Saturday, 14th December 2024

Bigg Boss Jagadeesh : ಮಧ್ಯರಾತ್ರಿಲಿ, ಹೈವೇ ರಸ್ತೇಲಿ ಲಾಯರ್ ಜಗದೀಶ್ ಮಾತು ಕೇಳಿ! ವಿಡಿಯೊ ಇದೆ

ಬೆಂಗಳೂರು: ಜಗ್ಗುದಾದಾ, ವಕೀಲ್‌ ಸಾಬ್‌ ಎಂದೆಲ್ಲ ಕರೆಸಿಕೊಂಡು ಬಿಗ್‌ ಬಾಸ್ ಕನ್ನಡದ 11ನೇ ಆವೃತ್ತಿಯಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿದ್ದ ಲಾಯರ್ ಜಗದೀಶ್ (Bigg Boss Jagadeesh ) ಅವರನ್ನು ಬಿಗ್‌ಬಾಸ್ ಮನೆಯಿಂದ ಅಚಾನಕ್ ಆಗಿ ಹೊರಕ್ಕೆ ಕಳುಹಿಸಲಾಗಿತ್ತು. ಸಿಕ್ಕಾಪಟ್ಟೆ ಟಿಆರ್‌ಪಿ ತರುತ್ತಿದ್ದ ಅವರನ್ನು ಹೊರಕ್ಕೆ ಕಳುಹಿಸಿದ್ದೇ ಅಚ್ಚರಿಯ ಸಂಗತಿಯಾಗಿತ್ತು. ಇದೀಗ ಲಾಯರ್ ಜಗದೀಶ್‌ ಅವರು ಈ ಬಗ್ಗೆ ಪ್ರೆಸ್‌ಮೀಟ್ ಅಕ್ಟೋಬರ್ 20ರಂದು ಸಂಜೆ ಪ್ರೆಸ್‌ಮೀಟ್ ಕರೆಯುವುದಾಗಿ ಹೇಳಿದ್ದಾರೆ. ಈ ಆಹ್ವಾನವನ್ನೂ ಅವರು ವರ್ಣರಂಜಿತವಾಗಿ ಅವರು ಮಧ್ಯರಾತ್ರಿಯಲ್ಲಿ ಹೈವೆ ರಸ್ತೆಯಲ್ಲಿ ನಿಂತು ನೀಡಿದ್ದಾರೆ. ಈ ಮೂಲಕವೂ ಅವರು ಸ್ಪೆಷಲ್‌ ಎನಿಸಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್ ಹೊರಗೆ ಬಂದಿರುವ ಜಗದೀಶ್ ಆ ಬಗ್ಗೆ ಇನ್ನಷ್ಟು ಮಾತನಾಡಲು ಮುಂದಾಗಿದ್ದಾರೆ. ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಹಾಗೂ ಮಹಿಳಾ ಸ್ಪರ್ಧಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆ ಬಿಗ್ ಬಾಸ್ ಮನೆಯಿಂದ ಜಗದೀಶ್ ಅವರನ್ನು ಹೊರಗೆ ಕಳಿಸಲಾತ್ತು. ಹೀಗಾಗಿ 20ರಂದು ಸಂಜೆ ಅವರು ನಡೆಸುವ ಪ್ರೆಸ್‌ಮೀಟ್‌ ವಿಶೇಷ ಎನಿಸಿಕೊಳ್ಳಲಿದೆ.

ಲಾಯರ್‌ ಕೆ.ಎನ್.ಜಗದೀಶ್‌ ಅವರು ಬೆಂಗಳೂರಿನ ಸಹಕಾರ ನಗರದಲ್ಲಿರುವ ಗುಂಡ ಆಂಜನೇಯ ದೇವಸ್ಥಾನದ ಬಳಿ ಸಂಜೆ 4.30 ರ ವೇಳೆಗೆ ಸುದ್ದಿಗೋಷ್ಠಿ ಮಾಡುವುದಾಗಿ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಈ ಕುರಿತಂತೆ ಕೆ.ಎನ್.ಜಗದೀಶ್‌ ಅವರು ಮಧ್ಯಾರಾತ್ರಿಯಲ್ಲಿ ನಿಂತು ಹೇಳಿದ ವಿಡಿಯೊ ವೈರಲ್ ಆಗಿದೆ.

ಮಹಿಳಾ ಸ್ಪರ್ಧಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆ ಬಿಗ್ ಬಾಸ್ ಮನೆಯಿಂದ ಜಗದೀಶ್ ಅವರನ್ನು ಹೊರಗೆ ಕಳಿಸಲಾಗಿದೆ. ಆದರೆ, ಅವರನ್ನು ಹೊರಗೆ ಕಳುಹಿಸಿದ್ದುಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇದೀಗ ಮಾಧ್ಯಮಗಳ ಮುಂದೆ ಬರಲು ಜಗದೀಶ್ ರೆಡಿಯಾಗಿದ್ದು, ಪ್ರೆಸ್ ಮೀಟ್ ಕರೆದಿದ್ದಾರೆ. ಎಲ್ಲವನ್ನೂ ಹೇಳಿಕೊಳ್ಳಲಿದ್ದಾರೆ.

ಅಕ್ಟೋಬರ್ 20ರಂದು ಬೆಳಿಗ್ಗೆ 9.00 ಘಂಟೆಗೆ ಬೆಂಗಳೂರಿನ ಸಹಕಾರ ನಗರದಲ್ಲಿರುವ ಗುಂಡ ಆಂಜನೇಯ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸೋದಾಗಿ ಲಾಯರ್ ಜಗದೀಶ್​ ಫೇಸ್​ಬುಕ್​ನ ಪೇಜ್​ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: BBK 11: ಆ ಮನುಷ್ಯ ಬಿಗ್ ಬಾಸ್​ನಲ್ಲಿರಬೇಕು: ಜಗದೀಶ್​ನ ಮನೆಯಿಂದ ಕಳುಹಿಸಬೇಡಿ ಎಂದ ಚೈತ್ರಾ-ಭವ್ಯಾ

ಪ್ರೆಸ್​ಮೀಟ್‌ನಲ್ಲಿ ಅವರು ಅಭಿಮಾನಿಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಇದಕ್ಕೂ ಮುನ್ನ ಫೇಸ್​ಬುಕ್​ ಖಾತೆಯಲ್ಲಿ ಜಗದೀಶ್​ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಬಿಗ್ ಬಾಸ್ ಮನೆಯ ಫೋಟೋ ಹಾಗೂ ಲವ್ ಯೂ ಬಿಗ್ಬಾಸ್ ಎಂದು ಹೇಳಿಕೆ ನೀಡಿದ್ದರು.

ಎಷ್ಟೋ ಕೋಟಿ ಜನಗಳ ಮಧ್ಯೆ ಬಿಗ್ ಬಾಸ್ ನಲ್ಲಿ ಭಾಗಿಯಾಗುವ ಅವಕಾಶ ನನಗೆ ಸಿಕ್ಕಿದ್ದು ಅದೃಷ್ಟ. ಅದನ್ನು ವಿಭಿನ್ನವಾಗಿ ತೋರಿಸುವ ಮೀಡಿಯಾ, ಎಂಜಾಯ್ ಮಾಡಿದ ವೀಕ್ಷಕರು, ನನ್ನ ಅಭಿಮಾನಿ ದೇವರಿಗೆ ವಂದನೆಗಳು. ಎಂದು ಜಗದೀಶ್ ಹೇಳಿದ್ದರು. ಅಂದ ಹಾಗೆ ಅವರು ‘ಐ ಮಿಸ್ ಬಿಗ್ಬಾಸ್’ ಎನ್ನುತ್ತಿದ್ದಾರೆ. ಬಿಗ್ ಬಾಸ್ ಎಂದೂ ಹೇಳಿಕೊಂಡಿದ್ದಾರೆ.

ಬಿಗ್‌ಬಾಸ್‌ ವ್ಯಕ್ತಿಯ ಜೀವನದ ಕನ್ನಡಿ ಆಗಿದೆ. ಅಲ್ಲಿ ನನ್ನ ನಿಜ ಮುಖ ನೋಡಿದಾಗ ನನಗೇ ಅಚ್ಚರಿ ಆಯಿತು. ನನ್ನ ಕೋಪ, ಪ್ರತಿಭೆ ಎಲ್ಲವೂ ಗೊತ್ತಾಯಿತು ಎಂದು ಜಗದೀಶ್ ಅವರದ್ದು ಎನ್ನಲಾದ ವಾಯ್ಸ್ ನೋಟ್​ನಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss: ಬಿಗ್‍ಬಾಸ್ ನಿರೂಪಣೆಗೆ ಸಲ್ಮಾನ್ ಖಾನ್ ಸಂಭಾವನೆ ಬಾಹುಬಲಿ, ಜೈಲರ್‌ ಬಜೆಟ್‌ಗಿಂತ ಹೆಚ್ಚು!

ಸುದೀಪ್ ಸಾರ್‌ ನನ್ನ ಹೀರೋ, ನನ್ನನ್ನು ದಯವಿಟ್ಟು ಕ್ಷಮಿಸಬೇಕು. ರಂಜಿತ್, ಮಾನಸ ಮತ್ತು ಎಲ್ಲರೂ ನನ್ನನ್ನು ಕ್ಷಮಿಸಿ, ನೀವೆಲ್ಲಾ ತುಂಬಾ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಕಲಾವಿದರಾಗಿದ್ದೀರಿ. ಬಿಗ್ ಬಾಸ್ ಮನೆಯಲ್ಲಿ ನಾನು ನಿಮ್ಮ ಜೊತೆ ಹೋರಾಡಿದೆ. ತಪ್ಪುಗಳು ನನ್ನಿಂದ ಆಗಿವೆ. ಅದು ಮನರಂಜನೆಯ ಒಂದು ಭಾಗವಷ್ಟೆ, ವೈಯುಕ್ತಿಕ ಯಾವುದೂ ಇಲ್ಲ ಎಂದು ಜಗದೀಶ್ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ರಂಜಿತ್ ಹಾಗೂ ಜಗದೀಶ್​ ಹೊರಗೆ ಹೋಗಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್​ ಮಾತಾಡಲಿದ್ದಾರೆ. ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಈ ಬಗ್ಗೆ ಸುದೀಪ್ ಮಾತಾಡಲಿದ್ದಾರೆ ಎನ್ನಲಾಗ್ತಿದೆ.