Thursday, 12th December 2024

ಆಯುಷ್ಮಾನ್ ಭಾರತ್ ಆರೋಗ್ಯ ಕ್ಷೇಮ ಕೇಂದ್ರ ಉದ್ಘಾಟನೆ

ಪಾವಗಡ : ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕ್ಷೇಮ ಕೇಂದ್ರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್ ಮೂರ್ತಿ ಉದ್ಘಾಟನೆ ಮಾಡಿದರು.

ಇತ್ತೀಚೆಗೆ ಬದಲಾದ ಆಹಾರ ಶೈಲಿಯಿಂದ ಹಲವಾರು ಜನರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ ಹಾಗಾಗಬಾರದು ಉತ್ಯಮ ಜೀವನಶೈಲಿ ಅಳವಡಿಸಿಕೊಂಡು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿ ಕೊಂಡು ದಿನನಿತ್ಯದ ಆಹಾರ ಶೈಲಿ ಅಳವಡಿಸಿಕೊಳ್ಳುವುದರೊಂದಿಗೆ ಸದಾ ಚಟುವಟಿಕೆಯಾಗಿರುವು ದರಿಂದ ಉತ್ತಮ ಆರೋಗ್ಯ ವಾಗಿರಬಹಿದಾಗಿದೆ ಆಗಾಗ ಕಾಲಕಾಲಕ್ಕೆ, ಸಮಯಕ್ಕೆ ಸಿಗುವ ಹಣ್ಣು ಗಳು,ಸೊಪ್ಪುಗಳು ತರಕಾರಿಗಳು ಕಾಳುಗಳನ್ನು ಸೇವಿಸಿ ಆರೋಗ್ಯವಂತರಾಗಿರಿ ಎಂದು ತಿಳಿಸಿದರು.

ನಂತರ ವೈದ್ಯಾಧಿಕಾರಿಗಳಾದ ಡಾ.ಲಿಂಗರಾಜು,ವೈದ್ಯಾಧಿಕಾರಿಗಳು ಮಾತನಾಡಿ ಕ್ಷೇಮ ಕೇಂದ್ರದಲ್ಲಿ ಸಿಗುವ ಸೌಲಭ್ಯಗಳ ಸದುಪಯೊಗಪಡಿಸಿಕೊಳ್ಳಿ ಎಂದು ತಿಳಿಸಿದರು.

ಈ ವೇಳೆ ಕೇಶವ,ರಾಧಾಮಣಿ,ಭರತ್ ಅವರು ಮಾತನಾಡಿ ಸಾಂಕ್ರಾಮಿಕ ರೋಗಗಳು ಮತ್ತು ಅವುಗಳ ನಿಯಂತ್ರಣ ಗ್ರಮಗಳ ಬಗ್ಗೆ ತಿಳಿಸಿದರು.

ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಹನುಮಕ್ಕ,ಆರೋಗ್ಯನಿರೀಕ್ಷಣಾಧಿಕಾರಿ ಕೇಶವ ,ಸಮುದಾಯ ಆರೋಗ್ಯಾಧಿಕಾರಿ ಶ್ರೀಮತಿ ರಾಧಾಮಣಿ,ಭರತ್ ಹಾಗೂ ಆಶಾ ಸುಗಮಕಾರರಾದ ವಾಣಿ ,ಆಶಾಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಹಾಜರಿದ್ದರು.