Sunday, 15th December 2024

ಬ್ಯಾಂಕಿಂಗ್‌ನ ಸರಿಯಾದ ಪದ್ಧತಿಗಳ ಕುರಿತು ಉದ್ಯೋಗಿಗಳಲ್ಲಿ ಅರಿವು

ವಿಜಿಲೆನ್ಸ್ ಅವೇರ್‌ನೆಸ್ ವೀಕ್(ಜಾಗರೂಕತೆ ಜಾಗೃತಿ ವಾರ) ಆಚರಿಸಿರಲಿರುವ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (‘Ujjivan SFB’ / ‘Bank’), ಅಕ್ಟೋಬರ್ 30ರಿಂದ ನವಂಬರ್ 6, 2023ರವರೆಗೆ “ಜಾಗರೂ ಕತೆ ಜಾಗೃತಿ ವಾರ’ವನ್ನು ಆಚರಿಸಲಿದೆ. ಇದರ ಥೀಮ್”ವಂಚನೆ ತಡೆಗಟ್ಟುವಿಕೆ ಕುರಿತು ಉದ್ಯೋಗಿಗಳಿಗೆ ಶಿಕ್ಷಣ “Educating the employees on fraud prevention”) ಆಗಿದ್ದು,ತನ್ನ ಉದ್ಯೋಗಿಗಳಲ್ಲಿ ನ್ಯಾಯಯುತವಾದ ಬ್ಯಾಂಕಿಂಗ್ ಪದ್ಧತಿಗಳನ್ನು ಪ್ರೋತ್ಸಾಹಿಸುವ ಗುರಿ ಹೊಂದಿದೆ.

ಸರ್ವೋಚ್ಛ ನ್ಯಾಯಾಲಯದ ಮಾಜಿ ನ್ಯಾಯಾಧೀಶರು ಮತ್ತು ಕರ್ನಾಟಕ ಸರ್ಕಾರದ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಸಾಂಪ್ರದಾಯಿಕ ದೀಪ ಬೆಳಗಿಸಿ ಪ್ರಧಾನ ಭಾಷಣ ಮಾಡುವ ಮೂಲಕ “ಜಾಗರೂಕತೆ ಜಾಗೃತಿ ವಾರ’ವನ್ನು ಉದ್ಘಾಟಿಸಿದರು. ಇತರ ಪ್ರಮುಖರ ಪಟ್ಟಿಯಲ್ಲಿ ಉಜ್ಜೀವನ್‌ನ ಸ್ಥಾಪಕ ಶ್ರೀ ಸಮಿತ್ ಘೋಷ್, ಉಜ್ಜೀವನ್ ಎಸ್‌ಎಫ್‌ಬಿದ ಎಮ್‌ಡಿ ಮತ್ತು ಸಿಇಒ ಶ್ರೀ ಇತ್ತಿರಾ ಡೇವಿಸ್ ಹಾಗೂ ಉಜ್ಜೀವನ್ ಎಸ್‌ಎಫ್‌ಬಿದ ಸ್ವತಂತ್ರ ನಿರ್ದೇಶಕಿ ಶ್ರೀಮತಿ ರಜ್ನಿ ಮಿಶ್ರ ಇದ್ದರು.

“ಜಾಗರೂಕತೆ ಜಾಗೃತಿ ವಾರ’ದ ಅವಧಿಯಲ್ಲಿ, ಬ್ಯಾಂಕ್ ತನ್ನ ಔಟ್‌ಲೆಟ್‌ಗಳಾದ್ಯಂತ ಜಾಗೃತಿ ಕಾರ್ಯಕ್ರಮಗಳು ಹಾಗೂ ಕಾರ್ಯಾಗಾರಗಳನ್ನು ನಡೆಸಲಿದೆ. ಈ ಉಪಕ್ರಮಗಳು, ತರಬೇತಿ ಕಾರ್ಯಕ್ರಮಗಳು, ನೈತಿಕ ನಡವಳಿಕೆಯ ಪ್ರಾಮುಖ್ಯತೆ ಹಾಗೂ ತನ್ನ ಗ್ರಾಹಕರಲ್ಲಿ ವಿಶ್ವಾಸ ನಿರ್ಮಾಣದ ಕುರಿತು ಗಮನ ಕೇಂದ್ರೀಕರಣ; “ದಿ ಎಸ್ಕೇಪ್ ರೂಮ್”ನ ಸೃಷ್ಟಿಯ ಮೂಲಕ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಕುರಿತು ಉದ್ಯೋಗಿಗಳಿಗೆ ಅರಿವು ಮೂಡಿಸುವ ಒಂದು ಆಟದ ಆವೃತ್ತಿ; ನತಿಕ ನಡವಳಿಕೆ, ವಂಚನೆ ತಡೆಗಟ್ಟುವಿಕೆ ಹಾಗೂ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದರ ಪ್ರಾಮುಖ್ಯತೆಯನ್ನು ಎತ್ತಿತೋರಿ ಸುವ ಶೈಕ್ಷಣಿಕ ಸರಣಿ ಮುಂತಾದವನ್ನು ಒಳಗೊಂಡಿರುತ್ತದೆ. ತಮ್ಮ ಕೆಲಸದಲ್ಲಿ ಉದಾಹರಣೀಯ ನಡವಳಿಕೆ ಹಾಗೂ ಬದ್ಧತೆ ಪ್ರದರ್ಶಿಸಿದ ಅದ್ವಿತೀಯ ಉದ್ಯೋಗಿಗಳನ್ನು ಬ್ಯಾಂಕ್ ಗುರುತಿಸಿತು. ಈ ರೀತಿಯ ಯೋಜನೆಗಳು, ನ್ಯಾಯಯುತ ಬ್ಯಾಂಕಿಂಗ್ ಪದ್ಧತಿಗಳನ್ನು ಪ್ರೋತ್ಸಾಹಿಸುವ ಮತ್ತು ತನ್ನ ಉದ್ಯೋಗಿಗಳಲ್ಲಿ ಜಾಗರೂಕತೆಯ ಸಂಸ್ಕೃತಿಯನ್ನು ಬೆಳೆಸುವ ಬ್ಯಾಂಕ್‌ನ ಬದ್ಧತೆಯನ್ನು ಪ್ರದರ್ಶಿಸುತ್ತವೆ.