ಕೊಲ್ಹಾರ: ಜಂಗಮ ಸಮಾಜದ ಸಾಂವಿಧಾನಿಕ ಹಕ್ಕಾದ ಬೇಡಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದಿಂದ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡ ಚಂದ್ರಶೇಖರಯ್ಯ ಗಣಕುಮಾರ ಮಾತನಾಡುತ್ತಾ ಬೇಡಜಂಗಮರ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಸಮಸ್ಯೆಯನ್ನು ಶೀಘ್ರ ಇತ್ಯರ್ಥ ಪಡಿಸಬೇಕು ಎಂದು ಒತ್ತಾಯಿಸಿದರು. ನಮ್ಮ ನಾಯಕರಾದ ಡಿ.ಬಿ ಹಿರೇಮಠ ಸತ್ಯ ಪ್ರತಿಪಾದನ ಸತ್ಯಾಗ್ರಹ ಮಾಡುತ್ತಿದ್ದಾರೆ ಸಂವಿಧಾನ ನಮಗೆ ನೀಡಿರುವ ಹಕ್ಕನ್ನು ನಾವು ಕೇಳುತ್ತಿದ್ದೆವೆ ಸರಕಾರ ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸ ಬೇಕು ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಬಾರದು ಎಂದು ಹೇಳಿದರು. ಪಂಚಾಕ್ಷರಿ ಹಿರೇಮಠ ಇತರರು ಮಾತನಾಡಿದರು.
ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ತಾಲೂಕ ಅಧ್ಯಕ್ಷ ಸಿ.ಎಂ ಗಣಕುಮಾರ್, ಹಿರೇಮಠದ ಪಡೆದಯ್ಯ ಹಿರೇಮಠ ಡಾ॥ವಿಶ್ವನಾಥ್ ಕಾಕಂಡಕಿಮಠ, ಎನ್.ಎಂ ಹಿರೇಮಠ, ಬಸಯ್ಯ ಗಣಾಚಾರಿ, ಬಿ.ಕೆ ಕಂಬಿ, ಆರ್.ಬಿ ಮಠ, ಎಸ್.ಎಂ ಮಠಪತಿ, ಪಂಚಾಕ್ಷರಯ್ಯ ಹಿರೇಮಠ, ಶಂಕ್ರಯ್ಯ ಚಿಕ್ಕಮಠ, ಷಣ್ಮುಕಯ್ಯ ಹಿರೇಮಠ, ರುದ್ರಯ್ಯ ಮಠಪತಿ, ಗುರುಸಿದ್ದಯ್ಯ ಪರಡಿಮಠ, ರಮೇಶ್ ಹಿರೇಮಠ ಸೇರಿದಂತೆ ತಾಲೂಕಿನ ಘರಸಂಗಿ ಮಲಗಾನ ಮುಳವಾಡ ವಸತಿ ಬಳುತಿ ಹಾಗೂ ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.