Thursday, 7th November 2024

Crime News: ಮಹಿಳೆಯರ ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟಿದ್ದ ಆಸ್ಪತ್ರೆ ವಾರ್ಡ್‌ಬಾಯ್‌ ಸೆರೆ

washroom

ಬೆಂಗಳೂರು: ಆಸ್ಪತ್ರೆಯ ಮಹಿಳೆಯರ ಶೌಚಾಲಯದಲ್ಲಿ (Ladies washroom) ಮೊಬೈಲ್‌ ಕ್ಯಾಮರಾ (mobile camera) ಇಟ್ಟಿದ್ದ ವಾರ್ಡ್​ಬಾಯ್​ನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ (Bengaluru crime news) ನಡೆದಿದೆ.

ಅಕ್ಟೋಬರ್ 31ರಂದು ಯಲ್ಲಾಲಿಂಗ ಎಂಬಾತನನ್ನು ಬಂಧಿಸಲಾಗಿದ್ದು, ಆತ ಕಲಬುರಗಿ ಮೂಲದವನು ಎನ್ನುವ ಮಾಹಿತಿ ಲಭ್ಯವಾಗಿದೆ. ತಿಲಕನಗರದ ಆಸ್ಪತ್ರೆಯಲ್ಲಿ ವಾರ್ಡ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಪೊಲೀಸ್ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ, ಅಕ್ಟೋಬರ್ 31 ರಂದು ಬೆಳಗ್ಗೆ 8.20ರ ಸುಮಾರಿಗೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ವಾಶ್​ರೂಂನ ಕಿಟಕಿಯ ಮೇಲೆ ಮೊಬೈಲ್​ ಇರುವುದನ್ನು ಕಂಡರು. ಅದನ್ನು ಅನ್​ಲಾಕ್ ಮಾಡಿದ ಬಳಿಕ ಹಲವು ರೆಕಾರ್ಡಿಂಗ್ಸ್​ಗಳನ್ನು ನೋಡಿ ಗಾಬರಿಗೊಂಡಿದ್ದರು.

ಅವಳು ಹೊರಗೆ ಬಂದಾಗ ಯಲ್ಲಾಲಿಂಗ ಆ ಫೋನ್​ ನನ್ನದು, ನನಗೆ ವಾಪಸ್ ಕೊಡು ಎಂದು ಕೇಳಿದ್ದಾನೆ. ಆದರೆ ಸಿಬ್ಬಂದಿ ನಿರಾಕರಿಸಿದಾಗ ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ತಿಲಕನಗರ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಕಾಯ್ದೆಯ ಸೆಕ್ಷನ್ 77 (ವೋಯರಿಸಂ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಈ ಕುರಿತು ಕೇಳಿದಾಗ ತಪ್ಪಾಗಿ ತನ್ನ ಮೊಬೈಲ್​ನ್ನು ವಾಶ್​ರೂಂನಲ್ಲಿ ಇರಿಸಿರುವುದಾಗಿ ತಿಳಿಸಿದ್ದಾನೆ.

ಆದರೆ ಅಲ್ಲಿರುವ ರೆಕಾರ್ಡಿಂಗ್​ಗಳು ವಿಭಿನ್ನ ಕಥೆಯನ್ನೇ ಹೇಳುತ್ತಿವೆ. ಯಲ್ಲಾಲಿಂಗನಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಏತನ್ಮಧ್ಯೆ, ಆಸ್ಪತ್ರೆಯು ತನ್ನ ಲೈಂಗಿಕ ಕಿರುಕುಳ ತಡೆ (POSH) ಸಮಿತಿಯ ತನಿಖೆಯ ಬಾಕಿ ಇರುವವರೆಗೆ ಅವರನ್ನು ಅಮಾನತುಗೊಳಿಸಿದೆ.

ಇದನ್ನೂ ಓದಿ: Firecracker accident: ಡಬ್ಬದೊಳಗೆ ಪಟಾಕಿ ಹಚ್ಚಿ, ಸ್ನೇಹಿತನ ಬಲಿ ಪಡೆದ ಯುವಕರು; 6 ಮಂದಿ ಬಂಧನ