ಬಸವನಬಾಗೇವಾಡಿ : ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿಗಳ ದ್ವಾದಶಿ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವದ ಅಂಗವಾಗಿ ಲೋಕಕಲ್ಯಾಣಕ್ಕಾಗಿ ಧರ್ಮ ಹಾಗೂ ಪರಿಸರ ರಕ್ಷಣೆಗಾಗಿ ಹಮ್ಮಿಕೊಂಡಿರುವ ಪಾದಯಾತ್ರೆಯು ಬಸವಜನ್ಮ ಸ್ಥಳಕ್ಕೆ ಮಂಗಳವಾರ ಸಂಜೆ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು.
ಸಂಜೆ 7 ಕ್ಕೆ ಪಟ್ಟಣದ ಬಿ.ಎಲ್.ಡಿ.ಇ. ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಿಂದ ಸಕಲ ವಾಧ್ಯ ವೈಭವದೊಂದಿಗೆ ಮಹಿಳೆಯರು ಶ್ರೀಗಳಿಗೆ ಆರತಿ ಬೆಳಗಿದರು. ಮಹಿಳೆಯರು ತೆಲೆಯ ಮೇಲೆ ರೋಟ್ಟಿ ಬುತ್ತಿ ಹೊತ್ತುಕೊಂಡು ಅಪಾರ ಸಂಖ್ಯೆಯ ಭಕ್ತರೊಂದಿಗೆ ಪಟ್ಟಣದ ಬಸವ ಭವನದವರೆಗೆ ಅದ್ದೂರಿ ಸ್ವಾಗತ ಮೂಲಕ ಬರಮಾಡಿಕೊಳ್ಳಲಾಯಿತು.
ಪಟ್ಟಣದಲ್ಲಿ ಸುಮಾರು 1 ಕೀ.ಮಿ ವರೆಗೆ ಪಾದಯಾತ್ರೆ ತೆರಳುವ ಮಾರ್ಗದಲ್ಲಿ ಮಹಿಳೆ ಯರು ಚಿತ್ರ ಚಿತ್ತಾರಗಳಿಂದ ರಂಗವಳಿ ಚಿತ್ತಾರವನ್ನು ಬಿಡಸಲಾಗಿತ್ತು.
ಪಾದಯತ್ರೆಯಲ್ಲಿ ಪಟ್ಟಣದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು, ವಿರಕ್ತಮಠದ ಸಿದ್ದಲಿಂಗ ಶ್ರೀಗಳು, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶ್ರೀಗಳು, ಕರಭಂಟನಾಳ ಶಿವಕುಮಾರ ಶ್ರೀಗಳು, ಅಮೃತೇಶ್ವರ ಶ್ರೀಗಳು, ಸಂಗಮೇಶ್ವರ ಶ್ರೀಗಳು, ಯಾಳವಾರದ ಕೇದಾರಲಿಂಗ ದೇವರು, ಹುಣಶ್ಯಾಳ ಆನಂದ ದೇವರು, ಮಹೇಶ್ವರ ಶ್ರೀಗಳು, ಪಂಚಾಕ್ಷರಿ ಶಿವಾಚಾರ್ಯ, ಶಾಸಕ ಶಿವಾನಂದ ಪಾಟೀಲ, ಪಾದಯಾತ್ರೆ ಸ್ವಾಗತ ಸಮೀತಿ ಕಾಯರ್ಾಧ್ಯಕ್ಷ ಮುದ್ದೇಬಿಹಾಳದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಈರಣ್ಣ ಪಟ್ಟಣಶೆಟ್ಟಿ ಭರತಕುಮಾರ ಅಗರವಾಲ, ರಾಜೇಂದ್ರ ಪತ್ತಾರ, ಸಂಗಮೇಶ ಓಕೇಕಾರ ಶೇಖರ ಗೊಂಸಳಗಿ, ಪಂಚಾಕ್ಷರಿ ಕಾಳಹಸ್ತೇಶ್ವರ, ಶಿವಲಿಂಗಯ್ಯ ತೆಂಗಿನಮಠ, ಸುರೇಶ ಹಾರಿವಾಳ, ಬಸವರಾಜ ಗೊಳಸಂಗಿ ಬಸವರಾಜ ಹಾರಿವಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.