ಇಂಡಿ: ಜೆ.ಡಿ.ಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾನಾಗೌಡ ಬಿರಾದಾರ ಇವರ ೫೬ನೇ ಹುಟ್ಟು ಹಬ್ಬದ ನಿಮಿತ್ಯ ಜೆ.ಡಿ.ಎಸ್ ಮುಖಂಡ ಬಿ.ಡಿ ಪಾಟೀಲ ಹಾಗೂ ಕಾರ್ಯಕರ್ತರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಹಣ್ಣು ಹಂಪಲ, ಬ್ರೇಡ್ ಬಿಸ್ಕಕೇಟ್ ವಿತರಣೆ ಮಾಡಿದರು.
ನಾನಾಗೌಡ ಪಾಟೀಲ ಸರಳ ಜೀವಿ ತತ್ವಸಿದ್ದಾಂತ ನ್ಯಾಯ. ನೀತಿ ಒಳ್ಳೆತನ ಅವರಲ್ಲಿದೆ. ಬಡವರ ದೀನದರ್ಬಲರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು ಜಾತಿಗಿಂತ ನೀತಿ ಮುಖ್ಯ ಎಂದು ಸಾರ್ವಜನಿಕ ಬದುಕಿ ನಲ್ಲಿ ಮೌಲ್ಯಯುತ ಜೀವನ ಸಾಗಿಸುತ್ತಿದ್ದಾರೆ. ಅವರು ನುಡಿದಂತೆ ನಡೆದು ಬದ್ದತೆಯ ರಾಜಕಾರಣಿಯಾಗಿದ್ದಾರೆ, ಭಗವಂತ ಇವರ ಅವರಿಗೆ ಒಳ್ಳೆಯ ಆರೋಗ್ಯ ನೀಡಲೇಂದು ಜೆಡಿಎಸ್ ಮುಖಂಡ ಬ.ಇ ಪಾಟೀಲ ಶುಭ ಹಾರೈಸಿದರು.
ಡಾ.ರಾಜಶೇಖರ ಕೋಳೆಕರ್, ಡಾ.ಅಮೀತ ಕೋಳೆಕರ್,ಡಾ. ರಮೇಶ ರಾಠೋಡ, ಮುಖಂಡರಾದ ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಅಯುಬ ನಾಟೀಕಾರ, ಇರ್ಫಾನ ಅಗರಖೇಡ, ರಜು ಮುಲ್ಲಾ, ದುಂಡು ಅಗರಖೇಡ, ಮಲ್ಲು ವಾಲಿಕಾರ, ಇಸಾಕಕ ಸೌದಾಗರ, ಫಜಲು ಮುಲ್ಲಾ ಇತರರಿದ್ದರು.