Thursday, 12th December 2024

BBMP property Tax: ಬೆಂಗಳೂರಿಗರಿಗೆ ಗುಡ್ ನ್ಯೂಸ್, ಆಸ್ತಿ ತೆರಿಗೆ ಪಾವತಿ ಸಮಯ ವಿಸ್ತರಣೆ

HK Patil

ಬೆಂಗಳೂರು: ರಾಜಧಾನಿ ನಗರದಲ್ಲಿ ಇನ್ನೂ ಆಸ್ತಿ ತೆರಿಗೆ ಪಾವತಿ ಬಾಕಿ (BBMP property Tax) ಇಟ್ಟುಕೊಂಡವರಿಗೆ ಗುಡ್ ನ್ಯೂಸ್ ದೊರೆತಿದೆ. ಆಸ್ತಿ ತೆರಿಗೆ ಪಾವತಿಗೆ ಗಡುವನ್ನು ಸೆಪ್ಟೆಂಬರ್‌ 15ರಿಂದ ಸೆಪ್ಟೆಂಬರ್‌ 30ಕ್ಕೆ ವಿಸ್ತರಿಸಲಾಗಿದೆ.

ಈ ಕುರಿತಂತೆ ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆ (cabinet meeting) ನಿರ್ಧಾರ ತೆಗೆದುಕೊಂಡಿದೆ. ಸಭೆಯ ನಂತರ ಸಂಪುಟದ ನಿರ್ಧಾರಗಳನ್ನು ಕಾನೂನು ಸಚಿವ ಹೆಚ್.ಕೆ ಪಾಟೀಲ್ (HK Patil) ಅವರು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡರು. ದಿನಾಂಕ 30-11-2024ರವರೆಗೆ ಆಸ್ತಿ ತೆರಿಗೆ ಸಮಯ ವಿಸ್ತರಣೆಯ ನಿರ್ಧಾರವನ್ನು ಇಂದಿನ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದರು.

ಪೆರಿಫೆರಲ್ ರಸ್ತೆಗೆ ಬಂಡವಾಳ ಸಂಗ್ರಹ ಮಾಡಲು ಸಮಯ ವಿಸ್ತರಣೆ ಮಾಡಲಾಗಿದೆ. ವಿವಿಧ ಮೂಲಗಳಿಂದ ಸಂಪನ್ಮೂಲ ಸಂಗ್ರಹಕ್ಕೆ ಸಮ್ಮತಿ ನೀಡಲಾಗಿದೆ ಎಂದು ವಿವರ ನೀಡಿದರು.

ರಾಜ್ಯಪಾಲರು 11 ಬಿಲ್ ವಾಪಸ್ ಕಳಿಸಿದ್ದಾರೆ. 5 ಬಿಲ್‌ಗಳಿಗೆ ನಾವು ಉತ್ತರ ಕೊಟ್ಟಿದ್ದೇವೆ. ಸಂಪೂರ್ಣ ಮಾಹಿತಿಯನ್ನ ಒದಗಿಸಿದ್ದೇವೆ. 6 ಬಿಲ್ ಗಳಿಗೆ ಮಾಹಿತಿ ಸಂಗ್ರಹಿಸಿ‌ ಕಳಿಸಬೇಕಿದೆ ಎಂದು ತಿಳಿಸಿದರು.

ಮಹದಾಯಿ ಯೋಜನೆಗೆ ಅನುಮತಿ ತಡೆ ವಿಚಾರವಾಗಿ ವನ್ಯಜೀವಿ ‌ಮಂಡಳಿ ಅನುಮೋದನೆ ನೀಡಿಲ್ಲ. ಕೆಲವು ಕಾರಣ ಕೊಟ್ಟು ಮುಂದೂಡಿದೆ. ಇದು ಕನ್ನಡಿಗರಿಗೆ ನಿರಾಸೆ ತಂದಿದೆ. ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ ಆಗ್ತಿದೆ. ಗೋವಾದ 400 ವಿದ್ಯುತ್ ಮಾರ್ಗಕ್ಕೆ ಒಪ್ಪಿಗೆ ನೀಡುತ್ತೆ. ಆದರೆ ನಮ್ಮ ಪ್ರಪೋಸಲ್ ಮುಂದೂಡಿದೆ. 435 ಎಕರೆ ವಿದ್ಯುತ್ ಮಾರ್ಗಕ್ಕೆ ಅರಣ್ಯ ಭೂಮಿ ಬಳಕೆಯಾಗಿದೆ. ಗೋವಾ ತಮ್ನೂರು ವಿದ್ಯತ್ ಮಾರ್ಗಕ್ಕೆ ಅನುಮತಿ ನೀಡಲಾಗಿದೆ. ಇದಕ್ಕೆ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡುತ್ತೆ. ಅದಕ್ಕೆ ಕ್ಯಾಬಿನೆಟ್ ಕಳವಳ ವ್ಯಕ್ತಪಡಿಸಿದೆ. ಸರ್ವಪಕ್ಷ ಸಭೆ ಕರೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಸರ್ವಪಕ್ಷ ನಿಯೋಗ ಪ್ರಧಾನಿ‌ ಬಳಿ ಒಯ್ಯುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಅಲ್ಲದೇ ಸುಪ್ರೀಂ ಮೆಟ್ಟಿಲೇರೋಕೆ ಕ್ಯಾಬಿನೆಟ್ ತೀರ್ಮಾನಿಸಿದೆ ಎಂದರು.

ಮಹದಾಯಿ ಕುಡಿಯುವ ನೀರು ಯೋಜನೆವಿಚಾರವಾಗಿ ವನ್ಯಜೀವಿ ಮಂಡಳಿ ನಡೆಯ ವಿರುದ್ಧ ದೂರು ನೀಡಲಾಗುತ್ತದೆ. ಸುಪ್ರೀಂ ಮೆಟ್ಟಿಲೇರಲು ರಾಜ್ಯ ನಿರ್ಧಾರಿಸಿದೆ. ಸರ್ವಪಕ್ಷ ನಿಯೋಗ ಒಯ್ಯುವ ಬಗ್ಗೆ ನಿರ್ಧಾರವನ್ನು ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದರು.

ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಸಭೆ ವಿಚಾರವಾಗಿ ಚರ್ಚೆ ನಡೆಸಲಾಗಿದೆ. ರಾಜಮಾತೆ ಪ್ರಮೋದಾದೇವಿ ಹೇಳಿಕೆ ನೀಡಿದ್ದರು. ಕಂಟೆಂಪ್ಟ್‌ ಆಫ್ ಕೋರ್ಟ್ ಎಂದಿದ್ದರು. ಆದರೆ ಅದು ಅವರ ತಪ್ಪು ಗ್ರಹಿಕೆ. ಇಲ್ಲಿ ಕೋರ್ಟ್ ಕಂಟೆಂಪ್ಟ್ ಆಗಿಲ್ಲ ಎಂದು ಸಮರ್ಥಿಸಿಕೊಂಡರು.

ಕೋವಿಡ್ ಹಗರಣದ ವರದಿ ಬಗ್ಗೆ ಚರ್ಚೆ ನಡೆಸಲಾಯಿತು. ನೂರಾರು ಕೋಟಿ ಅವ್ಯವಹಾರದ ಬಗ್ಗೆ ಪ್ರಸ್ತಾಪವಾಗಿದೆ. ಜಸ್ಟೀಸ್ ತಮ್ಮ‌ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಹಲವು ಮಿಸ್ಸಿಂಗ್ ಫೈಲ್ಸ್ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಪಬ್ಲಿಕ್ ಅಕೌಂಟ್ ಕೊಟ್ಟ ವರದಿಯನ್ನ ಉಲ್ಲೇಖಿಸಿದೆ. ವಿವರವಾದ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ. ವರದಿ ಪರಿಶೀಲನೆಗೆ ಹಿರಿಯ ಅಧಿಕಾರಿಗಳಿ ಹೊಣೆ ನೀಡಲಾಗಿದೆ. ತಿಂಗಳೊಳಗೆ ಪರಿಶೀಲಿಸಿ ವರದಿ ಕೊಡುವಂತೆ ಸೂಚನೆ ನೀಡಲಾಗಿದೆ. ಅತೀಕ್ ಸೇರಿ ಇಬ್ಬರು ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತಿದೆ. ಮಧ್ಯಂತರ ವರದಿ ಪರಿಶೀಲಿಸುವ ಜವಾಬ್ದಾರಿ ನೀಡಲಾಗುವುದು. ಪರಿಶೀಲಿಸಿ ಕ್ರಮದ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ನಿರ್ದಿಷ್ಟ ವ್ಯಕ್ತಿಯ ಬಗ್ಗೆ ನಮಗೆ ಗೊತ್ತಿಲ್ಲ. ವರದಿಯನ್ನ ನಾನು ಪರಿಶೀಲಿಸಿಲ್ಲ ಎಂದು ಹೇಳಿದರು.

ಈ ಸುದ್ದಿ ಓದಿ: Bengaluru Roads: ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಕಮಿಷನರ್‌ಗೆ 15 ದಿನ ಗಡುವು ಕೊಟ್ಟ ಡಿಕೆಶಿ