ಬೆಂಗಳೂರು: ನಗರದಲ್ಲಿ ರೌಡಿ ಶೀಟರ್‌ಗಳು (Rowdy Sheeter) ಯಾವ ಕಾನೂನಿನ ಭಯವಿಲ್ಲದೆ ತಮ್ಮ ಅಟ್ಟಹಾಸ (Crime News) ಮುಂದುವರಿಸಿದ್ದಾರೆ. ಯುವಕನೊಬ್ಬನನ್ನು ನಡು ರಸ್ತೆಯಲ್ಲೇ ಬೆತ್ತಲೆಗೊಳಿಸಿ, ಆತನ ಮೇಲೆ ಹಲ್ಲೆ ಮಾಡಿ (Assault case), ಓಡಿಸಿದ ಘಟನೆ ನಡೆದಿದೆ. ರೌಡಿಗಳ ಕೀಚಕತನ (Bangalore crime news) ಕಂಡು ನಾಗರಿಕರು ಬೆಚ್ಚಿ ಬಿದ್ದಿದ್ದಾರೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಗೋಪಾಲನಗರದಲ್ಲಿ ಘಟನೆ ನಡೆದಿದೆ. ನಡುರಸ್ತೆಯಲ್ಲೇ ರೌಡಿ ಶೀಟರ್‌ಗಳು ಯುವಕನೊಬ್ಬನನ್ನು ಬಟ್ಟೆ ಬಿಚ್ಚಿಸಿ ಸಂಪೂರ್ಣ ಬೆತ್ತಲೆಗೊಳಿಸಿ, ಆತನ ಮುಖ, ದೇಹದಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ. ಈ ಎಲ್ಲಾ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದಾರೆ. ನಂತರ ಆತನನ್ನು ಬೆತ್ತಲೆಯಾಗಿ ನಡು ರಸ್ತೆಯಲ್ಲಿ ಓಡಿಸಿದ್ದಾರೆ.
ರೌಡಿಗಳಿಂದ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಯುವಕ ಬೆತ್ತಲೆಯಾಗಿ ಓಡಿರುವುದಾಗಿ ಹೇಳಲಾಗುತ್ತಿದೆ. ರೌಡಿಗಳ ಅಟ್ಟಹಾಸದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಕೃತ್ಯ ಎಸಗಿದ ರೌಡಿ ಶೀಟರ್‌ಗಳ ತಲಾಶೆ ಆರಂಭಿಸಿದ್ದಾರೆ.