Thursday, 21st November 2024

Tirupati Laddu: ತಿರುಪತಿ ಲಾಡಿನಲ್ಲಿ ದನದ ಕೊಬ್ಬು- ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ: ಸಿಟಿ ರವಿ

ct ravi tirupati laddu

ಚಿಕ್ಕಮಗಳೂರು: ತಿರುಪತಿ ಶ್ರೀನಿವಾಸ (Tirupti Tirumala Devasthanam) ದೇವರ ಪ್ರಸಾದಕ್ಕೆ (Tirupati laddu) ಪ್ರಾಣಿ ಕೊಬ್ಬು (beef fat) ಬಳಕೆಯ ವಿಚಾರ ಕೇಳಿ ಆಶ್ಚರ್ಯ, ಆಘಾತವಾಗಿದೆ. ಇದು ಕೋಟ್ಯಂತರ ಭಕ್ತರ ಭಾವನೆಗಳಿಗೆ ಮಾಡಿದ ಅಪಚಾರ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ಹೇಳಿದ್ದಾರೆ.

ತಿರುಪತಿ ಕೋಟ್ಯಾಂತರ ಭಕ್ತರ ಶ್ರದ್ಧೆಯ ಧಾರ್ಮಿಕ ಸ್ಥಳ. ಸಾವಿರಾರು ವರ್ಷಗಳಿಂದ ಕೋಟ್ಯಂತರ ಭಕ್ತರಿಗೆ ಬಾಲಾಜಿ ಜೊತೆ ಅವಿನಾಭಾವ ಸಂಬಂಧವಿದೆ. ವಾರಕ್ಕೊಮ್ಮೆ ಬಾಲಾಜಿ ದರ್ಶನಕ್ಕೆ ಹೋಗುವವರು ಇದ್ದಾರೆ. ತಿರುಪತಿ ಲಡ್ಡು ಪ್ರಸಾದಕ್ಕೆ ಇರುವ ಭಾವನೆಗಳೇ ಬೇರೆ. ಅದು ಕೋಟ್ಯಾಂತರ ಭಕ್ತರಿಗೆ ಕೇವಲ ಸಿಹಿ ಅಲ್ಲ. ಭಕ್ತಿಯ ಪ್ರಸಾದ. ಇಂತಹ ಪ್ರಸಾದ ತಯಾರಿಕೆಗೆ ಕರ್ನಾಟಕದಿಂದಲೇ ನಂದಿನಿ ತುಪ್ಪ ಸರಬರಾಜಾಗುವುದನ್ನ ಕೇಳಿದ್ದೇನೆ. ಆದರೆ ಈಗ ಪ್ರಸಾದಕ್ಕೆ ಪ್ರಾಣಿಯ ಕೊಬ್ಬು ಬಳಕೆ ಎಂಬ ಮಾತು ಆಶ್ಚರ್ಯ,ಆಘಾತ ಎರಡೂ ಆಗಿದೆ ಎಂದು ಅವರು ಆಘಾತ ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಈ ರೀತಿ ಮಾಡುವ ಯೋಚನೆಯಾದರೂ ಯಾರಿಗೆ ಬರುತ್ತದೆ? ಯಾರಿಗೆ ಗುತ್ತಿಗೆ ನೀಡಿದ್ದರು? ಎಲ್ಲವನ್ನೂ ಗಂಭೀರವಾಗಿ ತನಿಖೆ ನಡೆಸಬೇಕು. ಇದು ನಮ್ಮ ಭಾವನೆ, ನಂಬಿಕೆ, ಶ್ರದ್ಧೆಯ ಪ್ರಶ್ನೆ. ಅದಕ್ಕೆ ಧಕ್ಕೆಯಾಗಿದೆ ಎಂದು ಎಂದು ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌

ನಮ್ಮಿಂದ ತುಪ್ಪ ಖರೀದಿಸಿಲ್ಲ: ಕೆಎಂಎಫ್

ತಿರುಪತಿ ದೇವಸ್ಥಾನದ ಲಡ್ಡು (Tirupati Laddu) ಬಳಕೆಗೆ ನಮ್ಮಿಂದ ತುಪ್ಪ ಖರೀದಿಸಲಾಗುತ್ತಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮಿಂದ ಅವರು ತುಪ್ಪ ಖರೀದಿಸಿಲ್ಲ ಎಂದು ಕೆಎಂಎಫ್‌ (KMF) ಹೇಳಿಕೆ ನೀಡಿದೆ. ಆ ಮೂಲಕ, ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು (beef fat), ಮೀನಿನ ಎಣ್ಣೆ (fish fat) ಬೆರೆಸಲಾಗಿದೆ ಎಂಬ ಆರೋಪ ಇನ್ನಷ್ಟು ಗಟ್ಟಿಯಾಗುವುದಕ್ಕೆ ಪೂರಕ ಸಾಕ್ಷ್ಯ ದೊರೆತಿದೆ.

ಕೋಟ್ಯಂತರ ಭಕ್ತರು ಭೇಟಿ ನೀಡುವ ತಿರುಪತಿ ತಿರುಮಲ ದೇವಸ್ಥಾನದಲ್ಲಿ (Tirupati Tirumala Devasthanam) ನೀಡಲಾಗುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು (Beef Fat) ಮತ್ತು ಮೀನಿನ ಎಣ್ಣೆ (Fish Fat) ಬೆರೆಸಲಾಗಿದೆ ಎಂಬ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.

ಇದನ್ನೂ ಓದಿ: Tirupati Laddu: ತಿರುಪತಿ ಲಡ್ಡುವಿನಲ್ಲಿ ಬೀಫ್‌ ಕೊಬ್ಬು ಬಳಕೆ; ಕೆಎಂಎಫ್‌ ಸ್ಪಷ್ಟನೆಯೂ ಶಾಕಿಂಗ್