ಬಸವನಬಾಗೇವಾಡಿ: ಶ್ರಮಜೀವಿಗಳಾದ ಬಂಜಾರಾ ಸಮಾಜದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಸುಂದರ ಜೀವನ ರೂಪಿಸಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಸಮೀಪದ ಜಾಲಿಹಳ್ಳ ತಾಂಡಾದಲ್ಲಿ ಸೋಮವಾರ ಸಂತ ಸೇವಾಲಾಲರ ಹಾಗೂ ದರ‍್ಗಾದೇವಿ ದೇವಾಲಯದ ಮುಂದೆ ನೂತನ ವಾಗಿ ನರ‍್ಮಿಸಿರುವ ಮಾಲಕಂಭದ ಉದ್ಘಾಟನೆ ಹಾಗೂ ಸಂತ ಸೇವಾಲಾಲರ (ನಂದಿ) ಗರಶ್ಯಾ ಹಾಗೂ ಕುದುರೆ ಪ್ರತಿಷ್ಠಾಪನೆ ನೆರವೇರಿಸಿದ ನಂತರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಂಜಾರ ಸಮಾಜದವರು ಶ್ರದ್ಧೆಯಿಂದ ದೇವರ ಮೇಲೆ ನಂಬಿಕೆ ಇಟ್ಟು ಆಧ್ಯಾತ್ಮೀಕ ಕರ‍್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಎರಡು ದಶಕಗಳ ಹಿಂದೆ ಬಂಜಾರ ಸಮಾಜವು ಬಹಳ ಹಿಂದೆ ಉಳಿದಿತ್ತು. ಇಂದು ಅವರು ಪ್ರಜ್ಞಾವಂತರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರೊಂದಿಗೆ ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂದರು.
ತಾಂತ್ರಿಕವಾಗಿ ಮುಂದುವರೆದ ಜಗತ್ತಿನಲ್ಲಿ ಮನುಷ್ಯ ಹಲವಾರು ಸಾಧನೆಗಳಿಗೆ ಕಾರಣ ನಾಗಿದ್ದಾನೆ. ಇದಕ್ಕೆ ದೇವರ ಮೇಲಿರುವ ಅಪಾರ ನಂಬಿಕೆಯೂ ಕಾರಣವಾಗಿದೆ. ಪರಸ್ಪರ ಸಹಕಾರದಿಂದ ಪ್ರದೇಶಗಳ ಅಭಿವೃದ್ದಿಗೆ ಪೂರಕ ವಾತಾವರಣ ನರ‍್ಮಾಣವಾಗುತ್ತದೆ. ತಾಲ್ಲೂಕಿನ ಎಲ್ಲ ತಾಂಡಾಗಳಿಗಿಂತ ಜಾಲಿಹಳ್ಳ ತಾಂಡಾ ಹೆಚ್ಚಿನ ಮೂಲಭೂತ ಸೌರ‍್ಯಗಳನ್ನು ಹೊಂದಿದೆ ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಹಕಾರ ಮಹಾಮಂಡಳದ ನರ‍್ದೇಶಕ ಈರಣ್ಣ ಪಟ್ಟಣಶೆಟ್ಟಿ, ಸಾನಿಧ್ಯ ವಹಿಸಿದ್ದ ಸೋಮದೇವರಹಟ್ಟಿಯ ಜಗನು ಮಹಾರಾಜರು, ವಕೀಲ ರವಿ ರಾಠೋಡ ಮಾತನಾಡಿದರು.
ಜಾಲಮಟ್ಟಿ ತಾಂಡಾದ ವಿಜಯಕುಮಾರ ಮಹಾರಾಜರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಬಸಣ್ಣ ದೇಸಾಯಿ, ಸುರೇಶಗೌಡ ಪಾಟೀಲ, ಅನೀಲ ಅಗರವಾಲ, ಬಸವರಾಜ ಹಾರಿವಾಳ, ಜಗದೀಶ ಕೊಟ್ರಶೆಟ್ಟಿ, ಈಶ್ವರ ಜಾಧವ, ಶೇಖರ ಗೊಳಸಂಗಿ, ಸಂಗಮೇಶ ಓಲೇಕಾರ, ಸುಭಾಸ ಚಿಕ್ಕೊಂಡ, ಉಮೇಶ ಹಾರಿವಾಳ, ದೇವೇಂದ್ರ ಚವ್ಹಾಣ, ಡಾ: ಬಸವರಾಜ ಚವ್ಹಾಣ, ಸಂಕನಗೌಡ ಪಾಟೀಲ, ಪುನೀತ ಲಮಾಣಿ ಇದ್ದರು.
ವಕೀಲ ರ‍್ಮಣ್ಣ ಪವಾರ ಸ್ವಾಗತಿಸಿದರು, ಶಿಕ್ಷಕ ಬಿ.ವಿ.ಚಕ್ರಮನಿ ನಿರೂಪಿಸಿದರು, ಕೊಟ್ರೇಶ ಹೆಗಡ್ಯಾಳ ವಂದಿಸಿದರು.