Sunday, 1st December 2024

ಸಾಹಿತಿಗಳ ಕೂದಲು ಮುಟ್ಟಲು ಕಾಂಗ್ರೆಸ್ ಬಿಡುವುದಿಲ್ಲ: ಬಿ.ಕೆ.ಹರಿಪ್ರಸಾದ್

ಹೊಸಪೇಟೆ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಲ್ಬುರ್ಗಿ, ಪನ್ಸಾರೆ, ಗೌರಿ ಲಂಕೇಶ್ ಅವರನ್ನ ಬಲಪಂಥೀಯ ಸಂಘಟನೆಗಳು, ಸನಾತನವಾದಿಗಳು ಹತ್ಯೆ ಮಾಡಿ ದ್ದಾರೆ. ಈಗ ಸಿದ್ರಾಮಯ್ಯ ಸೇರಿದಂತೆ ಅನೇಕ ಸಾಹಿತಿಗಳಿಗೆ ಕೊಲೆ ಮಾಡುವುದಾಗಿ ಬೆದರಿಕೆ ಪತ್ರ ಬಂದಿದೆ. ಕಾಂಗ್ರೆಸ್ ಪಕ್ಷ ದೇಶದ ಐಕ್ಯತೆಗಾಗಿ ತ್ಯಾಗ ಬಲಿದಾನ ಮಾಡಲು ಸಿದ್ದ ಎಂದು ಪತ್ರಿಗೋಷ್ಠಿಯಲ್ಲಿ ಮಾತನಾಡಿದರು.

ರಾಜೀವ್ ಗಾಂಧಿ, ಇಂದಿರಾಗಾಂಧಿಯವರು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ನಮಗೆ ಯಾವ ಭಯವೂ ಇಲ್ಲ ಕೋಮು ವಾದಿಗಳಿಗೆ ಎದೆಯೊಡ್ಡಿ ನಿಲ್ಲಲು ನಾವು ಸಿದ್ದರಿದ್ದೇವೆ. ಆದ್ರೆ ಸಾಹಿತಿಗಳ ಕೂದಲು ಮುಟ್ಟಲು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಬಹಿರಂಗವಾಗಿ ಕೊಲೆ ಬೆದರಿಕೆ ಪತ್ರ ಬರುತ್ತೆ ಅಂದ್ರೆ ರಾಜ್ಯದ ಗೃಹ ಮರಕೋತಿ ಆಟ ಆಡಕ್ಕೆ ಲಾಯಕ್. ಗೃಹ ಸಚಿವರೇ ಮತೀಯವಾದಿ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಾರೆ. ಅವರ ಸಂಘಟನೆಗಳು ಬಾಲ ಬಿಚ್ಚಲು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇಂತಹ ಗೃಹ ಸಚಿವ ಕೂಡಲೇ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿಗಳು ಕ್ರಿಯೆಗೆ ಪ್ರತಿಕ್ರಿಯೆ ಸಹಜ ಅಂತಾರೆ ಇಂತವರಿಂದ ರಕ್ಷಣೆ ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್ ಮುಖಂಡ ವೆಂಕಟರಾವ್ ಘೋರ್ಪಡೆ, ರಘು ಗುಜ್ಜಲ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.