾಖಲೆಗಳನ್ನು ಸೃಷ್ಠಿಸಿ ರ‍್ಕಾರದ ಬೊಕ್ಕಸಕ್ಕೆ ಹಾನಿ ಉಂಟು ಮಾಡಿದ್ದಾರೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದು, ಕೇವಲ ೭ ತಿಂಗಳಲ್ಲಿ ಮಂಜೂರು ಮಾಡಿದ ಈ ಯೋಜನೆಗಳ ಫಲಾನುಭವಿಗಳ ಪಟ್ಟಿಯಲ್ಲಿ ೫೦೨ ಅರ‍್ಹ ಫಲಾನುಭವಿಗಳಿದ್ದು ೫ ರ‍್ಷಗಳಿಂದ ಎಷ್ಟು ಅರ‍್ಹ ಫಲಾನುವೀಗಳು ಇದರಲ್ಲಿ ಇದ್ದಾರೆ ಎಂಬುದು ತನಿಖೆ ಮಾಡಬೇಕು.

ಈ ಯೋಜನೆಗಳಿಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ತಹಶೀಲ್ದಾರರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.