Thursday, 12th December 2024

ಬಾಬುಜೀ ಕೊಡುಗೆ ಅಪಾರ: ಮಲ್ಲಿಕಾರ್ಜುನ ಸಾವರಕರ್

ಜೇವರ್ಗಿ: ಡಾ.ಬಾಬು ಜಗಜೀವನರಾಂ ಅವರು ತಮ್ಮ ಬದುಕಿನುದ್ದಕ್ಕೂ ಎಲ್ಲಾ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕರಾಗಿದ್ದಾರೆ ಎಂದು ಆಳಂದ ತಾಲೂಕಿನ ಕರಜಿಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಸಾವರಕರ್ ಹೇಳಿದರು.

ಪಟ್ಟಣದ ತಾಲೂಕಾಡಳಿತ ವತಿಯಿಂದ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಂ ಅವರ 115ನೇ ಜಯಂತಿ ಕಾರ್ಯಕ್ರಮನ್ನುದ್ದೇಶಿಸಿ ಮಾತಾಡಿದ ಅವರು, ‘ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸು ವಲ್ಲಿ ಬಾಬೂಜಿ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು. ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಕೃಷಿಯಲ್ಲಿ ಗಣನೀಯ ಬದಲಾವಣೆ ತಂದರು. ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿ ಯಾಗಿಸಿದರು. ಆಹಾರ ಉತ್ಪಾದನೆ ಹೆಚ್ಚಿಸಿದರು’ ಎಂದು ತಿಳಿಸಿದರು.

‘ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಗೆ ಭಾರತವನ್ನು ಸೇರಿಸುವಲ್ಲಿ ಜಗಜೀವನ ರಾಮ್ ಅವರ ಪಾತ್ರ ಮಹತ್ವದ್ದಾಗಿದೆ. ಸಾಮಾಜಿಕ ಸುಧಾರಣೆ, ಹಸಿರು ಕ್ರಾಂತಿ ಅಲ್ಲದೇ ಇನ್ನೂ ಹಲವಾರು ಕ್ಷೇತ್ರಗಳ ಅಭಿವೃದ್ಧಿ ಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಡಾ. ಅಜಯಸಿಂಗ್,  ಪುರಸಭೆ ಅಧ್ಯಕ್ಷೆ ಶರಣಮ್ಮ ಸಾಯಬಣ್ಣ ತಳವಾರ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಹಳೆಪ್ಪಾಚಾರ್ಯ ಜ್ಯೋತಿ ಕಸರಭೋಸ್ಗಾ, ಕ.ರಾ.ಸ ನೌಕರರ ಸಂಘದ ಅಧ್ಯಕ್ಷ ಡಿ.ಬಿ ಪಾಟೀಲ್, ತಹಸೀಲ್ದಾರ್ ವಿನಯಕುಮಾರ ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ ನಾಯಕ, ತಾಲೂಕ ಪಂಚಾಯತ್ ಕಾ.ನಿ. ಅಧಿಕಾರಿ ಅಬ್ದುಲನಬಿ ಸೇರಿದಂತೆ ಸಮುದಾಯದ ಮುಖಂಡರಾದ ಮಲ್ಲಿಕಾರ್ಜುನ ದಿನ್ನಿ, ಸು ಸುಭಾಷ್ ಕಾಂಬ್ಳೆ, ಮರೆಪ್ಪ ಕೋಬಾಳಕರ್, ಹನಮಂತ ಶಹಾಬಾದಕರ್,  ಪರಶುರಾಮ ಅಳಲಕರ್, ಸಾಬು ಡೊಳ್ಳೇ, ಭೀಮು ಹಳ್ಳಿ, ಅಭಿಷೇಕ್ ಬಿ. ಬಿ. ಸೇರಿದಂತೆ ಸಮಾಜದ ಮುಂಖಡರೂ ಉಪಸ್ಥಿತರಿದ್ದರು.