Sunday, 12th May 2024

ಬಂಜಾರ್ ಸಮಾಜದ ಏಳಿಗೆಗಾಗಿ ಶ್ರಮಿಸುವೆ : ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ

ಹರಪನಹಳ್ಳಿ: ಇಂದಿರಾಗಾ0ಧಿಯವರ ಕಾಲದಿಂದಲೂ ಬಂಜಾರ ಸಮುದಾಯ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿದ್ದು, ಈಗಲೂ ಕಾಂಗ್ರೆಸ್‌ಗೆ ಬೆನ್ನೆಲುಬಾಗಿ ನಿಂತಿದೆ ಎಂದು ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

ಪಟ್ಟಣದ ಆಚಾರ್ಯ ಲೇಔಟ್‌ನಲ್ಲಿನ ತಮ್ಮ ನಿವಾಸದ ಆವರಣದಲ್ಲಿ ಆಯೋಜಿಸಿದ್ದ ತಾಲೂಕಿನ ಬಂಜಾರ ಸಮುದಾಯದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ನಮ್ಮ ಸಮುದಾಯದ ರಕ್ಷಣೆಗೆ ನಿಂತಿದ್ದು, ರಾಜ್ಯದಲ್ಲಿ ೩೦ ರಿಂದ ೩೫ ಸ್ಥಾನ ಶಾಸಕರ ಗೆಲುವಿಗೆ ಬಂಜಾರ ಸಮುದಾಯದ ಮತಗಳು ನಿರ್ಣಯ ವಹಿಸಿವೆ.

ನಾನು ಬಂಜಾರ ಸಮುದಾಯದಿಂದ ಶಾಸಕನಾಗಿ, ಸಚಿವನಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಹರಪನಹಳ್ಳಿ ಕ್ಷೇತ್ರದ ೫೨ ತಾಂಡಗಳಿ0ದ ಲೂ ನನಗೆ ಆರ್ಶೀವಧಿಸಿದ್ದರಿಂದ ರಾಜ್ಯದಲ್ಲಿ ಹೆಸರು ಮಾಡಲು ಸಾದ್ಯವಾಗಿದ್ದು, ಇದೀಗ ಸರ್ಕಾರದಲ್ಲಿ ನಮ್ಮ ಸಮುದಾಯಕ್ಕೆ ಯಾವುದೇ ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂರವರ ಬಳಿ ಧ್ವನಿ ಎತ್ತಿದ್ದು, ಮುಂದಿನ ದಿನಗಳಲ್ಲಿ ಸಮಾಜಕ್ಕೆ ಉತ್ತಮ ಸ್ಥಾನಮಾನ ಸಿಗುವ ಭರವಸೆ ಇದೆ ಎಂದರು.

ಬಿಜೆಪಿಯವರು ನಮ್ಮ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ, ಇಂದಿರಾಗಾAಧಿಯವರ ಕಾಲದಿಂದಲೂ ನಮ್ಮ ಸಮುದಾಯ ಅಭಿವೃದ್ಧಿ ಗೊಂಡಿದೆ. ನರೇಂದ್ರ ಮೋದಿಯವರು ಸುಳ್ಳು ಹೇಳಿ ಜಾತಿ, ಜಾತಿ ನಡುವೆ ವಿಷಯದಲ್ಲಿ ಬೇರ್ಪಡಿಸಿ ಮತ ಕೇಳಲು ಮುಂದಾಗಿದ್ದಾರೆ ಎಂದು ದೂರಿದರು.

ನಾನು ಪ್ರಥಮ ಬಾರಿಗೆ ಶಾಸಕನಾಗಿದ್ದಾಗ ತಾಲೂಕನ್ನು ಅಭಿವೃದ್ಧಿ ಮಾಡಲು ಶ್ರಮಿಸಿದ್ದೇನೆ, ಹೆಚ್ಚಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿ ಹಾಸ್ಟೇಲ್‌ಗಳಿಗೆ ಬಂಜಾರ ಸಮುದಾಯದ ವಿದ್ಯಾರ್ಥಿಗಳಿಗೂ ಅವಕಾಶ ನೀಡಿದ್ದು ಇಂದು ಅನೇಕರು ಉನ್ನತ ಹುದ್ದೆಯಲ್ಲಿದ್ದಾರೆ, ನಾವು ಮಾಡಿದ ಉಪಕಾರ ನೆನೆದರೆ ಅದು ದೊಡ್ಡ ಉಪಕಾರ ನಮ್ಮ ಸಮಾಜಕ್ಕೆ ರಾಜ್ಯದಲ್ಲಿ ಉತ್ತಮ ನಾಯಕರು ಬೇಕಿದೆ ಎಂದ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ತಾಲೂಕಿನ ಎಲ್ಲಾ ತಾಂಡಗಳಿAದಲೂ ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು ಮನವಿ ಮಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ.ಹಾಲೇಶ್ ಮಾತನಾಡಿ ಪಿ.ಟಿ.ಪರಮೇಶ್ವರನಾಯ್ಕರವರು ಸರ್ವಜನಾಂಗದವರ ನಾಯಕರಾಗಿದ್ದು, ಅವರ ಅವಧಿ ಯಲ್ಲಿ ತಾಲೂಕು ಅಭಿವೃದ್ಧಿಯಾಗಿದ್ದು ಬಿಟ್ಟರೆ ಇಲ್ಲಿಯವರೆಗಿನ ಯಾವ ಶಾಸಕರು ಯಾರು ಮಾಡಿಲ್ಲ, ದಾವಣಗೆರೆ ಸಚಿವರಾದ ಎಸ್.ಎಸ್.ಮಲ್ಲಿ ಕಾರ್ಜುನರವರು ಬಡವರ ಪರವಾಗಿ ನಿಲ್ಲುತ್ತಿದ್ದಾರೆ, ಬಂಜಾರ ಸಮುದಾಯ ಅವರ ಕೈ ಬಲಪಡಿಸಬೇಕು ಎಂದು ಹೇಳಿದರು.

*

ಕಾಂಗ್ರೆಸ್ ಮುಖಂಡ ಶಶಿದರ್ ಪೂಜಾರ ಮಾತನಾಡಿ ಬಿಜೆಪಿಯರು ಸಂವಿಧಾನ ವಿರೋಧಿಗಳು ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಹರಪನಹಳ್ಳಿ ತಾಲ್ಲೂಕಿನ ಹಿಂದುಳಿದ ಸಮುದಾಯವನ್ನು ಅಭಿವೃದ್ಧಿಪಡಿಸಿದವರು ಯಾರಾದರು ಇದ್ದರೆ ಅದು ಪರಮೇಶ್ವರನಾಯ್ಕರವರಾಗಿದ್ದು, ಬಂಜಾರ ಸಮುದಾಯದವರು ಆತ್ಮವಲೋಕನ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕುವ ಮೂಲಕ ಪರಮೇಶ್ವರನಾಯ್ಕರವರ ಕೈ ಬಲಪಡಿಸಬೇಕು ಎಂದರು.

ದಾವಣಗೆರೆ ಲೋಕಸಭಾ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನರವರ ಪುತ್ರ ಸಮರ್ಥ, ಹಿರಿಯ ಕಾಂಗ್ರೆಸ್ ಮುಖಂಡರಾದ ಅಭ್ಯರ್ಥಿ ಎನ್.ಕೊಟ್ರೇಶ್ ಚಂದ್ರಶೇಖರ ಭಟ್, ಹೆಚ್.ಬಿ.ಪರಶುರಾಮಪ್ಪ, ಪ್ರಕಾಶ್ ಪಾಟೀಲ್, ಪಿ.ಎಲ್.ಪೋಮ್ಯನಾಯ್ಕ, ಪಿಟಿ ಭರತ್ ಮಾತನಾಡಿದರು.

ಪುರಸಭೆ ಸದಸ್ಯ ಜಾಕೀರ್ ಸರ್ಖಾವಸ್, ಮುಖಂಡರಾದ ಇಜಾರಿ ಮಹಾವೀರ, ಹಾಲೇಶಗೌಡ, ತಿಮ್ಮನಾಯ್ಕ, ಮಹಾಂತೇಶ್‌ನಾಯ್ಕ, ವೇದುನಾಯ್ಕ, ಎಲ್.ಬಿ.ಹಾಲೇಶನಾಯ್ಕ, ನೂರುದ್ದಿನ್, ಕಾನಹಳ್ಳಿ ರುದ್ರಪ್ಪ, ನೇಮ್ಯನಾಯ್ಕ, ತಾರ‍್ಯನಾಯ್ಕ, ರೇಣುಕಬಾಯಿ, ಶೆಟ್ಟಿನಾಯ್ಕ, ರಾಮನಾಯ್ಕ, ಪ್ರಸಾದನಾಯ್ಕ, ಉಮೇಶನಾಯ್ಕ, ರವಿನಾಯ್ಕ, ಡಾಕ್ಯನಾಯ್ಕ, ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!