ಇಂಡಿ : ಬಂಜಾರ ಸಮುದಾಯ ಶ್ರಮಿಕರು ಸಮಾಜದಲ್ಲಿ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸ ,ಸಾಮರಸ್ಯ ಜೀವನ ಸಾಗಿಸುವ ಮೂಲಕ ಹೃದಯಶ್ರೀಮಂತರಾಗಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ಬಂಜಾರ ನೌಕರರ ಕ್ಷೇಮಾಭಿವೃದ್ದಿ ಸಂಘ ಇಂಡಿ, ಬಂಜಾರ ಜಾಗೃತ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಂಜಾರ ಜನಾಂಗ ಇಂದಿನ ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಎಸ್ಸಿ ವರ್ಗಕ್ಕೆ ಸೇರಿಸಲು ಶ್ರಮಿಸಿದ ಅಂದಿನ ಬಂಜಾರ ಸಮುದಾಯದ ನಾಯಕ ,ಕೆ.ಟಿ ರಾಠೋಡ ಹಾಗೂ ಉಕ್ಕಿನ ಮಹಿಳೆ ದಿ. ಇಂಧಿರಾ ಗಾಂಧಿಜಿಯನ್ನು ಮತ್ತು ಅಂದಿನ ಕರ್ನಾಟಕ ಮುಖ್ಯ ಮಂತ್ರಿ ದೇವರಾಜ ಅರಸ ಇವರನ್ನು ಸೂರ್ಯ ಚಂದ್ರ ಇರುವವರೆಗೂ ಮರೇಯಬಾರದು ಉಪಕಾರ ಮಾಡಿದವರಿಗೆ ಸದಾ ಕಾಲಸ್ಮರಿಸುವುದು ಮಾನವೀಯ ಗುಣ.
ಇಂದು ಬಂಜಾರ ಸಮುದಾಯ ಆರ್ಥಿಕ ಕಾರಣಗಳಿಂದ ಗುಳೆ ಹೋಗುತ್ತಿದ್ದಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಡ್ಡಿ ಯಾಗಿದೆ. ಸರಕಾರ ಗರಿಷ್ಠ ಅಂಕಗಳ ಆಧಾರದಲ್ಲಿ ವಸತಿ ನಿಲಯಗಳ ಪ್ರವೇಶ ಅವಕಾಶ ಮಾಡಿರುವುದರಿಂದ ಇಂತಹ ವಿಧ್ಯಾರ್ಥಿಗಳು ವಸತಿ ನಿಲಯ ವಂಚಿತರಾಗುತ್ತಾರೆ. ಗುಳೆ ಹೋದ ಪಾಲಕರ ಮಕ್ಕಳಿಗೆ ಶೈಕ್ಷಣಿಕ ಹಿತದೃಷ್ಠಿಯಿಂದ ವಸತಿ ನಿಲಯಗಳಲ್ಲಿ ಪ್ರವೇಶ ನೀಡುವಂತೆ ಸರಕಾರಗಳು ಆದ್ಯತೆ ನೀಡಬೇಕು.
ಇಂದು ಇಷ್ಟೋಂದು ಪ್ರಮಾಣದ ಅಧಿಕಾರಿಗಳಾಗಲು, ಶೈಕ್ಷಣಿಕ ಪ್ರಗತಿಗೆ ಬಂಜಾರ ಸಮುದಾಯದ ಶ್ರೇಯೋಭಿವೃದ್ದಿಗೆ ಕೆ.ಟಿ ರಾಠೋಡ ವಿಜಯಪೂರ ಜಿಲ್ಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿ ಅನೇಕ ಕುಟುಂಬಗಳು ಸುಸಂಸ್ಕೃತರಾಗಲು ಪೂಲ್‌ಸಿಂಗ್ ರಾಠೋಡ ಕೊಡುಗೆ ಈ ಸಮುದಾಯ ಎಂದಿಗೂ ಮರೆಯಕೂಡದು. ವಿಧಾನ ಪರಿಷತ್ ಮುಖ್ಯ ಸಚೇತನ ಪ್ರಕಾಶ ರಾಠೋಡ ೩ ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋಲು ಕಂಡರೂ ಕೂಡಾ ತಾಳ್ಮೆ, ಸಹನೆ, ವಿಶ್ವಾಸಕ್ಕೆ ಧಕ್ಕೆ ತರುವಂತೆ ನಡೆದುಕೊಂಡಿಲ್ಲ ಜಗವೇಲ್ಲ ನಗುತ್ತೀರಲಿ ಜಗದಳುವು ನನ್ನಗೀರಲಿ ಎಂದು ಎಲ್ಲರೊಂದಿಗೆ ಬಲ್ಲಸಕ್ಕರೆಯಾಗಿದ್ದಾರೆ ಎಂದು ಪ್ರಸಂಶೇನಿಯ ಮಾತುಗಳಾಡಿದರು.
***
ಇಡೀ ದೇಶ ಸುತ್ತಾಡಿದ್ದೇನೆ ಕರ್ನಾಟಕ ರಾಜ್ಯದಲ್ಲಿ ಅದರಲ್ಲಿ ವಿಜಯಪೂರ ಜಿಲ್ಲೆ ಇಂಡಿಯಲ್ಲಿ ಬಂಜಾರ ಸಮಾಜದ ನೌಕರರು, ಶೈಕ್ಷಣಿಕ ಪ್ರಗತಿ ನೋಡಿ ಆಶ್ಚರ್ಯ ಜೊತೆ ಸಂತೋಷವಾಗಿದೆ. ನಮ್ಮ ಸಮಾಜ ಮುಂದೆ ಬರಲು ಎಸ್ಸಿ ಸೇರ್ಪಡೆಯಾಗಲು ಕಾರಣ ಹಿಂದೆ ಎಸ್ಸಿಗೆ ಸೇರಿಸಿದ ನಮ್ಮ ತಂದೆ ಕೆ.ಟಿ ರಾಠೋಡ ಹಾಗೂ ದಿ. ಶ್ರೀಮತಿ ಇಂಧಿರಾಗಾAಧಿಯವರನ್ನು ದಿ. ಡಿದೇವರಾಜ ಅರಸರವರನ್ನು ಬಂಜಾರ ಸಮುದಾಯದ ಜನತೆ ಜೀವ ಇರುವವರೆಗೂ ಮರೆಯಕೂಡದು. ಪ್ರತಿಭಾವಂತರಿಗೆ ಪುರಸ್ಕಾರ ಮಾಡಿ ಬೆನ್ನುತಟ್ಟುವ ಕೆಲಸ ಮಾಡಿರುವುದು ಸ್ವಾಗತಾರ್ಹ ಎಂದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಕೆಸರಟ್ಟಿ ಗುರುಶಂಕರಲಿ0ಗ ಪೀಠದ ಸೋಮಲಿಂಗ ಮಹಾಸ್ವಾಮಿಗಳು ದಿವ್ಯಸಾನಿಧ್ಯವಹಿಸಿ ಆರ್ಶೀವಚನ ನೀಡಿದರು.
ನಾಗಠಾಣ ಶಾಸಕ ದೇವಾನಂದ ಚವ್ಹಾಣ, ರಾಜ್ಯೋತ್ಸವ ಪುರಸೃತ ಆರ್.ಬಿ.ಚಿ ನಾಯಕ, ಕೃಷಿ ಇಲಾಖೆ ಡಿ.ಡಿ ಚಂದ್ರಕಾAತ ಪವಾರ, ಶಂಕರ ಚವ್ಹಾಣ, ಮಾಜಿ ಜಿ.ಪಂ ಸದಸ್ಯ ರಾಮು ರಾಠೋಡ, ಮಾಜಿ ತಾ.ಪಂ ಅಧ್ಯಕ್ಷ ಶೇಖರ ನಾಯಕ, ಅರ್ಜುನ ಲಮಾಣಿ, ಶಿಕ್ಷಣಾಧಿಕಾರಿ ವಸಂತ ರಾಠೋಡ, ನಂದೀಪ ರಾಠೋಡ, ರಾಜು ರಾಠೋಡ, ಎಲ್,ಟಿ ರಾಠೋಡ, ಲಿಂಬಾಜಿ ರಾಠೋಡ, ಸಂಜು ಚವ್ಹಾಣ, ಶ್ರೀಮತಿ ಶೈಲಜಾ ಚವ್ಹಾಣ,ಅಲ್ಲಾಭಕ್ಷ ವಾಲೀಕಾರ, ಭೀಮಣ್ಣಾ ಕೌಲಗಿ, ಧರ್ಮನಾಯಕ, ಪಿಂಟು ರಾಠೋಡ, ಎಂ.ಎಸ್ ನಾಯಕ,ಅರ್ಜುನ ಚವ್ಹಾಣ. ರಾಜು ಚವ್ಹಾಣ, ಮಹಾದೇವ ರಾಠೋಡ ಸೇರಿದಂತೆ ಬಂಜಾರ ಸಮು ದಾಯದ ಗಣ್ಯರು ವೇದಿಕೆಯಲ್ಲಿದ್ದರು.
ಜಯರಾಂ ಚವ್ಹಾಣ ಸ್ವಾಗತಿಸಿ, ವಿಜಯಕುಮಾರ ಪಿ ನಾಯಕ ಪ್ರಾಸ್ತಾವಿಕ ಮಾತನಾಡಿ, ಅರ್ಜುನ ಲಮಾಣಿ ವಂದಿಸಿದರು.
ಬಂಜಾರ ಸಮುದಾಯದ ಪಿ.ಯು.ಸಿ ಹಾಗೂ ಎಸ್.ಎಸ್.ಎಲ್.ಸಿ ಅತೀಹೆಚ್ಚು ಅಂಕಪಡೇದ ವಿಧ್ಯಾರ್ಥಿಗಳಿಗೆ ಸಮಾರಂಭದಲ್ಲಿ ಸನ್ಮಾನಿಸಿದರು.