ಹರಪನಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಕಲಿಯುವ ಬದಲು ಖಾಸಗಿ ಶಾಲೆಗಳಲ್ಲಿ ಓದಬೇಕು ಎನ್ನುವವರು ಸರ್ಕಾರಿ ಉದ್ಯೋಗ ಬೇಕು ಎನ್ನುವುದು ಯಾವ ನ್ಯಾಯ ಎಂದು ಸಂಪ್ರದಾಯ ಟ್ರಸ್ಟ್ ನ ಬಿ.ಪರಶುರಾಮ್ ಹೇಳಿದರು.
ಪಟ್ಟಣದ ಕಾಶಿ ಸಂಗಮೇಶ್ವರ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಮೈದೂರು ಶ್ರೀಮತಿ ಸಾವಿತ್ರಮ್ಮ ದತ್ತಿ. ಶ್ರೀ ಹಾಲನಾಯ್ಕ ಲಷ್ಕರಿನಾಯ್ಕ ದತ್ತಿ. ಬಾಗಳಿ ಶ್ರೀಮತಿ ಕೆಂಚಮ್ಮ ಮಾಗಳದ ಮಲ್ಲಿ ಕಾರ್ಜುನಪ್ಪ ದತ್ತಿ. ಶ್ರೀಮತಿ ಸರ್ವಮಂಗಳಮ್ಮ ಮಹಾಶರಣ ಮಾಗನೂರು ಬಸಪ್ಪ ದತ್ತಿ ಕಾರ್ಯಕ್ರಮ ಗಳನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಜಾತಿ ಅಧಾರಿತವಾಗ ಬಾರದು ಸರ್ವ ಜನಾಂಗದ ನಾಡು ನುಡಿ. ಜಲ ಭಾಷೆಗೆ ಶ್ರಮೀಸುವಂತಾಗಬೇಕು. ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಬೇಕು ಎಂಬ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ. ಗೊತ್ತಿಲ್ಲದ ಭಾಷೆಯಿಂದ ನಮ್ಮ ಭಾವನೆಗಳನ್ನು ಹಂಚಿಕೋಳ್ಳಲು ಸಾಧ್ಯವಿಲ್ಲ. ಬೇರೆ ಭಾಷೆ ಬದುಕಿಗೆ ಇರಲಿ ಕನ್ನಡ ಭಾಷೆ ಹೃದಯ ಭಾಷೆಯಾಗಿರಲಿ ಎಂದರು.
ಮರಿಮ್ಮನಹಳ್ಳಿಯ ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕ ಸೋಮಶೇಖರ ಉಪ್ಪಾರ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಡಾ. ಚಿಕ್ಕಣ್ಣ ಎನ್ನಿ ಕಟ್ಟಿ, ಶರಣರ ಜೀವನ ದರ್ಶನ. ವಚನ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯ ಕಲೆಗಳ ಬಗ್ಗೆ ಉಪನ್ಯಾಸ ನೀಡಿ ಸಾವಿರಾರು ಜನರಿಗೆ ಲಿಂಗ ಕಟ್ಟಿ ಅತ್ಮಾಭೀಮಾನ ಬೆಳಿಸಿ ಲಿಂಗತಾರತಮ್ಮ ಜಾತಿ ತಾರತಮ್ಮ ಹೋಗಲಾಡಿಸಲು ಬಸವಣ್ಣನವರು ಶ್ರಮಿಸಿ ಸಫಲರಾದರು.
ಶಿವಶರಣರ ನುಡಿ ಸರ್ವಕಾಲಿಕವಾಗಿದ್ದು ಮನೆ ಅಂಗಳ. ಮನೆ ಮೇಲೆ ಜನರಿದ್ದ ಕಡೆ ಸಾಹಿತ್ಯ ಕೃಷಿ ಬೆಳೆಸುವ ಕೆಲಸ ಸಾಹಿತ್ಯ ಪರಿಷತ್ ಮಾಡುತ್ತಿದ್ದು ಹಾಲು. ಬೆಣ್ಣೆ, ತುಪ್ಪ ತಿನ್ನವವರು ಶ್ರೇಷ್ಠ ಎನ್ನುವ ಕಾಲಘಟ್ಟದಲ್ಲಿ ಆಕಳನ್ನೇ ತಿನ್ನುವವರು ಶ್ರೇಷ್ಟ ಎಂದು ಜನಪದದಲ್ಲಿ ಉಲ್ಲೇಖವಿದೆ. ಜನಪದ ಕುಟ್ಟುವ. ಬೀಸುವ. ದೇವರಮನೆಯಲ್ಲಿ ಹಾಡುವಾಗ ಬರುವಂತಹ ಬಾಯಿಂದ ಬಾಯಿಗೆ ಬರುವ ಜನಪದ ಶ್ರೇಷ್ಠವಾಗಿದ್ದು ಮಹಿಳೆಯರು ಜನಪದ ಕಲಿತರೆ ವಿಶ್ವವಿದ್ಯಾಲಯವಿದ್ದಂತೆ ನೂರಾರು ವರ್ಷಗಳ ಕಾಲ ಅಚ್ಚಳಿಯದೆ ಜನಪದ ಉಳಿಯುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾವಿರಾರು ವರ್ಷ ಗಳ ಭವ್ಯ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ಎಲ್ಲರಲ್ಲೂ ಹೃದಯಬಾಷೆ ಯಾಗಬೇಕು ತಾಲ್ಲೂಕಿನಲ್ಲಿ ಬೀಚಿ, ಭೀಮವ್ವ, ಮುದೇನೂರು ಸಂಗಣ್ಣ, ಹಲವಾಗಲು ದೇವೆಂದ್ರಪ್ಪ ಸೇರಿದಂತೆ ಅನೇಕ ಯುವ ಕವಿಗಳು ಇದ್ದಾರೆ ಐತಿಹಾಸಿಕ ದೇವಸ್ಥಾನಗಳು ಅತ್ಯಂತ ಪ್ರಸಿದ್ದವಾಗಿದ್ದು, ತಾಲ್ಲೂಕಿನಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೆಳನ, ಜಿಲ್ಲಾ ಸಾಹಿತ್ಯ ಸಮ್ಮೇಳನ ಅನೇಕ ತಾಲ್ಲೂಕು ಸಮ್ಮೇಳನಗಳನ್ನು ನೆಡೆಸಿ ಜನರಿಗೆ ಕನ್ನಡ ಸಾಹಿತ್ಯದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹೇಳಲಾಗಿದ್ದು, ಎಲ್ಲ ವರ್ಗದ ಜನರಿಗೆ ಕನ್ನಡ ಸಾಹಿತ್ಯ ಪರಿಷತ್ ಹಾಗೂ ನಾಡು ನುಡಿಯ ಬಗ್ಗೆ ಕಾರ್ಯಕ್ರಮಗಳನ್ನು ಮಾಡಲಾಗವುದು ಎಂದರು.
ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘದ ಅದ್ಯಕ್ಷೆ ಟಿ.ವಿ.ರೇಣುಕಮ್ಮ ಮಾತನಾಡಿದರು.
ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಜಿ.ಮಹಾದೇವಪ್ಪ, ಗೌರವ ಕೋಶಾಧಿಕಾರಿ ಕೆ.ರಾಘವೇಂದ್ರ ಶೆಟ್ಟಿ ಕಾರ್ಯ ಕಾರಿ ಮಂಡಳಿಯ ನಿರ್ದೆಶಕರುಗಳಾದ ಎಸ್.ಮಕಬುಲ್ ಭಾಷ, ಬಿ.ಎಂ.ನಾಗರಾಜ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘದ ಕಾರ್ಯದರ್ಶಿ ಮಾಳಮ್ಮ ಸೇರಿದಂತೆ ಇತರರು ಇದ್ದರು.