Thursday, 21st November 2024

B T Lalitha Nayak: ಶಿವ-ಪಾರ್ವತಿ ಸೇರಿ ಹಿಂದೂ ದೇವರ ಬಗ್ಗೆ ಅಪಹಾಸ್ಯ; ಮತ್ತೆ ವಿವಾದದ ಕಿಡಿ ಹಚ್ಚಿದ ಲಲಿತಾ ನಾಯಕ್‌

lalita nayak

ಧಾರವಾಡ: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಲ್ಲಿರುವ ಸಾಮಾಜಿಕ ಕಾರ್ಯಕರ್ತೆ ಬಿ.ಟಿ. ಲಲಿತಾ ನಾಯಕ್(B T Lalitha Nayak) ಅವರು ಹಿಂದೂ ದೇವರುಗಳನ್ನು ಗೇಲಿ ಮಾಡಿ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಶಿವ ಪಾರ್ವತಿ, ಗಣೇಶ, ಅಯ್ಯಪ್ಪ ಹೀಗೆ ಹಿಂದೂ ದೇವರ ಬಗ್ಗೆ ಅಪಹಾಸ್ಯ ಮಾಡಿದ್ದಾರೆ.

ಧಾರವಾಡದಲ್ಲಿ ಧರೆಗೆ ದೊಡ್ಡವರು ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಟಿ. ಲಲಿತಾ ನಾಯಕ್ ಗಣೇಶ ಸೇರಿದಂತೆ ಇತರೆ ದೇವರುಗಳನ್ನು ವ್ಯಂಗ್ಯವಾಡಿದರು. ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ‘ಧರೆಗೆ ದೊಡ್ಡವರು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣೇಶ ಎಂದರೆ ಜ್ಞಾನ. ಈ ಜ್ಞಾನದ ರೂಪವನ್ನು ನೀಡಲಿಲ್ಲ. ಅವನಿಗೆ ಮುಂಡ ಮತ್ತು ತಲೆ ಇದೆ. ಈಶ್ವರನಂತಹ ತಂದೆ ಇದ್ದಾರೆ. ದೇವರು ಯಾರನ್ನಾದರೂ ಕೊಲ್ಲುತ್ತಾನೆಯೇ? ನದಿಯಿಂದ ಸ್ವರ್ಗಕ್ಕೆ ಏರುವವನು ದೇವರು. ಪರಮಾಣು ತೃಣಕಾಷ್ಟದಲ್ಲಿ ದೇವರಿರುವಂತೆ. ಹಾಗಾದರೆ ಪಾರ್ವತಿಯ ಬಚ್ಚಲಲ್ಲಿ ದೇವರು ಇದ್ದಾನಾ? ಒಬ್ಬ ಹುಡುಗ ಎಲ್ಲೆಂದರಲ್ಲಿ ನಿಂತು ಕೊಲ್ಲುವುದನ್ನು ದೇವರು ಹೇಗೆ ನೋಡುತ್ತಾನೆ? ನಾನು ಇದನ್ನು ಕೇಳಿದೆ ಎಂದಿದ್ದಾರೆ.

ಅವರೆಲ್ಲ ದೇವರಲ್ಲ, ಮನುಷ್ಯರು. ಆ ಮನುಷ್ಯ ಮಾಡಿರೋ ತಪ್ಪನ್ನು ನಾವು ಮಾಡಬಾರದು. ಅಯ್ಯಪ್ಪ ಭಕ್ತರು ಅಂತಾ ಕೆಲವರು ಬಹಳ ಮಾಡುತ್ತಿರುತ್ತಾರೆ. ಆದರೆ ಅಯ್ಯಪ್ಪ ಕಾಡಿನಲ್ಲಿ ಇಲ್ಲ. ಅಯ್ಯಪ್ಪ ಎಲ್ಲ ಕಡೆ ಅನಾಥವಾಗಿ ಇದ್ದಾನೆ. ಅನೇಕ ಅನಾಥ ಮಕ್ಕಳಿದ್ದಾರೆ. ಅವರಿಗೆ ತಂದೆ-ತಾಯಿ ಇಲ್ಲ. ಅವರನ್ನು ನೋಡಿಕೊಳ್ಳುವ ಕೆಲಸ ಆಗಬೇಕು. ಅದನ್ನು ಬಿಟ್ಟು ಕಾಡಿಗೆ ಹೋಗುವುದಲ್ಲ. ಅಲ್ಲಿ ಕಾಡು ಕಡಿದು ಪುರೋಹಿತಶಾಹಿಗೆ ಅವಕಾಶ ಕೊಟ್ಟಿದ್ದಾರೆ. ಅಲ್ಲೆಲ್ಲ ತಲೆಯ ಮೇಲೆ ಏನೇನೋ ಹೊತ್ತುಕೊಂಡು ಹೋಗ್ತಾರೆ. ಜಯಮಾಲಾ ಏನೋ ಮುಟ್ಟಿದ್ರಂತೆ. ಮಟ್ಟಿದ ಕೂಡಲೇ ಮೈಲಿಗೆ ಆಯ್ತು ಅಂದ್ರು. ಕುಳಿತಿರೋ ಮೂರ್ತಿಗೆ ಯಾರು ಮುಟ್ಟಿದ್ರು ಒಂದೇ ಮುಟ್ಟದಿದ್ದರೂ ಒಂದೇ. ಸಂಕೇತಗಳು ಯಾವತ್ತೂ ಸತ್ಯವಲ್ಲ. ಸಂಕೇತಗಳು ಸಂಕೇತ ಅಷ್ಟೆ ಎಂದು ವ್ಯಂಗ್ಯವಾಡಿದರು.

ನಾವು ದೇಶದ ಧ್ವಜವನ್ನು ಗೌರವಿಸುತ್ತೇವೆ. ಆದರೆ ಈ ಧ್ವಜವು ಒಂದು ದೇಶವಲ್ಲ. ಇದು ದೇಶದ ಜನತೆಯ ಪ್ರತೀಕ. ಧ್ವಜಾರೋಹಣ ಮತ್ತು ಪೂಜೆ ಒಂದು ವರ್ಷದ ನಂತರ ಏನಾದರೂ ಆಗುತ್ತದೆಯೇ? ಏನೂ ಆಗುವುದಿಲ್ಲ. ಈ ಪರಿಸರವೇ ದೇವರು. ಕುವೆಂಪು ಅವರು ಭಾರತಾಂಬೆ ದೇವಿಯನ್ನು ಆರಾಧಿಸೋಣ ಎಂದರು. ಇದು ಕೂಡ ಈಗ ತಪ್ಪಾಗಿದೆ. ಕಿರೀಟವನ್ನು ಧರಿಸಿದ ದೇವರು ನಾಲ್ಕು ಕೈಗಳಿಂದ ಪೂಜಿಸುತ್ತಾನೆ ಮತ್ತು ಒಳ್ಳೆಯ ಮಾತನ್ನು ಪಾಲಿಸುತ್ತಾನೆ ಎಂದು ಹೇಳುವುದಿಲ್ಲ. ಇದು ಕೂಡ ತಪ್ಪು ಎಂದರು.

ಈ ಸುದ್ದಿಯನ್ನೂ ಓದಿ: Actor Darshan: ಜೀವ ಬೆದರಿಕೆ; ನಟ ದರ್ಶನ್‌, ಅಭಿಮಾನಿಗಳ ವಿರುದ್ಧ ಲಾಯರ್‌ ಜಗದೀಶ್‌ ದೂರು