Thursday, 19th September 2024

ಆಟೋ ರಿಕ್ಷಾ ಪ್ರಯಾಣ ದರ ಇಂದಿನಿಂದ ಏರಿಕೆ

ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಇಂದಿನಿಂದ ಏರಿಕೆಯಾಗಿದ್ದು, ಪ್ರಯಾಣಿಕರಿಗೆ ಹೊರೆಯಾಗಿ ಪರಿಣಮಿಸಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ.

ಜನರು ಈಗಾಗಲೇ ಅಗತ್ಯ ವಸ್ತಗಳು ಬೆಲೆ ಏರಿಕೆಯ ಸಂಕಷ್ಟದ ಸಮಯದಲ್ಲೇ ಆಟೋ ರಿಕ್ಷಾ ಪ್ರಯಾಣ ದುಬಾರಿ ಆಗುತ್ತಿದೆ. ಪೆಟ್ರೋಲ್, ಡೀಸೆಲ್‌ನಿಂದ ಹಿಡಿದು ತರಕಾರಿ ಮತ್ತು ಇತರ ವಸ್ತುಗಳ ಬೆಲೆ ಏರಿಕೆ ಆಗಿದೆ.

ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳ ಮಾಡಿ ಬೆಂಗಳೂರು ನಗರ ಜಿಲ್ಲೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಆಟೋ ದರ ಪರಿಷ್ಕರಣೆ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ.

ಆಟೋ ದರಗಳನ್ನು ಪರಿಷ್ಕರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಈ ಹಿನ್ನಲೆ ಯಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ. ಹೊಸ ದರ ಡಿ.1ರಿಂದ ಜಾರಿಗೆ ಬಂದಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ ಪ್ರಯಾಣ ದರ ಮೊದಲ 2 ಕಿಲೋಮೀಟರ್‌ಗೆ ರೂ. 30 ಆಗಿದೆ (ಮೂವರು ಪ್ರಯಾಣಿಕರು). ನಂತರ ಪ್ರತಿ ಕಿಲೋ ಮೀಟರ್ ದರ 15 ರೂಪಾಯಿ ದರ ನಿಗದಿ ಮಾಡಲಾಗಿದೆ (ಮೂವರು ಪ್ರಯಾ ಣಿಕರು ಮಾತ್ರ). ಪ್ರಯಾಣಿಕರ ಲಗೇಜು ಸಾಗಣಗೆ ಮೊದಲ 20 ಕೆ.ಜಿ. ಉಚಿತ. ಮೊದಲ 20 ಕೆ.ಜಿ.ಯಿಂದ ನಂತರ ಪ್ರತಿ 20 ಕೆ.ಜಿಗೆ ಅಥವಾ ಅದರ ಭಾಗಕ್ಕೆ ರೂ. 5 ದರ ನಿಗದಿ ಮಾಡಲಾಗಿದೆ.

2013ರಲ್ಲಿ ಈ ಹಿಂದೆ ಆಟೋ ದರ ಏರಿಕೆ ಮಾಡಲಾಗಿತ್ತು. ಬಳಿಕ ಸಾಕಷ್ಟು ಬಾರಿ ಜಿಲ್ಲಾಡಳಿತಕ್ಕೆ ಈ ಬಗ್ಗೆ ಮನವಿ ಮಾಡಿದ್ದರೂ ಆಟೋ‌ದರ ಏರಿಕೆಗೆ ಮನಸ್ಸು ಮಾಡಿರಲಿಲ್ಲ. 8 ವರ್ಷದ ಬಳಿಕ ಆಟೋ ಪ್ರಯಾಣ ದರ ಏರಿಕೆಯಾಗಿರುವುದರಿಂದ ಒಂದು ಕಡೆ ಆಟೋ ಚಾಲಕರು ಸಂಭ್ರಮಿಸುತ್ತಿದ್ದರೆ, ಮತ್ತೊಂದೆಡೆ 1 ಲೀ. ಆಟೋ ಗ್ಯಾಸ್ ದರ 3 ರೂಪಾಯಿ 5 ಪೈಸೆ ಏರಿಕೆಯಾಗಿದೆ.