Sunday, 8th September 2024

ಮೀಸಲಾತಿ ಕೊಟ್ಟರೆ ವಿಜಯೋತ್ಸವ ಇಲ್ಲವೆ ಹೋರಾಟ ತೀವ್ರ: ಶಂಕರಗೌಡ ಬಿರಾದಾರ್ ಎಚ್ಚರಿಕೆ

ಬಸವನಬಾಗೇವಾಡಿ: ಡಿಸೆಂಬರ್ 22ರಂದು ಬೆಳಗಾವಿಯ ಸುವರ್ಣಸೌಧದ ಎದುರಿಗೆ ನಡೆಯಲಿರುವ ಪಂಚಮಸಾಲಿ ಮೀಸ ಲಾತಿ ಹೋರಾಟಕ್ಕೆ ಬಸವನ ಬಾಗೇವಾಡಿ ತಾಲೂಕಿನಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಸಮುದಾಯದ ಜನರು ಪಾಲ್ಗೊಳ್ಳ ಲಿದ್ದಾರೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಯಾದ ಶಂಕರಗೌಡ ಬಿರಾದಾರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು.  ಎರಡು ದಶಕಗಳಿಂದ ನಡೆದಿರುವ ಲಿಂಗಾ ಯತ ಪಂಚಮಸಾಲಿ ಸಮುದಾಯದ ಬಡ ವಿದ್ಯಾರ್ಥಿ ಗಳ ಶಿಕ್ಷಣ ಮತ್ತು ಉದ್ಯೋಗಕ್ಕೋಸ್ಕರ 2ಎ ಮೀಸಲಾತಿ ಹೋರಾಟ ನಡೆಯುತ್ತಿದ್ದು ಸರ್ಕಾರ ಮೇಲಿಂದ ಮೇಲೆ ಸಮಯವನ್ನು ತೆಗೆದುಕೊಂಡು ವಿನಾಕಾರಣ ಕಾಲಹರಣ ಮಾಡುತ್ತಿದೆ ಡಿಸೆಂಬರ್ 22ರಂದು ನಡೆಯಲಿರುವ ಈ ಅಂತಿಮ ಹೋರಾಟದಲ್ಲಿ ರಾಜ್ಯಾ ದ್ಯಂತ ಸುಮಾರು 25 ಲಕ್ಷಕ್ಕೂ ಹೆಚ್ಚು ಪಂಚಮಸಾಲಿ ಸಮಾಜ ಬಾಂಧವರು ಸೇರಿ ಸಮಾವೇಶಗೊಳ್ಳುವರು ಅಂದು ಸರ್ಕಾರ ನಮಗೆ ಮೀಸಲಾತಿ ಕೊಟ್ಟರೆ ವಿಜಯೋತ್ಸವ ಇಲ್ಲದೆ ಹೋದರೆ ಹೋರಾಟವನ್ನು ತೀವ್ರ ಗೊಳಿಸಲಾಗುವುದು.
ಈ ಹೋರಾಟದಲ್ಲಿ ಪ್ರತಿ ಗ್ರಾಮದಿಂದ ಪ್ರತಿ ಮನೆಯಿಂದ ಒಬ್ಬರಂತೆ ಲಕ್ಷಾಂತರ ಜನರು ಸ್ವಯಂ ಪ್ರೇರಣೆಯಿಂದ ಸಿದ್ಧವಾಗಿ ದ್ದಾರೆ. ಬಸವನಬಾಗೇವಾಡಿ ತಾಲೂಕಿನಿಂದ ಸುಮಾರು 25 ಸಾರಿಗೆ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದೆ ಅಲ್ಲದೆ ಅನೇಕ ಹಳ್ಳಿಗಳಿಂದ ಸ್ವಂತ ವಾಹನದ ಮೂಲಕ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಮಹಾಮಂಡಳದ ನಿರ್ದೇಶಕರಾದ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ ಪ್ರತಿಯೊಂದು ಹಳ್ಳಿಯಿಂದ ಸುಮಾರು 200 ರಿಂದ 300 ಜನ ನಮ್ಮ ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಕೃಷಿಯನ್ನೇ ಅವಲಂಬಿತ ನಮ್ಮ ಸಮಾಜಕ್ಕೆ ಅನೇಕ ದಶಕಗಳಿಂದ ಅನ್ಯಾಯವಾಗುತ್ತಾ ಬಂದಿದೆ.
ಕೂಡಲಸಂಗಮದ ಪಂಚಮಸಾಲಿ ಪ್ರಥಮ ಜಗದ್ಗುರುಗಳಾದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ಹೋರಾಟದ ಫಲವಾಗಿ ಇಂದು ರಾಜ್ಯದ ಮೂಲೆ ಮೂಲೆಗಳಲ್ಲಿ ನಮ್ಮ ಸಮುದಾಯ ಜಾಗೃತವಾಗುವುದರ ಜೊತೆಗೆ ಒಕ್ಕಟ್ಟಾಗಿದೆ ಸ್ವಾಮೀಜಿ ಯವರು ಹಾಗೂ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿರುವ ನಾಯಕರ ಜೊತೆಗೆ ನಮ್ಮ ಸಮಾಜ ಇಂದು ಮತ್ತು ಎಂದಿಗೂ ಅವರ ಬೆಂಬಲವಾಗಿ ರುತ್ತದೆ ಎಂದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ತಾಲೂಕ ಗೌರವಾಧ್ಯಕ್ಷರಾದ ಶ್ರೀಕಾಂತ ಕೊಟ್ರಶೆಟ್ಟಿ ತಾಲೂಕ ನೌಕರ ಘಟಕದ ಅಧ್ಯಕ್ಷರಾದ ಸಿದ್ದು ಉಕ್ಕಲಿ ತಾಲೂಕ ಯುವ ಘಟಕದ ಅಧ್ಯಕ್ಷರಾದ ಸಂಜು ಬಿರಾದಾರ್.   ಮುಖಂಡರಾದ ಸುರೇಶಗೌಡ ಪಾಟೀಲ್  ಸುನಿಲಗೌಡ ಚಿಕ್ಕೋಂಡ ಬಸಣ್ಣ ಕಲ್ಲೂರ್ ಚಂದ್ರಶೇಖರಗೌಡ ಪಾಟೀಲ್ ಸುಭಾಷ್ ಚಿಕ್ಕೋಂಡ ಮುದುಕಪ್ಪ ಪಟ್ಟಣಶೆಟ್ಟಿ ದಯಾನಂದ್ ಜಾಲಗೇರಿ ಮಲ್ಲಿಕಾರ್ಜುನ್ ಅವಟಿ ಅಶೋಕ್ ಹಾರಿವಾಳ ಸಂಕನಗೌಡ ಪಾಟೀಲ್ ಸುರೇಶ್ ಚಮ್ಮಲಗಿ ಅಶೋಕ್ ಶಿವಯೋಗಿ ಈರಣ್ಣ ವಂದಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!