Sunday, 15th December 2024

ಹೋರಾಟದ ಪ್ರತಿಫಲ: ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ

ಇಂಡಿ: ಬಹುದಿನಗಳ ಬೇಡಿಕೆಯಾದ ಹಿರೇ ಇಂಡಿ ನಗರದ ಕೆರೆಗೆ ತಿಂಡಗುಂದಿ ಬ್ರ‍್ಯಾಂಚ್ ಕ್ಯಾನಲ್ ದಿಂದ ನೀರು ತುಂಬಿದ ಕಾರಣ ಇಂದು ಜೆ.ಡಿ.ಎಸ್ ಮುಖಂಡ ಬಿ.ಡಿ ಪಾಟೀಲ ಹಾಗೂ ನೂರಾರು ಕಾರ್ಯಕರ್ತರು ಬಾಗೀನ ಅರ್ಪಿಸಿದರು.

ಇಂಡಿ ತಾಲೂಕಾ ನೀರಾವರಿಗಾಗಿ ಸಾಕಷ್ಟು ಹೋರಾಟ ಮಾಡಿರುವೆ. ರಾಷ್ಟ್ರೀಯ ಹೆದ್ದಾರಿ ಮೇಲೆ ,ರೈಲು ತಡೆ ರಕ್ತದಿಂದ ಸರಕಾರಕ್ಕೆ ಪತ್ರ ಬರೇದು ಮನವಿ ಸಲ್ಲಿಸಿದ್ದೇನೆ. ಒಮ್ಮೆ ಪೊಲೀಸರು ನನ್ನ ಮೇಕೆ ಕೇಸು ಹಾಕಲು ಬಂದಾಗ ರೈತರಿಗಾಗಿ ಗುಂಟು ಹಾಕಿದರೂ ಪರವಾಗಿಲ್ಲ ಸ್ಥಳದಲ್ಲಿಯೇ ಹೋರಾಟ ಮಾಡುವುದಾಗಿ ತಿಳಿಸಿದೆ.

ರೈತರಪರ ಹೋರಾಟವಾಗಿರುವದರಿಂದ ಯಾರೂ ಏನೂ ಮಾಡಲಾಗಲಿಲ್ಲ. ಸುಮಾರು ೪೬ ದಿನಗಳ ಹೋರಟದ ಪ್ರತಿಫಲ ನಮ್ಮ ವರಿಷ್ಠರು ಸ್ಥಳಕ್ಕೆ ಬಂದು ವಿಧಾನ ಸಭೆಯಲ್ಲಿ ನೀರಾವರಿ ಕುರಿತು ಗಮನ ಸೇಳೆದ ಪ್ರಯುಕ್ತ ನೀರಾವರಿಯಾಗಿದೆ. ಈ ಭಾಗದ ನೀರಾವರಿಗೆ ಅಂದಿನ ಪ್ರಧಾನ ಮಂತ್ರಿ ಮಣ್ಣಿನ ಮಗ ದೇವೆಗೌಡರೆ ಪ್ರಮುಖ ಕಾರಣ ಹೀಗಾಗಿ ಜೆಡಿಎಸ್ ಪಕ್ಷದ ಮೇಲೆ ನಿಮ್ಮೇಲ್ಲರ ಆರ್ಶೀವಾದ ಇರಲಿ ಎಂದರು.

ಅಯೂಬ ನಾಟೀಕಾರ,ಶ್ರೀಶೈಲಗೌಡ ಬಿರಾದಾರ, ಬಾಳು ರಾಠೋಡ ಮಾತನಾಡಿದರು.

ಸಿದ್ದು ಡಂಗಾ, ಮಹಿಬೂಬ ಬೇನೂರ,ಶ್ರೀಶೈಲಗೌಡ ಪಾಟೀಲ, ನಾನಾಗೌಡ ಪಾಟೀಲ, ಶೀಮಂತ ತಾಂಬೆ, ಮಾಳಪ್ಪ ಪೂಜಾರಿ, ಹಣಮಂತ ಅಗಸರ, ಭೀಮು ಹೂಗಾರ, ಧರ್ಮಣ್ಣಾ ತಾಂಬೆ, ನೀಯಾಝ ಅಗರಖೇಡ, ಪೀರಪ್ಪ ಹೂಟಗಾರ, ತಮ್ಮನಗೌಡ ಬಿರಾದಾರ, ಮಲ್ಲು ಬಳಗಾರಿ, ಫಜಲ ಮುಲ್ಲಾ, ಶಾಂತಯ್ಯಾ ಪತ್ರಿಮಠ ಸೇರಿದಂತೆ ಅನೇಕರಿದ್ದರು.